More

    ನಿತ್ಯಾನಂದನ ‘ಕೈಲಾಸ’ದೊಂದಿಗೆ ಒಪ್ಪಂದ – ಅಧಿಕಾರಿ ವಜಾ – ಯಡವಟ್ಟಿಗೆ ವಿಷಾದ ವ್ಯಕ್ತಪಡಿಸಿದ ಪೆರಗ್ವೆ

    ಅಸೂನ್ಸಿಯಾನ್(ಪೆರಗ್ವೆ): ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ದೇಶಬಿಟ್ಟು ಪರಾರಿಯಾದ ನಿತ್ಯಾನಂದ ಸ್ವಾಮಿ, ಅದ್ಯಾವುದೋ ದ್ವೀಪ ಖರೀದಿಸಿ, ಅದನ್ನೇ ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ ಎಂದು ಘೋಷಿಸಿಕೊಂಡು ಸುದ್ದಿಯಾಗಿದ್ದರು. ಆತನ ಅನುಯಾಯಿಗಳು ವಿಶ್ವಸಂಸ್ಥೆಯಲ್ಲಿ ಭಾರತವನ್ನು ನಿಂಧಿಸಿದ್ದು, ತನ್ನ ದೇಶಕ್ಕೆ ಅಧಿಕಾರಿಗಳನ್ನು ನೇಮಿಸಿಕೊಂಡಿದ್ದು ಎಲ್ಲವೂ ಹಳೆಯ ಸುದ್ದಿ. ಆದರೆ ಈ ಕೈಲಾಸ ದೇಶವೂ ಇದೆ ಎಂದು ನಂಬಿ ಮೋಸ ಹೋದ ಪೆರಗ್ವೆಯ ಹಿರಿಯ ಸರ್ಕಾರಿ ಅಧಿಕಾರಿ ನಿತ್ಯಾನಂದನ ಪ್ರತಿನಿಧಿಗಳ ಜತೆ “ಸಹಕಾರ ಒಪ್ಪಂದ”ಕ್ಕೆ ಸಹಿ ಹಾಕಿ ಅಧಿಕಾರ ಕಳೆದುಕೊಂಡಿದ್ದಾರೆ. ಇದರೊಂದಿಗೆ ನಿತ್ಯಾನಂದ ಸ್ವಾಮಿ ಭಕ್ತರು ವಿದೇಶಿ ಜನರನ್ನೂ ಮೂರ್ಖರನ್ನಾಗಿಸುವ ಮೂಲಕ ಮತ್ತೊಮ್ಮೆ ಜಗತ್ತಿನಾದ್ಯಂತ ಸುದ್ದಿಯಾಗಿದ್ದಾರೆ.

    ಇದನ್ನೂ ಓದಿ: ತಿಮ್ಮಪ್ಪನ ದರ್ಶನ ಪಡೆದ ಚಂದ್ರಬಾಬು ನಾಯ್ಡು – ಧರ್ಮ ರಕ್ಷಣೆಗೆ ಪ್ರಾರ್ಥಿಸಿರುವೆ ಎಂದ ಮಾಜಿ ಮುಖ್ಯಮಂತ್ರಿ
    ದಕ್ಷಿಣ ಅಮೆರಿಕದ ದ್ವೀಪವಾದ ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ದಿಂದ ಬಂದಿದ್ದೇವೆ ಎಂದು ಹೇಳಿಕೊಂಡವರ ಮಾತಿಗೆ ಮರುಳಾಗಿ ಒಪ್ಪಂದಕ್ಕೆ ಸಹಿ ಹಾಕಿ ಕೆಲಸ ಕಳೆದುಕೊಂಡಿರುವುದಾಗಿ ಪೆರಗ್ವೆ ಹಿರಿಯ ಕೃಷಿ ಅಧಿಕಾರಿ ಅರ್ನಾಲ್ಡೋ ಚಾಮೊರೊ ಸುದ್ದಿಗಾರರಿಗೆ ಗುರುವಾರ ತಿಳಿಸಿದರು.

    “ಕೈಲಾಸದ ಅಧಿಕಾರಿಗಳು ಎಂದು ಹೇಳಿಕೊಂಡವರು ನಮ್ಮಲ್ಲಿಗೆ ಬಂದು, ಪೆರಗ್ವೆಗೆ ಸಹಾಯ ಮಾಡುವ ಇಂಗಿತ ವ್ಯಕ್ತಪಡಿಸಿದರು. ಈ ಸಂಬಂಧ ಹಲವು ಯೋಜನೆಗಳನ್ನು ಪ್ರಸ್ತುತಪಡಿಸಿದರು. ನಾವು ಅವರ ಮಾತನ್ನು ಆಲಿಸಿದ್ದಷ್ಟೇ ಅಲ್ಲ, ಒಪ್ಪಿಕೊಂಡೆವು” ಎಂದು ಅರ್ನಾಲ್ಡೊ ಒಪ್ಪಿಕೊಂಡಿದ್ದಾರೆ. ಈ ನಕಲಿ ಅಧಿಕಾರಿಗಳು ಕೃಷಿ ಸಚಿವ ಕಾರ್ಲೊಸ್ ಗಿಮೆನೆಜ್‌ರನ್ನು ಕೂಡ ಭೇಟಿ ಮಾಡಿದ್ದರು ಎಂದು ಅವರು ತಿಳಿಸಿದ್ದಾರೆ.

    ಒಪ್ಪಂದದಲ್ಲಿ ಏನಿದೆ?: ಕೈಲಾಸ ಮತ್ತು ಪೆರಗ್ವೆಯ ನಡುವೆ ರಾಜತಾಂತ್ರಿಕ ಸಂಬಂಧ ಬೆಳೆಸುವ ಉದ್ದೇಶವನ್ನು ಎರಡೂ ನಿಯೋಗಗಳು ಸಹಿ ಹಾಕಿರುವ ಒಡಂಬಡಿಕೆಯಲ್ಲಿ ಪ್ರತಿಪಾದಿಸಲಾಗಿದೆ. ಸಚಿವಾಲಯದ ಲೆಟರ್ ಹೆಡ್ ಮತ್ತು ಅಧಿಕೃತ ಸೀಲ್ ಹೊಂದಿರುವ ದಾಖಲೆಯಲ್ಲಿ ಅರ್ನಾಲ್ಡೊ ಅವರು, “ಗೌರವಾನ್ವಿತ ನಿತ್ಯಾನಂದ ಪರಮಶಿವನ್, ಯುನೈಟೆಡ್ ಸ್ಟೇಟ್ ಆಫ್ ಕೈಲಾಸದ ಸಾರ್ವಭೌಮ” ಎಂದು ನಿತ್ಯಾನಂದನನ್ನು ಸಂಬೋಧಿಸಿದ್ದಾರೆ. “ಹಿಂದೂಯಿಸಂ, ಮನುಕುಲ ಹಾಗೂ ರಿಪಬ್ಲಿಕ್ ಆಫ್ ಪೆರಗ್ವೆಗೆ ನಿತ್ಯಾನಂದ ನೀಡಿರುವ ಕೊಡುಗೆಗಳನ್ನು” ಅವರು ಶ್ಲಾಘಿಸಿದ್ದಾರೆ.
    ಪೆರಗ್ವೆ ಸರ್ಕಾರವು ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಜತೆ ರಾಜತಾಂತ್ರಿಕ ಸಂಬಂಧ ಸ್ಥಾಪನೆಯನ್ನು ಸಕ್ರಿಯವಾಗಿ ಅನ್ವೇಷಿಸುತ್ತದೆ. ವಿಶ್ವಸಂಸ್ಥೆ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಸಂಘಟನೆಗಳಿಂದ ಸಾರ್ವಭೌಮ ರಾಷ್ಟ್ರವೆಂದು ಅದನ್ನು ಗುರುತಿಸಲು ತನ್ನ ಒಪ್ಪಿಗೆಯನ್ನು ಬೆಂಬಲಿಸುತ್ತದೆ” ಎಂದು ಒಡಂಬಡಿಕೆಯಲ್ಲಿ ಹೇಳಲಾಗಿದೆ.

    ಅಧಿಕೃತವಲ್ಲ ಎಂದ ಸಚಿವಾಲಯ: ಒಪ್ಪಂದದ ಬಳಿಕ ‘ಪರಮಶಿವನ್’ ಎಂಬಾತ ತನ್ನ ದೇಶದಲ್ಲಿ ಎಸಗಿದ ಅಪರಾಧ ಕೃತ್ಯಗಳಿಗಾಗಿ ಬೇಕಿರುವ ಭಾರತದ ಪ್ರಜೆ ಎಂದು ಪೆರಗ್ವೆಯ ಮಾಧ್ಯಮಗಳು ವರದಿ ಮಾಡಿದವು. ಇದರಿಂದ ಎಚ್ಚೆತ್ತ ಪೆರಗ್ವೆ ಸಚಿವಾಲಯ ಲೋಪಕ್ಕೆ ವಿಷಾದ ವ್ಯಕ್ತಪಡಿಸುವುದಾಗಿಯೂ, ಒಡಂಬಡಿಕೆಯನ್ನು ಅಧಿಕೃತ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿದೆ. ಅದು ಪೆರಗ್ವೆ ದೇಶದ ಯಾವುದೇ ಬದ್ಧತೆಗಳಿಗೆ ಒಳಪಟ್ಟಿಲ್ಲ ಎಂದು ತಿಳಿಸಿದೆ.

    ಈ ಹಿಂದೆ ನಿತ್ಯಾನಂದನ ಮಹಿಳಾ ಪ್ರತಿನಿಧಿಗಳು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿ, ಭಾರತದ ವಿರುದ್ಧ ಮಾತನಾಡಿದ್ದು ಸುದ್ದಿಯಾಗಿತ್ತು. ಕೈಲಾಸ ತನ್ನದೇ ಪಾಸ್‌ಪೋರ್ಟ್ ಮತ್ತು ರಿಸರ್ವ್ ಬ್ಯಾಂಕ್ ಹೊಂದಲಿದೆ ಎಂದು ‘ಕೈಲಾಸ’ದ ವೆಬ್‌ಸೈಟ್ ತಿಳಿಸಿತ್ತು.

    ಏನಿದು ಪಕಡವಾ ವಿವಾಹ?: ಗನ್​ ಪಾಯಿಂಟ್​ನಲ್ಲಿ ಶಿಕ್ಷಕನಿಗೆ ಬಲವಂತದ ಮದುವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts