More

    ಟಾಟಾ ಗ್ರೂಪ್​ ಒಡೆತನದ ಏರ್​ ಇಂಡಿಯಾ ವಿಮಾನಕ್ಕೆ ಹೊಸ ಲುಕ್​

    ನವದೆಹಲಿ: ಟಾಟಾ ಗ್ರೂಪ್​ ಒಡೆತನದ ಏರ್​ ಇಂಡಿಯಾ ಏರ್​ಲೈನ್​ ಹೊಸ ಲೋಗೋ ಮತ್ತು ವಿನ್ಯಾಸದೊಂದಿಗೆ ತನ್ನ ವಿಮಾನದ ಚಿತ್ರವನ್ನು ಅನಾವರಣಗೊಳಿಸಿದೆ.

    ಏರ್​ಲೈನ್ಸ್​ ಈ ವರ್ಷದ ಆರಂಭದಲ್ಲಿ ಹೊಸ ಲೋಗೋ ದಿ ವಿಸ್ಟಾನೊಂದಿಗೆ ರೀಬ್ರಾಂಡ್​ ಮಾಡಿಕೊಂಡಿತ್ತು. ವಿಮಾನದ ಮಾಲೀಕತ್ವದ ಬದಲಾವಣೆಯ ನಂತರ ಏರ್​ಲೈನ್​ನ ವಿನ್ಯಾಸ ಬದಲಾಯಿಸುವ ಯೋಜನೆಗಳನ್ನು ಪ್ರಾರಂಭಿಸಲಾಯಿತು. ಫ್ರಾನ್ಸ್​ನ ಟೌಲೌಸ್​ನ ಏರ್​ಬಸ್​ನ ಹೊಸ ಎ350 ವಿಮಾನದ ಚಿತ್ರವನ್ನು ಸಂಸ್ಥೆಯು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಇದು ಚಳಿಗಾಲದಲ್ಲಿ ವಿಮಾನ ಭಾರತಕ್ಕೆ ಆಗಮಿಸಲಿದೆ ಎಂದು ಸಂಸ್ಥೆ ಹೇಳಿದೆ.

    ಪ್ರಸ್ತುತ ಫ್ರಾನ್ಸ್​ನ ಟೌಲೌಸ್​ನಲ್ಲಿರುವ ಎ350 ವಿಮಾನವು ಗೋಲ್ಡನ್​, ಕೆಂಪು ಮತ್ತು ನೇರಳೆ ಸೇರಿದಂತೆ ಹೊಸ ಬಣ್ಣಗಳನ್ನು ಒಳಗೊಂಡಿದೆ. ಅದರ ಮರುಬ್ರಾಂಡಿಂಗ್​ ಪ್ರಯತ್ನದ ಭಾಗವಾಗಿ ಏರ್​ ಇಂಡಿಯಾ ಆಗಸ್ಟ್​ನಲ್ಲಿ ತನ್ನ ಹೊಸ ಲೋಗೋ ಮತ್ತು ಬಣ್ಣದ ಪ್ಯಾಲೆಟ್​ ಅನ್ನು ಘೋಷಿಸಿತ್ತು. ಹೊಸ ಲೋಗೋ ಹೆಚ್ಚು ಶೈಲೀಕೃತ ಮತ್ತು ಹೊಸ ಬಣ್ಣದ ವಿನ್ಯಾಸವನ್ನು ಒಳಗೊಂಡಿದೆ.

    ಟಾಟಾ ಗ್ರೂಪ್​ ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ತಾಲೇಸ್​ ಪೆವೇಟ್​ ಲಿಮಿಟೆಡ್​ ಮೂಲಕ ಜನವರಿ 2022ರಲ್ಲಿ ಏರ್​ ಇಂಡಿಯಾವನ್ನು ಸ್ವಾಧಿನಪಡಿಸಿಕೊಂಡಿತು. ನಂತರ ಏರ್​ ಇಂಡಿಯಾ ಮತ್ತು ಟಾಟಾ ಸನ್ಸ್​ನ ಮತ್ತೊಂದು ಅಂಗಸಂಸ್ಥೆಯಾದ ವಿಸ್ತಾರಾವನ್ನು ಏಕೀಕೃತ ಟಕವನ್ನಾಗಿ ರಚಿಸಲು ವಿಲೀನಗೊಳಿಸಲಾಗುವುದು ಎಂದು ಘೋಷಿಸಿತ್ತು. ಈ ವಿಲೀನವು ಮಾರ್ಚ್​ 2024ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts