More

    ಘಟಿಕೋತ್ಸವದಲ್ಲಿ MBBS ಪದವಿ ಪಡೆದ ಕೆಲವೇ ಕ್ಷಣಗಳಲ್ಲಿ ಹಾವು ಕಡಿದು ವಿದ್ಯಾರ್ಥಿ ದುರಂತ ಸಾವು!

    ತುಮಕೂರು: ಬುಧವಾರ (ನ.29) ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಎಂಬಿಬಿಎಸ್​ ಪದವಿ ಪಡೆದ ಕೆಲವೇ ಕ್ಷಣಗಳಲ್ಲಿ 21 ವರ್ಷದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಹಾವು ಕಡಿತದಿಂದ ದುರಂತ ಸಾವಿಗೀಡಾಗಿರುವ ಘಟನೆ ತುಮಕೂರು ಹೊರವಲಯದಲ್ಲಿ ನಡೆದಿದೆ.

    ಮೃತ ವಿದ್ಯಾರ್ಥಿಯನ್ನು ಆದಿತ್​ ಬಾಲಕೃಷ್ಣನ್​ ಎಂದು ಗುರುತಿಸಲಾಗಿದೆ. ಈತ ಕೇರಳದ ತ್ರಿಸ್ಸೂರು ಮೂಲದ ನಿವಾಸಿ. ಬೆಂಗಳೂರಿನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಮತ್ತು ತುಮಕೂರು ಹೊರ ವಲಯದಲ್ಲಿರುವ ಶ್ರೀ ಸಿದ್ಧಾರ್ಥ ಮೆಡಿಕಲ್​ ಕಾಲೇಜು (ಎಸ್​ಎಸ್​ಎಂಸಿ) ಅಲ್ಲಿ ಆದಿತ್​ ಎಂಬಿಬಿಎಸ್​ ವಿದ್ಯಾರ್ಥಿಯಾಗಿದ್ದರು. ಕಾಲೇಜಿನ ಆವರಣದಲ್ಲಿ ಹಾವು ಕಚ್ಚಿ ಮೃತಪಟ್ಟಿದ್ದಾರೆ.

    ಘಟಿಕೋತ್ಸವ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ರಾತ್ರಿ 11 ಗಂಟೆ ಸುಮಾರಿಗೆ ವಿಷಪೂರಿತ ಹಾವು ಕಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿಯ ಕೊಠಡಿಯ ಸಮೀಪವಿರುವ ಪಾರ್ಕಿಂಗ್ ಸ್ಥಳದ ಬಳಿ ಹಾವು ಕಚ್ಚಿದೆ. ಘಟನೆಯ ಸಮಯದಲ್ಲಿ ಅವನ ತಾಯಿ ಮತ್ತು ಇತರ ಸಂಬಂಧಿಕರು ಜೊತೆಗಿದ್ದರು. ಆದರೆ, ಹಾವು ಕಚ್ಚಿರುವುದು ಯಾರಿಗೂ ತಿಳಿದಿರಲಿಲ್ಲ. ಮನೆಗೆ ತಲುಪಿದ ಬೆನ್ನಲ್ಲೇ ಕುಸಿದುಬಿದ್ದ ಆದಿತ್​ ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಆದಿತ್​ ಮೃತಪಟ್ಟಿದ್ದಾರೆಂದು ತುಮಕೂರಿನ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆದಿತ್​ ದೇಹದಲ್ಲಿ ಹಾವು ಕಡಿತದ ಗುರುತುಗಳು ಕಂಡುಬಂದಿದೆ. ಅಲ್ಲದೆ, ಶವಪರೀಕ್ಷೆಯ ರಕ್ತದ ಮಾದರಿಗಳಲ್ಲಿಯೂ ಹೆಚ್ಚಿನ ಮಟ್ಟದ ವಿಷವನ್ನು ಬಹಿರಂಗವಾಗಿದೆ. ಬುಧವಾರ ನಡೆದ ವಾರ್ಷಿಕ ಘಟಿಕೋತ್ಸವದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್​ನ ಕುಲಪತಿ ಮತ್ತು ಗೃಹ ಸಚಿವ ಜಿ. ಪರಮೇಶ್ವರ್​ ಭಾಗವಹಿಸಿದ ಸಂದರ್ಭದಲ್ಲಿ ಆದಿತ್ ಅವರಿಗೆ ಎಂಬಿಬಿಎಸ್​ ಪದವಿಯನ್ನು ನೀಡಲಾಯಿತು.

    ಎಸ್​ಎಸ್ಎಂಸಿ ಉಪಪ್ರಾಂಶುಪಾಲ ಡಾ.ಪ್ರಭಾಕರ ಜಿ.ಎನ್ ಮಾತನಾಡಿ, ಆದಿತ್ ಓರ್ವ ಉತ್ತಮ ವಿದ್ಯಾರ್ಥಿಯಾಗಿದೆ. ಹಾವು ಕಚ್ಚಿದ ಕೂಡಲೇ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಆತನ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸಲು ಕಾಲೇಜಿನಲ್ಲಿ ಗುರುವಾರ ಸಂತಾಪ ಸೂಚಕ ಸಭೆ ನಡೆಸಿದ್ದೇವೆ ಎಂದು ಹೇಳಿದರು.

    ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ತ್ರಿಸ್ಸೂರ್‌ನಿಂದ ಬಂದಿದ್ದ ಅದಿತ್‌ನ ತಾಯಿ ಮತ್ತು ಸಂಬಂಧಿಕರು ಆದಿತ್​ನ ಅಕಾಲಿಕ ಮರಣ ಕಂಡು ದಿಗ್ಭ್ರಾಂತರಾಗಿದ್ದಾರೆ. ಅಂತಿಮ ವಿಧಿವಿಧಾನಗಳನ್ನು ಪೂರ್ಣಗೊಳಿಸಲು ಅದಿತ್ ಅವರ ತಂದೆ ಇಟಲಿಯಿಂದ ಬರಬೇಕಿದ್ದು, ಅವರಿಗಾಗಿ ಕುಟುಂಬವು ಕಾಯುತ್ತಿದೆ ಎಂದು ಕಾಲೇಜು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ಚುನಾವಣೆ ಮುಗಿಯುತ್ತಿದ್ದಂತೆ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ ಮತ್ತೆ ಏರಿಕೆ, ದೇಶಾದ್ಯಂತ ಹೊಸ ಬೆಲೆ ಇಂದಿನಿಂದ ಜಾರಿ

    ಪಾಕಿಸ್ತಾನದಿಂದ ಭಾರತಕ್ಕೆ ಮರಳಿದ ಅಂಜು ನಿಗೂಢವಾಗಿ ನಾಪತ್ತೆ! ಎಲ್ಲಿರಬಹುದು? ಪೊಲೀಸರು ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts