More

    ಜ್ವರದ ನಿಖರ ಕಾರಣ ಪತ್ತೆಗೆ ಉಪಕರಣ ಆವಿಷ್ಕಾರ; ಹಾಸನ ಮೂಲದ ವಿಜ್ಞಾನಿಯಿಂದ ಸಂಶೋಧನೆ

    ಅರಕಲಗೂಡು: ಸಿಂಗಪೂರ್​ನ ಪ್ರತಿಷ್ಠಿತ ಸಂಶೋಧನಾ ಕೇಂದ್ರ ಟುಮ್​ ಕ್ರಿಯೇಟ್​ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ.ಜೆ.ಕೋಮಲ್​ಕುಮಾರ್​ ಅವರು ಮನುಷ್ಯರಿಗೆ ಬರುವ ಜ್ವರದ ಕಾರಣವನ್ನು ನಿಖರವಾಗಿ ಪತ್ತೆ ಹಚ್ಚುವ ಸೆಲ್​ಫೇಸ್​ ಎಂಬ ಆಧುನಿಕ ತಂತ್ರಜ್ಞಾನದ ಉಪಕರಣವನ್ನು ಸಂಶೋಧನೆ ಮಾಡಿದ್ದಾರೆ.

    ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದ ರತ್ನಮ್ಮ ಹಾಗೂ ದಿ.ಜವರಪ್ಪ ಅವರ ಪುತ್ರ ಡಾ.ಕೋಮಲ್​ ಕುಮಾರ್​ ಉಪಕರಣ ಸಂಶೋಧಿಸಿ ಮಂಡಿಸಿರುವ ಪ್ರಬಂಧವು ಇಂಗ್ಲೆಂಡ್​ನ ಪ್ರತಿಷ್ಠಿತ ವಿಜ್ಞಾನ ಮಾಧ್ಯಮ ಸೆಲೆಕ್ಟ್​ ಸೈನ್ಸ್​ನಲ್ಲಿ ಪ್ರಕಟವಾಗಿದೆ.

    ಇದನ್ನೂ ಓದಿ: ಫ್ರಾನ್ಸ್​ನಲ್ಲಿ ಕಾಡುತ್ತಿದೆ ತಿಗಣೆ ಕಾಟ; ಶಾಲೆಗೆ ರಜೆ!

    ಕೋಮಲ್​ ಕುಮಾರ್​ ಜರ್ಮನಿ ದೇಶದ ಟುಮ್​ ಸಂಸ್ಥೆಯ ಪ್ರೊ.ಅಲಿವರ್​ ಹೈಡನ್​ ಮತ್ತು ಪ್ರೊ. ಪರ್ಸಿನೊಲ್ಲೆ ಮಾರ್ಗದರ್ಶನದಲ್ಲಿ ಸಂಶೋಧಿಸಿರುವ ಈ ಉಪಕರಣದಿಂದ ಮನುಷ್ಯರಿಗೆ ಬರುವ ಜ್ವರವು ವೈರಸ್​ನಿಂದ ಬಂದಿದೆಯೇ ಅಥವಾ ಬ್ಯಾಕ್ಟೀರಿಯಾದಿಂದ ಬಂದಿದೆಯೇ ಎಂಬುದನ್ನು ಖಚಿತವಾಗಿ ಪತ್ತೆ ಹಚ್ಚಿ, ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ.

    ಇದುವರೆಗಿನ ವೈದ್ಯಕಿಯ ತಂತ್ರಜ್ಞಾನದ ಸಲಕರಣೆಗಳಲ್ಲಿ ಜ್ವರದ ಕಾರಣದ ಪತ್ತೆ ಕಾರ್ಯ ಶೇ.50ರಷ್ಟು ಮಾತ್ರ ಸಾಧ್ಯತೆ ಇತ್ತು. ಹೊಸ ತಂತ್ರಜ್ಞಾನದ ಈ ಉಪಕರಣದ ಮೂಲಕ ಶೇ.100ರಷ್ಟು ಖಚಿತವಾಗಿ ನಿಖರ ಕಾರಣ ಪತ್ತೆ ಮಾಡಿ, ಚಿಕಿತ್ಸೆ ನೀಡಲು ಅನುಕೂಲವಾಗಲಿದೆ ಎಂದು ಯುವ ವಿಜ್ಞಾನಿ ಕೋಮಲ್​ಕುಮಾರ್​ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts