More

    ಕ್ಷೀಣಿಸುತ್ತಿದೆ ವಲಸೆ ಹಕ್ಕಿಗಳ ಸಂಖ್ಯೆ

    ಕೊಳ್ಳೇಗಾಲ: ಕಾಲಕ್ರಮೇಣ ಕೆರೆಗಳಲ್ಲಿ ಹೆಚ್ಚುತ್ತಿರುವ ಹೂಳು, ಗಿಡಗಂಟಿ, ಕಲುಷಿತ ನೀರಿನಿಂದ ಪಕ್ಷಿ ತಾಣಗಳು ನಾಶ ಆಗುತ್ತಿದ್ದು ಕೊಳ್ಳೇಗಾಲದ ಕೆರೆಗಳಿಗೆ ವಲಸೆ ಪಕ್ಷಿಗಳ ಆಗಮನ ಇತ್ತೀಚೆಗೆ ಕ್ಷೀಣಿಸುತ್ತಿದೆ.

    ತಾಲೂಕು ವ್ಯಾಪ್ತಿಗೆ ಬರುವ ಸರಗೂರು ಕೆರೆ, ಪಾಪನಕೆರೆ, ದೊಡ್ಡರಂಗನಾಥ ಕೆರೆ ಹಾಗೂ ಪಟ್ಟಣದ ಚಿಕ್ಕರಂನಾಥಕೆರೆ, ಕೊಂಗಳಕೆರೆ ಇತರ ಕೆರೆಗಳಲ್ಲಿ ವರ್ಷದ ಬೇಸಿಗೆ ಆರಂಭ ಹಾಗೂ ಮಳೆಗಾಲದಲ್ಲಿ ವಿದೇಶ ಸೇರಿದಂತೆ ಉತ್ತರ ಏಷ್ಯಾದ ಕಡೆಗಳಿಂದ ಹಲವು ಪ್ರಭೇದದ ಪಕ್ಷಿಗಳು ಸಾಮಾನ್ಯವಾಗಿ ವಲಸೆ ಬರುತ್ತಿದ್ದವು.

    ರಷ್ಯಾ, ಸೈಬೀರಿಯಾ, ಮಂಗೋಲಿಯಾದಲ್ಲಿ ಅತೀವ ಚಳಿಯದಾದರೆ ಅದನ್ನು ತಡೆಯಲಾಗದೆ ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಸ್ಪೂನ್ ಬಿಲ್, ಪೆಲಿಕಾನ್ಸ್, ಬಾರ್ ಹೆಡ್ಡೆಡ್ ಗೂಸ್, ಸೈಬಿರಿಯನ್ ಕ್ರೈನ್, ಗಾಡ್ವಿಟ್, ಪ್ಲೇಮಿಂಗೋ ಪಕ್ಷಿಗಳು ದಕ್ಷಿಣ ಕರ್ನಾಟಕದ ಕಡೆಗೆ ಧಾವಿಸುತ್ತಿದ್ದವು. ಒಮ್ಮೆ ಬಂದರೆ ಮಾರ್ಚ್ ತಿಂಗಳವರೆಗೂ ಇಲ್ಲೇ ವಾಸವಿರುತ್ತಿದ್ದವು.

    ಅದರಂತೆ, ಕಳೆದ ಎರಡ್ಮೂರು ವರ್ಷಗಳ ಹಿಂದೆಯೇ, ಪಾಪನಕೆರೆ, ಚಿಕ್ಕರಂಗನಾಥ ಕೆರೆ, ಸರಗೂರು ಕೆರೆಗಳಲ್ಲಿ ಸೈಬಿರಿಯಾದಿಂದ ಬಂದ ಕೆಲ ಪ್ರಭೇದದ ಪಕ್ಷಿಗಳು ಉಳಿದುಕೊಳ್ಳುತ್ತಿದ್ದವು. ಕೆರೆಯಲ್ಲಿ ಸಿಗುವ ಮೀನು, ಹುಳ ಇನ್ನಿತರ ಆಹಾರ ಸೇವಿಸಿ ಸಂತಾನೋತ್ಪತಿಯಲ್ಲಿ ತೊಡಗಿ ಮರಿಗಳಿಗೆ ರೆಕ್ಕೆ ಬಂದು ಹಾರುವ ಸಾಮರ್ಥ್ಯ ಬಂದ ಬಳಿಕ ವಲಸೆ ಹೋಗುತ್ತಿದ್ದವು.

    ಕೆರೆಗಳ ರಕ್ಷಣೆ ಆಗಬೇಕಿದೆ: ಆಧುನಿಕತೆಗೆ ಮಾನವ ಹತ್ತಿರವಾಗುತ್ತಿದಂತೆ ಸುತ್ತಮುತ್ತಲ ಪರಿಸರ ಮೂಲ ವ್ಯವಸ್ಥೆಯನ್ನು ಕಳೆದುಕೊಳ್ಳುತ್ತಿದೆ. ಇವೆಲ್ಲದರ ಕಾರಣ, ಕೆರೆ-ಕಟ್ಟೆಗಳು ಇಂದು ಶೋಚನೀತ ಸ್ಥಿತಿಗೆ ತಲುಪಿವೆ. ವಲಸೆ ಪಕ್ಷಿಗಳಿಗೆ ಇದು ಮಾರಕವಾಗಿದೆ. ಈ ನಿಟ್ಟಿನಲ್ಲಿ ಕೆರೆ ಸಂರಕ್ಷಣೆ ಹಾಗೂ ಪಕ್ಷಿಗಳ ತಾಣ ರಕ್ಷಣೆ ಆಗಬೇಕಿದೆ.

    ನಮ್ಮ ಭಾರತದ ಬ್ಲ್ಯಾಕ್ ಹೆಡ್ಡೆಡ್ ಐಬಿಸ್, ಲಿಟಲ್ ಎಗ್ರೇಟ್, ಪೇಟೆಂಡ್ ಸ್ಟಾರ್ಕ್ ಇತರ ಪ್ರಭೇದದ ಪಕ್ಷಿಗಳು ನೂರಾರು ಸಂಖ್ಯೆಯಲ್ಲಿ ಪ್ರತಿವರ್ಷ ಕೊಳ್ಳೇಗಾಲದ ಕೆರೆಗಳಿಗೆ ಧಾವಿಸುತ್ತಿದ್ದವು. ಆದರೆ, ಈ ವರ್ಷ ಕೊಳ್ಳೇಗಾಲದ ಚಿಕ್ಕರಂಗನಾಥ ಕೆರೆಯಲ್ಲಿ ಈ ಮೂರು ಪ್ರಭೇದದ ಪಕ್ಷಿಗಳು ಬೆರಳಣಿಕೆಯಷ್ಟು ಮಾತ್ರ ಕಾಣಿಸಿಕೊಂಡಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts