More

    VIDEO| ನನ್ನನ್ನು ಕೊಲ್ಲಬೇಡಿ ಎಂದು ಅಂಗಲಾಚಿದರು ಮಹಿಳೆಯನ್ನು ಬಿಡದ ಹಮಾಸ್ ಉಗ್ರರು

    ನವದೆಹಲಿ: ಹಮಾಸ್​ ಉಗ್ರರು ಇಸ್ರೇಲ್​ ಮೇಲೆ ರಾಕೆಟ್​ ದಾಳಿ ನಡೆಸಿ 300ಕ್ಕೂ ಹೆಚ್ಚು ಜನರನ್ನು ಬಲಿ ಪಡೆಯುವ ಮೂಲಕ ಯುದ್ಧದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ. ಇದಲ್ಲದೆ ಹಲವರನ್ನು ಅಪಹರಿಸಿರುವ ಹಮಾಸ್​ ಉಗ್ರರು ಅವರುನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ.

    ಇದೀಗ ಘಟನೆಯೊಂದರಲ್ಲಿ ಪೀಸ್​ ಫೆಸ್ಟಿವಲ್​ನಲ್ಲಿ ಭಾಗಿಯಾಗಿದ್ದ ಯುವತಿಯನ್ನು ಅಪಹರಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ನೋಹ್ ಅರ್ಗಮಣಿ (25) ಅಪಹರಣಕ್ಕೊಳಗಾದ ಯುವತಿ ಎಂದು ವರದಿಯಾಗಿದೆ.

    ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಹಮಾಸ್​ ಉಗ್ರರು ನೋಹ್​ರನ್ನು ಬಲವಂತವಾಗಿ ಎಳೆದೊಯ್ಯುತ್ತಿರುವುದು ಕಂಡು ಬರುತ್ತದೆ. ಆಕೆ ತನ್ನನ್ನು ಕೊಲ್ಲದಂತೆ ಉಗ್ರರ ಬಳಿ ಬೇಡಿಕೊಳ್ಳುತ್ತಿರುವುದನ್ನುನೋಡಬಹುದಾಗಿದೆ. ಆಕೆಯ ಜೊತೆ ಇರುವ ಗೆಳೆಯ ಅವಿ ನಾಥನ್​ ಮೇಲೆ ಉಗ್ರರಯು ಅಮಾನುಷವಾಗಿ ಹಲ್ಲೆ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

    ಇತ್ತ ನೋಹ್ ಅರ್ಗಮಣಿ ಹಾಗೂ ಅವರ ಪ್ರಿಯಕರ ಅವಿ ನಾಥನ್ ಕಾಣೆಯಾಗಿರುವ ಬಗ್ಗೆ ಕುಟುಂಬಸ್ಥರು ದೂರು ದಾಖಲಿಸಿದ ಕೆಲವೇ ಘಂಟೆಗಳ ಬಳಿಕ ಅವರಿಬ್ಬರನ್ನು ಹಮಾಸ್​ ಉಗ್ರರು ಅಪಹರಣ ಮಾಡಿರುವ ಸುದ್ದಿ ಬೆಳಕಿಗೆ ಬಂದಿದೆ. ರಕ್ಷಣಾ ಪಡೆಗಳು ಅವರ ಹುಡುಕಾಟದಲ್ಲಿದ್ದು, ನಿರತರಾಗಿದ್ದು, ಶೀಘ್ರದಲ್ಲೇ ಹುಡುಕಿಕೊಡುವುದಾಗಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.

    ಇದನ್ನೂ ಓದಿ: VIDEO| ಇಸ್ರೇಲ್-ಪ್ಯಾಲೆಸ್ಟೈನ್​ ಯುದ್ಧ; ಲಂಡನ್​ನಲ್ಲಿ ಹಮಾಸ್​ ಬೆಂಬಲಿಗರ ಸಂಭ್ರಮಾಚರಣೆ

    ಈ ಕುರಿತು ಪ್ರತಿಕ್ರಿಯಿಸಿರುವ ಅವಿ ನಾಥನ್ ಸಹೋದರ ಮೋಶೆ ಓರ್​ ಮೊದಲಿಗೆ ಅವರ ಫೋನ್​ ಸ್ವಿಚ್​​ ಆಫ್​ ಬಂದ ಕಾರಣ ಹತ್ತಿರದ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಲಾಯಿತು. ದೂರು ದಾಖಲಿಸಿಕೊಂಡ ಅಧಿಕಾರಿಗಳು ಕೆಲ ಘಂಟೆಗಳ ಬಳಿಕ ಅವರಿಬ್ಬರನ್ನು ಹಮಾಸ್​ ಉಗ್ರರು ಅಪಹರಣ ಮಾಡಿರುವುದಾಗಿ ತಿಳಿಸಿದ್ದರು. ಈಗಾಗಲೇ ಅವರನ್ನು ಅಪಹರಣ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರಿ್ಬ್ರಿಗೆ ಏನೂ ಆಗದೇ ಇದ್ದರೆ ಸಾಕು ಎಂದು ಅವಿ ನಾಥನ್ ಸಹೋದರ ಮೋಶೆ ಓರ್​ ತಿಳಿಸಿದ್ದಾರೆ.

    ಅವಿ ನಾಥನ್​ ಹಾಗೂ ನೋಹ್ ಅರ್ಗಮಣಿ ಭಾಗವಹಿಸಿದ್ದ ಪೀಸ್​ ಫೆಸ್ಟಿವಲ್​ ಮೇಲೆ ಹಮಾಸ್ ಉಗ್ರಗಾಮಿಗಳ ದಾಳಿ ಮಾಡಿದ್ದು, ನುರಕ್ಕೂ ಹೆಚ್ಚು ಜನರನ್ನು ತಮ್ಮ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ.

    ಸದ್ಯದ ಮಾಹಿತಿ ಮೇರೆಗೆ ಇಸ್ರೇಲ್​ನಲ್ಲಿ 300ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರೆ, ಗಾಜಾ ಮೇಲಿನ ಇಸ್ರೇಲ್​ ಪ್ರತಿದಾಳಿಗೆ 230ಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ. ಸ್ಥಳೀಯ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಬೇಸ್​ಮೆಂಟ್​ಗಳಲ್ಲಿ ಅಡಗಿಕೊಂಡಿದ್ದಾರೆ. ಎರಡೂ ಕಡೆಗಳಿಂದ ಒಟ್ಟು 500ಕ್ಕೂ ಹೆಚ್ಚು ಸಾವಾಗಿದ್ದು, 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts