More

    ತಿಮ್ಮಪ್ಪನ ದರ್ಶನ ಪಡೆದ ಚಂದ್ರಬಾಬು ನಾಯ್ಡು – ಧರ್ಮ ರಕ್ಷಣೆಗೆ ಪ್ರಾರ್ಥಿಸಿರುವೆ ಎಂದ ಮಾಜಿ ಮುಖ್ಯಮಂತ್ರಿ

    ತಿರುಪತಿ: ಟಿಡಿಪಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿರುಮಲೆಯ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು.
    ಇದಕ್ಕೂ ಮುನ್ನ ಪತ್ನಿ ಭುವನೇಶ್ವರಿ ಅವರೊಂದಿಗೆ ಆಗಮಿಸಿದ ಅವರನ್ನು ಟಿಟಿಡಿ ಅಧಿಕಾರಿಗಳು ದರ್ಶನಕ್ಕೆ ತೆರಳುವ ವೈಕುಂಠಂ ಕಾಂಪ್ಲೆಕ್ಸ್​ ಆವರಣದಲ್ಲಿ ಸ್ವಾಗತಿಸಿ ದರ್ಶನಕ್ಕೆ ವ್ಯವಸ್ಥೆ ಮಾಡಿದರು.

    ಇದನ್ನೂ ಓದಿ: ಡೆಸ್ಟಿನೇಷನ್​ ವೆಡ್ಡಿಂಗ್​ ಭಾರತದಲ್ಲೇ ಹೆಚ್ಚು ಜನಪ್ರಿಯ; ದೇಶದಲ್ಲಿವೆ ಸಾಕಷ್ಟು ಹಾಟ್​ಸ್ಪಾಟ್ಸ್​
    ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನದ ನಂತರ ರಂಗನಾಯಕುಲ ಮಂಟಪದಲ್ಲಿ ಚಂದ್ರಬಾಬು ನಾಯ್ಡು ದಂಪತಿಗೆ ಅರ್ಚಕರು ವೇದಾಶೀರ್ವಾದ ಪಠಿಸಿದರು. ನಂತರ ಅವರಿಗೆ ಸ್ವಾಮಿಯ ತೀರ್ಥ, ಪ್ರಸಾದ ಹಸ್ತಾಂತರಿಸಲಾಯಿತು. ಚಂದ್ರಬಾಬು ಅವರೊಂದಿಗೆ ಮಾಜಿ ಸಚಿವ ಅಮರನಾಥ ರೆಡ್ಡಿ ಸೇರಿದಂತೆ ಹಲವು ನಾಯಕರು ಇದ್ದರು.

    ಸ್ವಾಮಿಯ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಿರುಪತಿಯಿಂದ ತಿರುಮಲೆ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಬರುವ ಅಲಿಪಿರಿಯಲ್ಲಿ ನಕ್ಸಲರು ಬಾಂಬ್​ ದಾಳಿ ನಡೆಸಿದಾಗ ಶ್ರೀಸ್ವಾಮಿಯೇ ರಕ್ಷಿಸಿದ್ದಾರೆ ಎಂದು ಹೇಳಿದರು.

    “ನಾನು ಜನರ ಸೇವೆ ಮಾಡಲು ನನಗೆ ಶಕ್ತಿ ಮತ್ತು ಸಾಮರ್ಥ್ಯವನ್ನು ನೀಡುವಂತೆ ಭಗವಂತನಲ್ಲಿ ಬೇಡಿಕೊಂಡಿದ್ದೇನೆ. ನಾನು ಕಷ್ಟದಲ್ಲಿದ್ದಾಗ ಭಗವಂತನನ್ನು ಪ್ರಾರ್ಥಿಸುತ್ತೇನೆ. ನಾನು ಧರ್ಮವನ್ನು ರಕ್ಷಿಸಲು ಪ್ರಾರ್ಥಿಸಿದ್ದೇನೆ. ಭಾರತ ವಿಶ್ವದ ಅಗ್ರಸ್ಥಾನದಲ್ಲಿರಬೇಕು, ಉಭಯ ತೆಲುಗು ರಾಜ್ಯಗಳು ವಿಶ್ವದಲ್ಲೇ ನಂಬರ್ ಒನ್ ಆಗಬೇಕು ಎಂದು ಬಯಸಿದ್ದೆನೆ” ಎಂದು ಚಂದ್ರಬಾಬು ತಿಳಿಸಿದರು.

    ಆಂಧ್ರದಲ್ಲಿ ಹಣಾಹಣಿಯಿರುವ ಟಿಡಿಪಿ ಮತ್ತು ವೈಎಸ್​ಆರ್​ ಪಕ್ಷಗಳು ತೆಲಂಗಾಣ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಆಂಧ್ರದಲ್ಲಿ ಟಿಡಿಪಿ ವಿರೋಧ ಪಕ್ಷವಾಗಿದ್ದು, ಚಂದ್ರಬಾಬು ನಾಯ್ಡು ಇತ್ತೀಚೆಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು.

    ಓಡಿದರೂ ಬಿಡದೆ ಪೇದೆ ಮೇಲೆ ಸಿಐ ಲಾಠಿ ಚಾರ್ಜ್ – ಬೆಚ್ಚಿಬಿದ್ದ ಮತದಾರರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts