More

    ಓಡಿದರೂ ಬಿಡದೆ ಪೇದೆ ಮೇಲೆ ಸಿಐ ಲಾಠಿ ಚಾರ್ಜ್ – ಬೆಚ್ಚಿಬಿದ್ದ ಮತದಾರರು!

    CI baton charge on constable
    ಹೈದರಾಬಾದ್: ತೆಲಂಗಾಣದಲ್ಲಿ ಗುರುವಾರ ಬಿರುಸಿನಿಂದ ಚುನಾವಣೆ ನಡೆಯಿತು. ಸುಗಮ ಮತದಾನಕ್ಕೆ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಹೀಗೆ ಆದಿಭಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ನಾಡೆರ್‌ಗುಲ್‌ನ ಮತಗಟ್ಟೆಗೆ ಸಹ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ಮತಗಟ್ಟೆ ಬಳಿ ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್ ಮೇಲೆ ಸಿಐ ಲಾಠಿ ಪ್ರಹಾರ ನಡೆಸಿರುವ ಘಟನೆ ನಡೆದಿದ್ದು, ಮತದಾರರು ಬೆಚ್ಚಿಬಿದ್ದಿದ್ದಾರೆ.

    ಇದನ್ನೂ ಓದಿ: ಮಂಗಳೂರು ಮೂಲದ ಟೆಕ್ಕಿಯ ಅಪರಾವತಾರ: ಮೊಬೈಲ್ ನೋಡಿ ಬೆಚ್ಚಿಬಿದ್ದ ಪ್ರೇಯಸಿ..ಇಷ್ಟಕ್ಕೂ ಅದರೊಳಗೆ ಏನಿತ್ತು?
    ಮಹೇಶ್ವರಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಂದೇಲಾ ಶ್ರೀರಾಮುಲು ಯಾದವ್ ನಾದರ್‌ಗುಲ್‌ನ ಜಿಲ್ಲಾ ಪರಿಷತ್ ಶಾಲೆಯ ಮತಗಟ್ಟೆಗೆ ತೆರಳಿದ್ದರು. ಆ ವೇಳೆ ಅವರಿಗೆ ಭದ್ರತೆಗೆಂದು ಎಆರ್ ಕಾನ್‌ಸ್ಟೆಬಲ್ ಒಬ್ಬರನ್ನು ನಿಯೋಜಿಸಲಾಗಿತ್ತು. ಆತ ಮತಗಟ್ಟೆಯ ಹೊರಗೆ ಕಾಯುತ್ತಿದ್ದರು.

    ಇದೇ ಸಮಯಕ್ಕೆ ಆದಿಭಟ್ಲ ಇನ್ಸ್ ಪೆಕ್ಟರ್ ರಘುವೀರರೆಡ್ಡಿ ಅವರು ಗಸ್ತು ವಾಹನದಲ್ಲಿ ಅಲ್ಲಿಗೆ ಬಂದರು. ಇನ್ಸ್ ಪೆಕ್ಟರ್ ರನ್ನು ನೋಡಿದ ಕಾನ್ ಸ್ಟೇಬಲ್ ಸೆಲ್ಯೂಟ್ ಹೊಡೆಯಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಸಿಐ ಪೇದೆಯನ್ನು ‘ಇಲ್ಲಿ ಏನು ಮಾಡುತ್ತಿದ್ದೀಯಾ’ ಎಂದು ಪ್ರಶ್ನಿಸಿದ್ದಾರೆ. ಪೇದೆ ಉತ್ತರ ಕೊಡುವಷ್ಟರಲ್ಲಿ ಆತನ ಮೇಲೆ ಸಿಐ ಲಾಠಿ ಪ್ರಹಾರ ಮಾಡಿದ್ದಾರೆ.

    ಮೇಲಧಿಕಾರಿ ಬಿದುರಿನ ಬೆತ್ತದಲ್ಲಿ ಬಾಸುಂಡೆ ಬರುವಂತೆ ಬಾರಿಸಿದ್ದರಿಂದ ವಿಚಲಿತರಾದ ಪೇದೆ ತಿರುಗಿ ಸಹ ನೋಡದೆ ಅಲ್ಲಿಂದ ಓಡಿ ಹೋಗಲು ಯತ್ನಿಸಿದ್ದಾರೆ. ಆದರೆ ಸಿಐ ಆತನನ್ನು ಅಟ್ಟಿಸಿಕೊಂಡು ಹೋಗಿ ಬೆತ್ತ ಮುರಿಯುವಂತೆ ಥಳಿಸಿದ್ದಾರೆ. ಇದನ್ನು ನೋಡಿದ ಮತದಾರರು ಪೊಲೀಸರು ಪೊಲೀಸರನ್ನೇ ಥಳಿಸುತ್ತಾರಲ್ಲ, ಸಧ್ಯ ಇವರ ಕೈಗೆ ಸಿಗದೆ ಬೇಗ ಮತಚಲಾಯಿಸಿ, ಇಲ್ಲಿಂದ ಹೋಗೋಣವೆಂದು ಲಗುಬಗೆಯಿಂದ ಮತಚಲಾಯಿಸಿ ಕಾಲ್ಕಿತ್ತರು.

    ಘಟಿಕೋತ್ಸವದಲ್ಲಿ MBBS ಪದವಿ ಪಡೆದ ಕೆಲವೇ ಕ್ಷಣಗಳಲ್ಲಿ ಹಾವು ಕಡಿದು ವಿದ್ಯಾರ್ಥಿ ದುರಂತ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts