More

    ಏಕದಿನ ವಿಶ್ವಕಪ್ 2023| ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ; ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ ಬಿಸಿಸಿಐ

    ನವದೆಹಲಿ: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್​ ಟೂರ್ನಿಯು ಆರಂಭವಾಗಿದ್ದು, ಇಡೀ ವಿಶ್ವವೇ ಬದ್ದವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಎದುರು ನೋಡುತ್ತಿದೆ.

    ಅಕ್ಟೋಬರ್​ 14ರಂದು ಅಹಮದಬಾದಿನಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಪಂದ್ಯ ನಡೆಯಲಿದ್ದು, ಟಿಕೆಟ್​ಗಾಗಿ ಹೆಚ್ಚಿನ ಬೇಡಿಕೆ ಇದೆ. ಈ ಸಂಬಂಧ ಕ್ರಮಕ್ಕೆ ಮುಂದಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 14 ಸಾವಿರ ಟಿಕೆಟ್​ಗಳನ್ನು ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದೆ.

    ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ಗೋದಾಮು ದುರಂತ; ಬದುಕು ಕಟ್ಟಿಕೊಳ್ಳಲು ಬಂದು ಬೂದಿಯಾದ ಪದವೀಧರರು

    ಈ ಕುರಿತು ಪ್ರಕಟಣೆಯನ್ನು ಹೊರಡಿಸಿರುವ ಬಿಸಿಸಿಐ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್​ ಮಾರಾಟವು ಅಕ್ಟೋಬರ್​ 8 ಮಧ್ಯಹ್ನ 12 ಘಂಟೆಗೆ ಶುರುವಾಗಲಿದೆ. ಕ್ರೀಡಾಭಿಮಾನಿಗಳು ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಟಿಕೆಟ್​ ಖರೀದಿಸಬಹುದು ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    1,30,000ಕ್ಕೂ ಅಧಿಕ ಆಸನ ಸಾಮರ್ಥ್ಯ ಹೊಂದಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕಳೆದ ಗುರುವಾರ ಹಾಲಿ ಚಾಂಪಿಯನ್ ಇಂಗ್ಲೆಂಡ್​ ಹಾಗೂ ನ್ಯೂಜಿಲೆಂಡ್​ ನಡುವಿನ ಪಂದ್ಯಕ್ಕೆ 47 ಸಾವಿರ ಮಂದಿ ಸಾಕ್ಷಿಯಾಗಿದ್ದರು. ಅತಿಥೇಯ ಭಾರತ ತಂಡವು ಭಾರತ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ತನ್ನ ವಿಶ್ವಕಪ್​ ಅಭಿಯಾನವನ್ನು ಆರಂಭಿಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts