More

    ಕೈಲಾಸದಲ್ಲಿ ಉಚಿತ ಇ-ಪೌರತ್ವಕ್ಕಾಗಿ ಜನರನ್ನು ಆಹ್ವಾನಿಸಿದ ನಿತ್ಯಾನಂದ!

    ಜೀನೆವಾ: ಹಲವು ಆರೋಪಗಳನ್ನು ಹೊತ್ತು ವಿದೇಶಕ್ಕೆ ಪರಾರಿಯಾಗಿರುವ ದೇವಮಾನವ ನಿತ್ಯಾನಂದ, ಕೈಲಾಸ ದೇಶದ ಇ-ಪೌರತ್ವ ಹಾಗೂ ಇ-ವೀಸಾಗೆ ಅರ್ಜಿ ಆಹ್ವಾನಿಸಿದ್ದಾನೆ.

    ಈ ಕುರಿತು ಟ್ವೀಟ್‌ ಮಾಡಿರುವ ನಿತ್ಯಾನಂದ ತನ್ನದೇ ಆದ ದೇಶದಲ್ಲಿ ವಿವಿಧ ಸವಲತ್ತುಗಳನ್ನು ನೀಡಲಾಗುತ್ತದೆ ಎಂದು ಆಹ್ವಾನವನ್ನೂ ನೀಡಿದ್ದಾನೆ.  ಕೈಲಾಸ ಎಂಬ ವೆಬ್‌ಸೈಟ್‌ನಲ್ಲಿ ಆತ ಇ-ಪೌರತ್ವ ಹಾಗೂ ಇ-ವೀಸಾಗೆ ಆಹ್ವಾನಿಸಿದ ವಿವರಗಳಿವೆ. ಇ-ಪೌರತ್ವ ಪಡೆದವರಿಗೆ ನಿತ್ಯಾನಂದನ ದೇಶದಲ್ಲಿ ವಿಶೇಷ ಸವಲತ್ತುಗಳು ಸಿಗುತ್ತವಂತೆ. ಹಾಗಂತ ಆತ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದ್ದಾನೆ.

    ವಿಶೇಷ ಹೋಮ ಹಾಗೂ ಅಧ್ಯಾತ್ಮಿಕ ಸೇವೆಗಳು, ನಿತ್ಯಾನಂದನ ವಿಶೇಷ ದರ್ಶನ ಹಾಗೂ ಆಶೀರ್ವಾದ, ದೇಶದಲ್ಲಿ ಸಂಸ್ಕೃತ ಮಂತ್ರಗಳ ಕಲಿಕಾ ಸೌಲಭ್ಯ, ಆಧ್ಯಾತ್ಮಿಕ ಮನೋಭಾವ ಬೆಳೆಸಿಕೊಳ್ಳಲು ಪೂರಕ ವಾತಾವರಣ- ಇತ್ಯಾದಿಗಳು ಕೈಲಾಸ ದೇಶದಲ್ಲಿ ದೊರಕುತ್ತವಂತೆ. ಕೈಲಾಸ ದೇಶ ಎಲ್ಲಿದೆ ಎಂಬುದು ನಿಗೂಢವಾಗಿದ್ದು, ಈಕ್ವೆಡಾರ್‌ ಬಳಿ ಇರಬಹುದು ಎನ್ನಲಾಗಿದೆ.

    ಇದನ್ನೂ ಓದಿ: ಸ್ಪುಟ್ನಿಕ್‌ ಕೋವಿಡ್‌ ಲಸಿಕೆ ಕಂಡು ಹಿಡಿದಿದ್ದ ರಷ್ಯಾ ವಿಜ್ಞಾನಿಯನ್ನು ಬೆಲ್ಟ್‌ನಿಂದ ಕತ್ತು ಹಿಸುಕಿ ಮುಗಿಸಿದ

    ಇತ್ತೀಚೆಗೆ ವಿಶ್ವಸಂಸ್ಥೆಯ ಸಭೆಯೊಂದರಲ್ಲಿ ನಿತ್ಯಾನಂದನ ಭಕ್ತರು ಎಂದು ಹೇಳಿಕೊಂಡ ಕೆಲವರು ಭಾಗವಹಿಸಿದ್ದರು. ಆಗ ತನ್ನ ಕೈಲಾಸ ದೇಶಕ್ಕೆ ಮಾನ್ಯತೆ ಸಿಕ್ಕಿದೆ ಎಂಬರ್ಥದಲ್ಲಿ ನಿತ್ಯಾನಂದ ಟ್ವೀಟ್‌ ಮಾಡಿದ್ದ. ಬಳಿಕ ಈತನ ಹೇಳಿಕೆಗಳನ್ನು ವಿಶ್ವಸಂಸ್ಥೆ ಸುಳ್ಳು ಎಂದು ತಳ್ಳಿಹಾಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts