More

    ಈ ಒಂದು ಕೆಲ್ಸ ಮಾಡಿದ್ರೆ ನಿಮ್ಮ ಖಾತೆಗೆ ಬಂದು ಬೀಳಲಿದೆ 50 ಸಾವಿರ ರೂ.! ಇಂಥಾ ಅವಕಾಶ ಮತ್ತೆ ಸಿಗಲ್ಲ

    ನವದೆಹಲಿ: ನೀವು ಒಂದೇ ಒಂದು ರೂಪಾಯಿ ಖರ್ಚು ಮಾಡದೆ ಒಂದೇ ಬಾರಿ 50 ಸಾವಿರ ರೂ. ಗೆಲ್ಲಬಹುದು. ಅಚ್ಚರಿಯಾದರೂ ಇದು ಸತ್ಯ. ಈ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಆದರೆ ಅದು ಹೇಗೆ? ಅದಕ್ಕಾಗಿ ಏನು ಮಾಡಬೇಕು ಎಂದು ಯೋಚಿಸುತ್ತಿದ್ದೀರಾ? ಅದಕ್ಕೆ ಉತ್ತರ ಇಲ್ಲಿದೆ ನೋಡಿ.

    ನೀವು 50 ಸಾವಿರ ರೂ. ಗೆಲ್ಲಬೇಕೆಂದರೆ, ಈ ಸ್ಪರ್ಧೆಯ ಬಗ್ಗೆ ನೀವು ತಿಳಿದಿರಬೇಕು. ರಾಷ್ಟ್ರೀಯ ಮಹಿಳಾ ಆಯೋಗವು MyGov ವೆಬ್‌ಸೈಟ್‌ನಲ್ಲಿ ಲೋಗೋ ವಿನ್ಯಾಸ ಸ್ಪರ್ಧೆಯನ್ನು ಆಯೋಜಿಸಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಮಹಿಳಾ ಸಬಲೀಕರಣದ ಲೋಗೋವನ್ನು ವಿನ್ಯಾಸಗೊಳಿಸಬೇಕಿದೆ. ಹೆಚ್ಚಿನ ವಿವರಗಳಿಗೆ ಮುಂದೆ ಓದಿ.

    ರಾಷ್ಟ್ರೀಯ ಮಹಿಳಾ ಆಯೋಗವು MyGov ಸಹಭಾಗಿತ್ವದಲ್ಲಿ ಲೋಗೋ ವಿನ್ಯಾಸ ಸ್ಪರ್ಧೆಗೆ ಸೃಜನಶೀಲ ಮನಸ್ಸುಗಳು ಮತ್ತು ಉತ್ಸಾಹಿಗಳನ್ನು ಆಹ್ವಾನಿಸಿದೆ. ಹೊಸ ಅಸ್ಮಿತೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಮಹಿಳಾ ಆಯೋಗವನ್ನು ಪರಿಣಾಮಕಾರಿಯಾಗಿ ಲೋಗೋದಲ್ಲಿ ಚಿತ್ರಿಸಬೇಕಿದೆ. ಲಿಂಗ ಸಮಾನತೆ ಮತ್ತು ಮಹಿಳಾ ಹಕ್ಕುಗಳಿಗಾಗಿ ಮಹಿಳಾ ಆಯೋಗದ ಹೋರಾಟವನ್ನೂ ಲೋಗೋ ಪ್ರತಿಬಿಂಬಿಸಬೇಕಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು JPEG, PNG, BMP, TIFF, SVG ಫಾರ್ಮ್ಯಾಟ್‌ನಲ್ಲಿ ಲೋಗೋದ ಹೆಚ್ಚಿನ ರೆಸಲ್ಯೂಶನ್ (600 dpi) ಚಿತ್ರವನ್ನು ಅಪ್‌ಲೋಡ್ ಮಾಡಬೇಕು. ಹಾಗೆಯೇ ಲೋಗೋ ವಿಶಿಷ್ಟವಾಗಿರಬೇಕು.

    ವೆಬ್‌ಸೈಟ್, ಸಾಮಾಜಿಕ ಮಾಧ್ಯಮ, ಪತ್ರಿಕಾ ಪ್ರಕಟಣೆ, ಲೇಖನ ಸಾಮಗ್ರಿಗಳು, ಲೇಬಲ್‌ಗಳು, ನಿಯತಕಾಲಿಕೆಗಳು, ವಾಣಿಜ್ಯ, ಪೋಸ್ಟರ್‌ಗಳು ಹಾಗೂ ಕರಪತ್ರಗಳು ಸೇರಿದಂತೆ ಇತ್ಯಾದಿಗಳಿಗೆ ಉಪಯುಕ್ತವಾಗಿರಬೇಕು. ಈ ಸ್ಪರ್ಧೆಯ ವಿಜೇತರು ಮೂಲ ಫೈಲ್ ಅನ್ನು ತೋರಿಸಬೇಕು. ಲೋಗೋ ಸ್ವಚ್ಛ ನೋಟವನ್ನು ಹೊಂದಿರಬೇಕು. ಲೋಗೋದಲ್ಲಿ ಯಾವುದೇ ವಾಟರ್‌ಮಾರ್ಕ್ ಇರಬಾರದು. ಈ ಲೋಗೋದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳನ್ನು ಬಳಸಬೇಕು. ಇದು ಪ್ರಸ್ತುತ ಮಹಿಳಾ ಆಯೋಗದ ಅಧಿಕೃತ ಲಾಂಛನದಂತೆಯೇ ಇರಬೇಕು.

    2024 ಜನವರಿ 1 ರಿಂದ 2024 ಜನವರಿ 31 ರವರೆಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಅಂದರೆ ಇನ್ನೂ 15 ದಿನಗಳ ಕಾಲ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಯಾರಾದರೂ ಇದರಲ್ಲಿ ಭಾಗವಹಿಸಲು ಬಯಸಿದರೆ ಉತ್ತಮ ಲೋಗೋ ತಯಾರಿಸಿ ಅಪ್ಲೋಡ್ ಮಾಡಿ. ಇದರಲ್ಲಿ ಗೆದ್ದರೆ ಭಾಗವಹಿಸುವಿಕೆ ಪ್ರಮಾಣಪತ್ರದೊಂದಿಗೆ 50,000 ರೂ. ನಗದು ಬಹುಮಾನ ದೊರೆಯಲಿದೆ. ಸಂಪೂರ್ಣ ವಿವರಗಳಿಗಾಗಿ MYGOV ವೆಬ್‌ಸೈಟ್ WWW.MYGOV.IN ಗೆ ಭೇಟಿ ನೀಡಿ. ಈ ಸ್ಪರ್ಧೆಯಲ್ಲಿ ಈಗಾಗಲೇ 1167 ಮಂದಿ ತಮ್ಮ ಲೋಗೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಅದರಲ್ಲಿ 7 ಲೋಗೋಗಳು ಅನುಮೋದನೆ ಸಹ ಪಡೆದಿವೆ. ಇನ್ನೇಕೆ ತಡ ನೀವೂ ಕೂಡ ಟ್ರೈ ಮಾಡಿ. (ಏಜೆನ್ಸೀಸ್​)

    ನಟಿ ಪೂಜಾ ಹೆಗ್ಡೆಗೆ ಸಿಗ್ತಿಲ್ಲ ಹೊಸ ಆಫರ್​! ಸಂಭಾವನೆ ವಿಚಾರದಲ್ಲಿ ರಾಜಿಯಾಗುವ ಮಾತೇ ಇಲ್ಲ?

    ವಯಸ್ಸು 38 ಆದ್ರೂ ಇನ್ನೂ ಯಾಕೆ ಮದ್ವೆಯಾಗಿಲ್ಲ? ವರು ಕೊಟ್ಟ ಉತ್ತರ ಕೇಳಿದ್ರೆ ಹುಬ್ಬೇರಿಸ್ತೀರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts