More

    ಯುದ್ಧದಲ್ಲಿ ಮಡಿದವರಿಗೆ ಯೂಕ್ರೇನ್​ ಮಹಿಳೆಯಿಂದ ಬಿಹಾರದಲ್ಲಿ ಪಿಂಡ ಪ್ರದಾನ!

    ಗಯಾ (ಬಿಹಾರ): ಯುದ್ಧದಲ್ಲಿ ಮಡಿದ ರಷ್ಯಾ ಮತ್ತು ಯೂಕ್ರೇನ್​ ಯೋಧರು ಶಾಂತಿಗಾಗಿ ಯೂಕ್ರೇನ್​ ಮಹಿಳೆಯೊಬ್ಬರು ಇಲ್ಲಿನ ದೇವಸ್ಥಾನದಲ್ಲಿ ಶನಿವಾರ ಪಿಂಡ ಪ್ರದಾನ ಮಾಡಿದರು. ಹಿಂದುಗಳು ತಮ್ಮ ಪೂರ್ವಜರಿಗೆ ಗೌರವ ಅರ್ಪಿಸಲು ಪಿತೃ ಪಕ್ಷದಲ್ಲಿ ಪಿಂಡ ದಾನದ ಆಚರಣೆ ನೆರವೇರಿಸುತ್ತಾರೆ.

    ಸೆಪ್ಟೆಂಬರ್​ 29ರಂದು ಈ ವರ್ಷದ ಪಿತೃ ಪಕ್ಷ ಆರಂಭವಾಗಿದೆ. ಪಿಂಡ ದಾನಕ್ಕಾಗಿ ಗಯಾಕ್ಕೆ ಬರುತ್ತಿರುವುದು ಇದು ಎರಡನೇ ಸಲ ಎಂದು ಯುಲಿಯಾ ಎಂಬ ಈ ಯೂಕ್ರೇನಿ ಮಹಿಳೆ ಹೇಳಿದ್ದಾಳೆ. ಕಳೆದ ವರ್ಷ ತನ್ನ ಪೋಷಕರಿಗೆ ಪಿಂಡ ಪ್ರದಾನ ಮಾಡಲು ಬಂದಿದ್ದಾಗಿ ಹೇಳಿದ್ದಾಳೆ.

    ಜೆರುಸಲೇಂ: ಗಾಜಾ ಪಟ್ಟಿಯಲ್ಲಿರುವ ಆಡಳಿತಾರೂಢ ಹಮಾಸ್​ ಉಗ್ರಗಾಮಿ ಗುಂಪು ಶನಿವಾರ ಬೆಳಗಿನ ಜಾವ ಇಸ್ರೇಲ್​ ಮೇಲೆ ಭಾರಿ ಪ್ರಮಾಣದ ದಾಳಿ ನಡೆಸಿದೆ. 5 ಸಾವಿರಕ್ಕೂ ಹೆಚ್ಚು ರಾಕೆಟ್​ಗಳ ಮೂಲಕ ಬೆಂಕಿಯ ಮಳೆಯನ್ನೇ ಸುರಿಸಿದೆ. ಇದರ ಜತೆಗೆ ಹಮಾಸ್​ ಉಗ್ರರು ಇಸ್ರೇಲ್​ನ ಹಲವಾರು ಗಡಿ ಪ್ರದೇಶಗಳಲ್ಲಿ ನುಸುಳಿದ್ದು, ಹಿಂಸಾಚಾರ ಸೃಷ್ಟಿಸಿದ್ದಾರೆ. ಇಸ್ರೇಲ್​ನ ರಾಷ್ಟ್ರೀಯ ರಣಾ ಸೇವೆ ಪ್ರಕಾರ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ. 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್​ನಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ.

    ಪ್ರಮುಖ ರಜಾ ದಿನವಾದ ಶನಿವಾರವೇ ಉಗ್ರರು ದಾಳಿ ನಡೆಸಿದ್ದಾರೆ. ದೇಶದ ಹಲವಾರು ಪ್ರದೇಶಗಳಲ್ಲಿ ಇಸ್ರೇಲಿ ಭದ್ರತಾ ಪಡೆ, ಹಮಾಸ್​ ಉಗ್ರರ ಜತೆ ಗುಂಡಿನ ಚಕಮಕಿ ನಡೆಸುತ್ತಿದೆ. ಈ ಟನೆ ವಿಶ್ವವನ್ನೇ ಬೆಚ್ಚೀಬಿಳಿಸಿದೆ. ಕನಿಷ್ಠ 561 ಗಾಯಾಳುಗಳು ಇಸ್ರೇಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಕನಿಷ್ಠ 77 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಹಮಾಸ್​ ಹೋರಾಟಗಾರರು ಇಸ್ರೇಲಿ ಮಿಲಿಟರಿ ವಾಹನಗಳನ್ನು ವಶಕ್ಕೆ ಪಡೆದು, ಬೀದಿಗಳಲ್ಲಿ ಮೆರವಣಿಗೆ ಮಾಡುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

    ಈ ಬೆನ್ನಲ್ಲೇ, ದೇಶವನ್ನು ಉದ್ದೇಶಿಸಿ ಇಸ್ರೇಲಿ ಪ್ರಧಾನಿ ಬೆಂಜಮಿನ್​ ನೆತನ್ಯಾಹು ದೂರದರ್ಶನ ಮೂಲಕ ಭಾಷಣ ಮಾಡಿದ್ದಾರೆ. ನಾವು ಯುದ್ಧದ ಸ್ಥಿತಿಯಲ್ಲಿದ್ದೇವೆ. ಸಾಮೂಹಿಕ ಸೇನಾ ಸಜ್ಜುಗೊಳಿಸುವಿಕೆ ಪ್ರಕ್ರಿಯೆ ನಡೆಯುತ್ತಿದೆ. ಶತ್ರುಗಳು ದೊಡ್ಡ ಬೆಲೆಯನ್ನು ತೆರಲಿದ್ದಾರೆ ಎಂದು ಅವರು ಹೇಳಿದ್ದಾರೆ.

    ಕನಿಷ್ಠ ಏಳು ಸ್ಥಳಗಳ ಮೂಲಕ ಇಸ್ರೇಲ್​ಗೆ ಹಮಾಸ್​ ಉಗ್ರರು ನುಗ್ಗಿದ್ದಾರೆ. ತಂತಿ ಬೇಲಿಗಳನ್ನು ಜಿಗಿದು ದೇಶದ ಒಳಗೆ ಪ್ರವೇಶಿಸುತ್ತಿರುವುದು, ಪ್ಯಾರಾಗ್ಲೆಡರ್​ ಮೂಲಕ ಇಸ್ರೇಲ್​ ನೆಲದಲ್ಲಿ ಇಳಿಯುತ್ತಿರುವ ವಿಡಿಯೋ ಬೆಳಕಿಗೆ ಬಂದಿದೆ. ಬಂದೂಕುಧಾರಿಗಳು ಮೋಟಾರು ಸೈಕಲ್​ಗಳಲ್ಲಿ, ಪಿಕಪ್​ ಟ್ರಕ್​ಗಳಲ್ಲಿ ಇಸ್ರೇಲ್​ ಪ್ರವೇಶಿಸುತ್ತಿದ್ದಾರೆ ಎಂದು ವರದಿಯಾಗಿದೆ. ಹಮಾಸ್​ ದಾಳಿಗೆ ಕಾರಣ ಏನು ಎಂಬುದು ತಣವೇ ಸ್ಪಷ್ಟವಾಗಿಲ್ಲ.

    ಹಮಾಸ್​ ಆಪರೇಷನ್​ ಅಲ್​&ಅಕ್ಸಾ ಫ್ಲಡ್​ ಹೆಸರಿನಲ್ಲಿ ಹಮಾಸ್​ ದಾಳಿ ಆರಂಭಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್​ ತಾನು ಯುದ್ಧಕ್ಕೆ ಸನ್ನದ್ಧವಾಗಿದ್ದಾಗಿ ಹೇಳಿದೆ. ಇದು ಕೇವಲ ಮೊದಲ ದಾಳಿ. ಮುಂದೆ ಇನ್ನಷ್ಟು ದಾಳಿಗಳು ನಡೆಯಲಿದೆ ಎಂದು ಹಮಾಸ್​ ಉಗ್ರರು ಹೇಳಿದ್ದಾರೆ. ಹೀಗಾಗಿ ಉದ್ವಿಗ್ನತೆ ಮತ್ತು ರ್ಷಣೆಗಳು ಮತ್ತಷ್ಟು ಉಲ್ಬಣಗೊಳ್ಳುವ ನಿರೀಕ್ಷೆಯಿದೆ.

    ರಸ್ತೆಗಳಲ್ಲಿ ಸಂಚರಿಸುತ್ತಿದ್ದ ವಾಹನಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಜನರು ಬಂಕರ್​ಗಳಲ್ಲಿ ಆಶ್ರಯ ಪಡೆಯುವಂತೆ ಇಸ್ರೇಲ್​ ಸರ್ಕಾರ ತಿಳಿಸಿದೆ. ಭಯೋತ್ಪಾದಕರು ಇಸ್ರೇಲ್​ ಯೋಧರ ಮೃತದೇಹಗಳನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗಿ ಸಂಭ್ರಮಾಚರಣೆ ನಡೆಸುತ್ತಿರುವುದು ಕಂಡುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts