

ಬೆಂಗಳೂರು: ತನ್ನ ಪ್ರಿಯಕರನ ಮೊಬೈಲ್‌ನಲ್ಲಿ 13 ಸಾವಿರ ಯುವತಿಯರ ನಗ್ನ ಫೋಟೋ, ವೀಡಿಯೋಗಳನ್ನು ಕಂಡ ಪ್ರೇಯಸಿಯೊಬ್ಬಳು ಶಾಕ್ ಆಗಿದ್ದಾಳೆ. ಈ ಸಂಬಂಧ ಬೆಂಗಳೂರು ಸೈಬರ್ ಅಪರಾಧ, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯಗಳು (ಸಿಇಎನ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಬಿಪಿಓ(ಹೊರಗುತ್ತಿಗೆ ವ್ಯಾಪಾರ ಪ್ರಕ್ರಿಯೆ) ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 22 ವರ್ಷದ ಯುವತಿ, ತನ್ನ ಸಹೋದ್ಯೋಗಿ ಮಂಗಳೂರು ಮೂಲದ ಯುವಕ ಆದಿತ್ಯ ಸಂತೋಷ್ನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಆಗಾಗ್ಗೆ ಏಕಾಂತದಲ್ಲಿ ಖಾಸಗಿ ಕ್ಷಣಗಳನ್ನು ಕಳೆದಿದ್ದಾರೆ. ಇದನ್ನು ಪ್ರಿಯಕರ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದ, ಇದನ್ನು ಗಮನಿಸಿದ್ದ ಯುವತಿ, ಹುಡುಗ ಶೌಚಾಲಯಕ್ಕೆ ಹೋದಾಗ ಆತನ ಮೊಬೈಲ್ ತೆಗೆದು ತನ್ನ ಫೋಟೊ ಡಿಲೀಟ್ ಮಾಡಲು ಮುಂದಾಗಿದ್ದಳು. ಆಗ ಆತನ ಮೊಬೈಲ್ ನಲ್ಲಿ ಬರೋಬರಿ 13 ಸಾವಿರ ಯುವತಿಯರ ನಗ್ನ ಫೋಟೋಗಳು, ವಿಡಿಯೋಗಳನ್ನು ಕಂಡು ಬೆಚ್ಚಿ ಬಿದ್ದಿದ್ದಾಳೆ.
ವಿಪರ್ಯಾಸವೆಂದರೆ ಈ ಪೈಕಿ ತನ್ನದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಹಲವು ಯುವತಿಯರ ಮಾದಕ ಚಿತ್ರಗಳಿದ್ದವು. ಇದನ್ನೆಲ್ಲ ಕಂಡು ಶಾಕ್ ಆದ ಯುವತಿ, ಪ್ರಿಯಕರನ ಜತೆ ಜಗಳ ನಡೆಸಿ ಆತನಿಂದ ದೂರವಾಗಿದ್ದಾಳೆ. ಬಳಿಕ ತನ್ನ ಕಚೇರಿಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ.
ಬಳಿಕ ಆ ಕಂಪೆನಿಯ ಅಧಿಕಾರಿ ವರ್ಗ ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಆತ ಮಾತ್ರ ತಾನು ಯಾವ ಯುವತಿಗೂ ತೊಂದರೆ ಕೊಟ್ಟಿಲ್ಲ ಎಂದಿದ್ದಾನೆ. ಇಷ್ಟೊಂದು ಯುವತಿಯರ ಅರನಗ್ನ ಫೋಟೋಗಳನ್ನು ಹೇಗೆ ಸಂಗ್ರಹಿಸಿದ್ದಾನೆ ಎಂಬ ಬಗ್ಗೆ ತನಿಖೆ ನಡೆಸಿದ್ದಾರೆ. ಯುವತಿಯರ ಫೋಟೊ ತೆಗೆದು ಮಾರ್ಕ್ ಮಾಡಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಈ ಬಗ್ಗೆ ಕಂಪನಿ ಅಧಿಕಾರಿಗಳೇ ನ.23ರಂದು ಕೇಂದ್ರ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಬಳಿಕ ಟೆಕ್ಕಿ ಆದಿತ್ಯ ಸಂತೋಷ್ನನ್ನು ಬಂಧಿಸಿದ್ದಾರೆ. ಹುಡುಗಿಯರ ಫೋಟೊ ಮಾರ್ಘ ಮಾಡಿಕೊಂಡು ಈ ರೀತಿ ಸಂಗ್ರಹಿಸಿಟ್ಟಿದ್ದಾಗಿ ಯವಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.