More

    ಕೊಲೆದೈದವರಿಗೆ ಗಲ್ಲು ಶಿಕ್ಷೆ ಕೊಡಿ

    ಬೀದರ್: ಯಾದಗಿರಿ ಜಿಲ್ಲೆ ದಲಿತ ಯುವಕ ರಾಕೇಶ್ ಹತ್ಯೆ ಖಂಡಿಸಿ ಜಿಲ್ಲಾ ಸಕಲ ಸಮಾಜಗಳ ಸಮನ್ವಯ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
    ಜಿಲ್ಲಾಧಿಕಾರಿ ಕಚೇರಿ ಎದುರು ಪ್ರದರ್ಶನ ನಡೆಸಿದ ಪ್ರಮುಖರು, ರಾಕೇಶ್ ಗೆ ಜಾತಿನಿಂದನೆ ಮಾಡಿದ್ದಲ್ಲದೆ ತಂದೆ-ತಾಯಿ ಎದುರೇ ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಕೊಲೆ ನಡೆದ ಕೆಲ ದಿನಗಳಲ್ಲೇ ಇಂಥ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ರಾಜಕೀಯ ಮಾಡುತ್ತಿದೆ. ಒಂದು ಸಮುದಾಯದವರಿಗೆ ಕುಮ್ಮಕ್ಕು ನೀಡಿ ಬಹು ಸಮುದಾಯಗಳನ್ನು ತುಳಿಯುವ ಹುನ್ನಾರ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಹಿಂದು ಯುವಕ, ಯುವತಿಯರು ಭಯದಲ್ಲಿ ಓಡಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ರಾಕೇಶ್ ಕೊಲೆಗೈದ ಫಯಾಜ್ ಇತರರ ವಿರುದ್ಧ ಕಠಿಣ ಕ್ರಮ ಕೈಗೊಂಡು ನೇಣುಗಂಬಕ್ಕೆ ಹಾಕಬೇಕು ಎಂದು ಒತ್ತಾಯಿಸಿದರು.
    ಪ್ರಮುಖರಾದ ಬಿ.ಜಿ. ಶೆಟಕಾರ, ಬಾಬುರಾವ ಮಲ್ಕಾಪುರೆ, ರಾಮಕೃಷ್ಣ ಸಾಳೆ, ಸಿದ್ರಾಮಯ್ಯ ಸ್ವಾಮಿ, ಬಸವರಾಜ ಪವಾರ್, ಶಶಿಧರ ಹೊಸಳ್ಳಿ, ಎಸ್.ಎಂ. ಪಾಟೀಲ್, ರಾಜಕುಮಾರ ಪೋಳ, ಪ್ರಶಾಂತ ವಿಶ್ವಕರ್ಮ, ಎಸ್.ಬಿ. ಸಜ್ಜನಶೆಟ್ಟಿ, ಪೀರಪ್ಪ ಔರಾದೆ, ನಾಗೇಶ ಚಿನ್ನಾರಡ್ಡಿ, ಸಂಜುಕುಮಾರ ಪಾಟೀಲ್, ಡಾ.ವೀರೇಂದ್ರ ಶಾಸ್ತ್ರಿ, ಸತೀಶಕುಮಾರ ನೌಬಾದೆ, ಶಾಮರಾವ ಮಲ್ಕಾಪುರೆ, ವಿಶಾಲ ಅತಿವಾಳೆ, ರಾಹುಲ್, ಶರಣಯ್ಯ, ಬಸವರಾಜ ಚಿಕ್ಲೆ, ಸಂಜಯಕುಮಾರ ಘನಾಟೆ, ಮಹೇಶ ಮಡಿವಾಳ, ಬಾಬು, ಯೋಗೇಶ ಪಾಟೀಲ್, ರತಿಕಾಂತ ಮೇತ್ರೆ, ವೆಂಕಟೇಶರಾವ ಮೈಂದೆ, ರೋಶನ್ ವಮರ್ಾ ಇತರರಿದ್ದರು. ಬೇಡಿಕೆ ಸಂಬಂಧ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಗೋವಿಂದರಡ್ಡಿ ಅವರಿಗೆ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts