ಕಾಶ್ಮೀರ, ಲಡಾಖ್​ನಲ್ಲಿದ್ದಾರೆ 30,000 ಎನ್​ಸಿಸಿ ಕೆಡೆಟ್!

NCC
Published on

ಶ್ರೀನಗರ: ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್​ನಲ್ಲಿ 30,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಷ್ಟ್ರೀಯ ಕೆಡೆಟ್​ ಕೋರ್​ಗೆ (ಎನ್​ಸಿಸಿ) ಸೇರ್ಪಡೆಗೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಮ್ಮು ಹೊರವಲಯದ ನಗ್ರೋತಾದಲ್ಲಿ ಎನ್​ಸಿಸಿ ಕೆಡೆಟ್​ಗಳಿಗೆ ಏರ್ಪಡಿಸಲಾಗಿರುವ ಶಿಬಿರಕ್ಕೆ ಎನ್​ಸಿಸಿ ಹೆಚ್ಚುವರಿ ಮಹಾ ನಿರ್ದೇಶಕರಾದ ಮೇಜರ್​ ಜನರಲ್​ ಆರ್​.ಕೆ. ಸಚ್​ದೇವ್​ ಭೇಟಿ ನೀಡಿ ಪರಿಶೀಲಿಸಿದರು. ಎನ್​ಸಿಸಿ ಕೆಡೆಟ್​ಗಳು "ಏಕ್​ ಭಾರತ್​, ಶ್ರೇಷ್ಠ ಭಾರತ್​' ಶಿರೋನಾಮೆಯ ಈ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಈ ವರ್ಷವೊಂದೇ ಜಮ್ಮು, ಕಾಶ್ಮೀರ ಮತ್ತು ಲಡಾಖ್​ನಲ್ಲಿ ಸುಮಾರು 30,000 ಎನ್​ಸಿಸಿ ಕೆಡೆಟ್​ಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಸಚ್​ದೇವ್​ ತಿಳಿಸಿದರು.

400 ಎನ್​ಸಿಸಿ ಕೆಡೆಟ್​ಗಳು ಅಗ್ನೀವಿರರಾಗಿ ಸೇರ್ಪಡೆಗೊಂಡಿದ್ದು, 57 ಮಂದಿಯನ್ನು ಜಮ್ಮು&ಕಾಶ್ಮೀರ ಪೊಲೀಸ್​ ಹಾಗೂ ಕೇಂದ್ರೀಯ ಸಶಸ್ತ್ರ ಪೊಲೀಸ್​ ಪಡೆಗಳಿಗೆ ನೇಮಕ ಮಾಡಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net