More

    ಮೊಬೈಲ್​​ ಚಾರ್ಜ್​​ಗೆ ಹಾಕಿ ಮಾತನಾಡುವಾಗ ಸ್ಫೋಟ: ಸ್ಥಳದಲ್ಲೇ ಪ್ರಾಣ ಬಿಟ್ಟ ವೃದ್ಧ

    ಮಧ್ಯಪ್ರದೇಶ: ಕೆಲವು ವಸ್ತುಗಳನ್ನು ಮುನ್ನೆಚ್ಚರಿಕೆಯಿಂದ ಬಳಸಬೇಕು. ಇಲ್ಲೊಬ್ಬ ವೃದ್ಧ ಅಜಾಗರೂಕತೆಯಿಂದ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ.

    ದಯಾರಾಮ್ ಬಾರೋಡ (68) ಮೃತ ವೃದ್ಧ. ಮೊಬೈಲ್​​ ಚಾರ್ಜ್​​ಗೆ ಹಾಕಿ ಮಾತನಾಡುತ್ತಿರುವಾಗ ಸ್ಫೋಟವಾಗಿದೆ. ಈ ಸ್ಫೋಟ ಎಷ್ಟು ಭಯಾನಕವಾಗಿತ್ತು ಎಂದರೆ, ದಯಾರಾಮ್ ತಲೆಯಿಂದ ಎದೆಯ ಭಾಗದವರೆಗೆ ದೇಹ ಛಿದ್ರ ಛಿದ್ರವಾಗಿದೆ. ಉಜ್ಜಯಿನಿಯಿಂದ 40 ಕಿಮೀ ದೂರದಲ್ಲಿರುವ ಬದ್‌ನಗರದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.

    ದಯಾರಾಮ್ ಬರೋದ್ ಅವರು ಮನೆಯಲ್ಲಿ ಚಾರ್ಜ್ ಆಗುತ್ತಿದ್ದ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಮೊಬೈಲ್​​ ಚಾರ್ಜ್​ ಹಾಕಿರುವುದರಿಂದ  ​ ಸ್ಫೋಟವಾಗಿದೆ. ಈ ಪರಿಣಾಮ ದಯಾರಾಮ್​​ ಅವರ ತಲೆಯಿಂದ ಎದೆವರೆಗೆ ದೇಹ ಸಂಪೂರ್ಣ ತುಂಡು ತುಂಡಾಗಿದೆ. ಪವರ್ ಪಾಯಿಂಟ್ ಕೂಡ ಸಂಪೂರ್ಣ ಸುಟ್ಟು ಕರಕಲಾಗಿದೆ.

    ಇದನ್ನೂ ಓದಿ: ಬೇರೊಬ್ಬಳೊಂದಿಗೆ ಓಡಿ ಹೋದ ಪತಿ; ಗಂಡನ ಜತೆಗೆ ಹೋದವಳ ಪತಿಯನ್ನೇ ವಿವಾಹವಾದ ಮಹಿಳೆ

    ಸ್ಥಳದಿಂದ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಒಂದು ಫೋನ್ ಮಾತ್ರ ಕೆಟ್ಟದಾಗಿ ಹಾಳಾಗಿರುವುದು ಕಂಡುಬಂದಿದೆ. ಪೊಲೀಸರು ಮೊಬೈಲ್‌ನ ತುಣುಕುಗಳನ್ನು ವಶಪಡಿಸಿಕೊಂಡು ತನಿಖೆಗೆ ಕಳುಹಿಸಿದ್ದಾರೆ. ಚಾರ್ಜಿಂಗ್‌ನಲ್ಲಿ ಮೊಬೈಲ್‌ನೊಂದಿಗೆ ಮಾತನಾಡುತ್ತಿದ್ದ ವೇಳೆ ಮೊಬೈಲ್ ಸ್ಫೋಟಗೊಂಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಎರಡು ರೈಲುಗಳು ಮುಖಾಮುಖಿ ಡಿಕ್ಕಿ; 26 ಮಂದಿ ಮೃತ್ಯು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts