More

    ಫಾರ್ಮಸಿ ಕೆಲಸಗಾರನ ಖಾತೆಗೆ 753 ಕೋಟಿ ರೂ. ಜಮೆ! ಮಾಹಿತಿ ಕೇಳಿದರೆ ಅನುಚಿತ ವರ್ತನೆ ಆರೋಪ

    ಚೆನ್ನೈ: ಮೆಡಿಕಲ್​ ಸ್ಟೋರ್​ನಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರ ಬ್ಯಾಂಕ್​ ಖಾತೆಗೆ 753 ಕೋಟಿ ರೂಪಾಯಿ ಜಮಾ ಆಗಿದೆ. ಮಹಮ್ಮದ್​ ಇದ್ರಿಸ್​ ಎಂಬುವರು ತಮ್ಮ ಸ್ನೇಹಿತನಿಗೆ ಶುಕ್ರವಾರ 2 ಸಾವಿರ ರೂಪಾಯಿ ವರ್ಗಾವಣೆ ಮಾಡಿದ್ದಾರೆ. ಬಳಿಕ ಕಳೆದ ಶನಿವಾರ ಬ್ಯಾಲೆನ್ಸ್​ ಪರಿಶೀಲಿಸಿದಾಗ ಅವರ ಖಾತೆಯಲ್ಲಿ 753 ಕೋಟಿ ರೂಪಾಯಿ ಇರುವುದು ತಿಳಿದಿದೆ.

    ತಿರುನೆಲ್ವೇಲಿ ಜಿಲ್ಲೆಯ ತೆನಾಂಪೇಟೆಯ ಎಲ್ಡಮ್ಸ್​ನಲ್ಲಿ ವಾಸಿಸುತ್ತಿರುವ ಮಹಮ್ಮದ್​ ಇದ್ರಿಸ್​, ತಮ್ಮ ಮೊಬೈಲ್​ಗೆ ಬಂದಿದ್ದ ಮೇಸೆಜ್​ ಗಮನಿಸಿ ಕೆಲಸ ಮಾಡುವ ಸ್ಥಳದಿಂದ ತೆನಾಂಪೇಟೆಯಲ್ಲೇ ಇರುವ ಕೋಟಕ್​ ಮಹೀಂದ್ರಾ ಬ್ಯಾಂಕ್​ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಆದರೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ ಎನ್ನಲಾಗಿದೆ. ಎಸ್​ಎಂಎಸ್​ ಸಂದೇಶದಲ್ಲಿ ದೋಷ ಉಂಟಾಗಿದೆ. ಬೇರೆ ಖಾತೆಯ ಬ್ಯಾಲೆನ್ಸ್​ ಮೇಸೆಜ್​ ಅವರಿಗೆ ಹೋಗಿದೆ ಆದರೆ ಖಾತೆಯಲ್ಲಿ ಹಣ ಜಮೆಯಾಗಿಲ್ಲ. ಗ್ರಾಹಕರ ಖಾತೆಯನ್ನು ರ್ನಿಬಂಧಿಸಿಲ್ಲ. ತಂಡವು ದೋಷ ಸರಿಪಡಿಸುವ ಕೆಲಸ ಮಾಡುತ್ತಿದೆ. ಇದರಿಂದ ಆಗಿರುವ ಅನಾನುಕೂಲಕ್ಕೆ ಬ್ಯಾಂಕ್​ ವಿಷಾದ ವ್ಯಕ್ತಪಡಿಸುತ್ತದೆ ಎಂದು ಕೋಟಕ್​ ಮಹೀಂದ್ರಾ ಬ್ಯಾಂಕ್​ ವಕ್ತಾರರು ಹೇಳಿದ್ದಾರೆ.

    ತಮಿಳುನಾಡಿನಲ್ಲಿ ಇಂತಹ ಟನೆ ನಡೆದಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಎರಡು ಬಾರಿ ನಡೆದಿದೆ. ಸೆಪ್ಟೆಂಬರ್​ 17ರಂದು ಕ್ಯಾಬ್​ ಡೆವರ್​ಗೆ ಟಿಎಂಬಿ ಬ್ಯಾಂಕ್​ನಿಂದ 9,000 ಕೋಟಿ ರೂಪಾಯಿ ಜಮೆ ಆಗಿತ್ತು. ಅಕ್ಟೋಬರ್​ 5 ರಂದು ತಂಜಾವೂರಿನ ನಿವಾಸಿ ಒಬ್ಬರಿಗೆ 750 ಕೋಟಿ ರೂಪಾಯಿ ಜಮೆಯಾಗಿತ್ತು.

    ಕ್ಯಾಬ್​ ಡೆವರ್​ ಪ್ರಕರಣದಲ್ಲಿ ಅನುಚಿತ ವರ್ತನೆ ಹಾಗೂ ಪ್ರಮಾದಕ್ಕೆ ವಿಷಾದ ವ್ಯಕ್ತಪಡಿಸಿದ್ದ ಬ್ಯಾಂಕ್​ ಅಧಿಕಾರಿಗಳು, ಕಾರು ಖರೀದಿಗೆ ಸಾಲದ ಭರವಸೆ ನೀಡಿದ್ದರು ಹಾಗೂ ಬ್ಯಾಂಕ್​ ಖಾತೆಯಿಂದ ಡ್ರಾ ಮಾಡಿಕೊಂಡಿದ್ದ 23 ಸಾವಿರ ರೂ.ಗಳನ್ನು ಮರಳಿಸುವುದು ಬೇಡ ಎಂದು ಹೇಳಿದ್ದರು.

    ಮೊಬೈಲ್​ನಲ್ಲಿ 753 ಕೋಟಿ ರೂಪಾಯಿ ಬ್ಯಾಲೆನ್ಸ್​ ಇರುವುದಾಗಿ ಮೇಸೆಜ್​ ಸ್ವೀಕರಿಸಿದ ತಕ್ಷಣ ಯುಪಿಐ ರೆರೆನ್ಸ್​ ನಂಬರ್​ನೊಂದಿಗೆ ಬ್ಯಾಂಕ್​ ಅಧಿಕಾರಿಗಳನ್ನು ಸಂಪರ್ಕಿಸಿದೆ. ಆದರೆ ಅವರು ಸರಿಯಾಗಿ ಸ್ಪಂದಿಸಲಿಲ್ಲ. ಕೆಲವು ಗಂಟೆಗಳ ನಂತರ ನನ್ನ ಬ್ಯಾಂಕ್​ ಖಾತೆಯನ್ನು ರ್ನಿಬಂಧಿಸಿದ್ದಾರೆ. ಬ್ಯಾಂಕ್​ ಶಾಖೆಯ ಅಧಿಕಾರಿಗಳು ಸರಿಯಾದ ವಿವರಣೆ ನೀಡದ ಕಾರಣ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದೇನೆ.
    -ಮಹಮ್ಮದ್​ ಇದ್ರಿಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts