More

    ಸ್ಪುಟ್ನಿಕ್‌ ಕೋವಿಡ್‌ ಲಸಿಕೆ ಕಂಡು ಹಿಡಿದಿದ್ದ ರಷ್ಯಾ ವಿಜ್ಞಾನಿಯನ್ನು ಬೆಲ್ಟ್‌ನಿಂದ ಕತ್ತು ಹಿಸುಕಿ ಮುಗಿಸಿದ

    ಮಾಸ್ಕೋ: ಕೋವಿಡ್‌ ಲಸಿಕೆ ‘ಸ್ಪುಟ್ನಿಕ್‌ ವಿ’ ತಯಾರಿಕೆಗೆ ಸಹಾಯ ಮಾಡಿದ್ದ ಪ್ರಮುಖ ವಿಜ್ಞಾನಿಯನ್ನು ಬೆಲ್ಟ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ.

    ಆ್ಯಂಡ್ರೆ ಬೋಟಿಕೋವ್‌ (47) ಮೃತ ವಿಜ್ಞಾನಿ. ಅಪಾರ್ಟ್‌ಮೆಂಟ್‌ವೊಂದರಲ್ಲಿ ಬೋಟಿಕೋವ್‌ ಅವರನ್ನು ಬೆಲ್ಟ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ವೈಯಕ್ತಿಕ ದ್ವೇಷದ ಕಾರಣ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಗಮಲೆಯಾ ನ್ಯಾಷನಲ್‌ ರಿಸಚ್‌ರ್‍ ಸೆಂಟರ್‌ ಫಾರ್‌ ಎಕೊಲಜಿ ಹಾಗೂ ಮ್ಯಾಥಮೆಟಿಕ್ಸ್‌ನಲ್ಲಿ ಹಿರಿಯ ಸಂಶೋಧಕರಾಗಿ ಕೆಲಸ ಮಾಡುತ್ತಿದ್ದ ಬೋಟಿಕೋವ್‌ ಗುರುವಾರ ತಮ್ಮ ಅಪಾರ್ಚ್‌ಮೆಂಡ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಕೂಡಲೇ 29 ವರ್ಷದ ಆರೋಪಿಯನ್ನು ಬಂಧಿಸಲಾಗಿದ್ದು ಆತ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

    ಇದನ್ನೂ ಓದಿ: ಮಾ.9 ರಿಂದ ಆರಂಭವಾಗಲಿರುವ ಪಿಯುಸಿ ಪರೀಕ್ಷೆಗೆ ಹಿಜಾಬ್ ಧರಿಸಿ ಬರುವಂತಿಲ್ಲ!

    2020ರಲ್ಲಿ ಕೋವಿಡ್‌ಗೆ ಸ್ಪುಟ್ನಿಕ್‌ ವಿ ಲಸಿಕೆ ಭಿವೃದ್ಧಿಪಡಿಸಿದ 18 ವಿಜ್ಞಾನಿಗಳಲ್ಲಿ ಬೋಟಿಕೋವ್‌ ಸಹ ಒಬ್ಬರು. ಇವರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ‘ಮೆರಿಟ್‌ ಫಾರ್‌ ದ ಫಾದರ್‌ ಲ್ಯಾಂಡ್‌’ ಪ್ರಶಸ್ತಿ ನೀಡಿ ಗೌರವಿಸಿದ್ದರು.

    MBA ಪಾಸಾದರೂ UPSC ಪರೀಕ್ಷೆಯ ಮೊದಲ ಸುತ್ತಲ್ಲೇ ಫೇಲ್ ಆದ ಚಾಟ್ ಜಿಪಿಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts