More

    ಜಿಲ್ಲಾ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

    ಮೂಡಿಗೆರೆ: ಜಿಲ್ಲೆಯಲ್ಲಿ ನಡೆದಿರುವ ಎಲ್ಲ ಜಿಲ್ಲಾ, ತಾಲೂಕು, ಹೋಬಳಿ ಮಟ್ಟದ ಸಮ್ಮೇಳನಗಳು ಕನ್ನಡ ಭಾಷೆ, ನೆಲ, ಸಾಹಿತ್ಯ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಪಾರದರ್ಶಕವಾಗಿಯೇ ನಡೆದಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

    ಶನಿವಾರ ಪಟ್ಟಣದಲ್ಲಿ ಏರ್ಪಡಿಸಿದ್ದ 19ನೇ ಜಿಲ್ಲಾ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು.
    ಕಳೆದ ಬಾರಿ ಕಳಸದಲ್ಲಿ ನಡೆದ ಜಿಲ್ಲಾ ಸಮ್ಮೇಳನ, ಸಾಣೇಹಳ್ಳಿಯಲ್ಲಿ ನಡೆದ ಅಂತರ ಜಿಲ್ಲಾ ಸಮ್ಮೇಳನದ ಲೆಕ್ಕಪತ್ರ ಸದ್ಯದಲ್ಲೇ ಮನ್ನಣೆ ಮಾಡಲಿದ್ದೇವೆ. ಉಳಿದಂತೆ ಎಲ್ಲ ಸಮ್ಮೇಳನಗಳ ಲೆಕ್ಕಪತ್ರ ಮನ್ನಣೆಯಾಗಿದ್ದು, ಎಲ್ಲವೂ ಪಾರದರ್ಶಕವಾಗಿಯೇ ನಡೆದಿವೆ. ಜಿಲ್ಲೆಯಲ್ಲಿ ಕಸಾಪ ಸದಸ್ಯರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಎಲ್ಲರಿಗೂ ಆಹ್ವಾನ ಪತ್ರಿಕೆ ಕಳುಹಿಸಲು ಲಕ್ಷಾಂತರ ರೂ. ವೆಚ್ಚವಾಗುವುದರಿಂದ ಪತ್ರಿಕಾ ಪ್ರಕಟಣೆ ಮೂಲಕ ಆಹ್ವಾನಿಸಲಾಗುವುದು. ಇದು ಕೇವಲ ಸರ್ಕಾರ ಅಥವಾ ಪರಿಷತ್ತಿನ ಸಮ್ಮೇಳನವಲ್ಲ. ಇದು ಕನ್ನಡಿಗರೆಲ್ಲರನ್ನು ಒಟ್ಟಾಗಿ ಬೆಸೆಯುವ ಹಬ್ಬ ಎಂದು ಬಣ್ಣಿಸಿದರು.
    ಸಮ್ಮೇಳನದ ಲಾಂಛನ ಅದ್ಭುತವಾಗಿ ಮೂಡಿ ಬಂದಿದೆ. ಇದರಲ್ಲಿ ತಾಯಿ ಭುವನೇಶ್ವರಿ, ಕಾಫಿ ನಾಡಿನ ಕಾಫಿ, ಕಾಳು ಮೆಣಸು, ಅಡಕೆ, ಚಹಾ ತೋಟ, ಹೊರನಾಡು, ಶೃಂಗೇರಿ ಕ್ಷೇತ್ರ, ಕಲ್ಲತ್‌ಗಿರಿ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಮನೆ ಸೇರಿದಂತೆ ಕಾಫಿ ನಾಡಿನ ಸೊಗಡನ್ನು ಬಿಂಬಿಸುತ್ತಿದೆ. ನಾನು 12 ಸಮ್ಮೇಳನ ನೋಡಿದ್ದೇನೆ. ಅದಲ್ಲಿ ಕಳಸದಲ್ಲಿ ನಡೆದ ಜಿಲ್ಲಾ ಸಮ್ಮೇಳನ ತುಂಬಾ ಅದ್ಭುತವಾಗಿತ್ತು. ಅದಕ್ಕಿಂತ ಅದ್ದೂರಿಯಾಗಿ ಈ ಸಮ್ಮೇಳನವನ್ನು ನೀತಿ ಸಂಹಿತೆ ಉಲ್ಲಂಘನೆಯಾಗದ ರೀತಿಯಲ್ಲಿ ಅಚ್ಚುಕಟ್ಟಾಗಿ ನಡೆಸಲು ಎಲ್ಲರೂ ಶ್ರಮಿಸಬೇಕೆಂದು ಮನವಿ ಮಾಡಿದರು.
    ಕಾರ್ಯಾಧ್ಯಕ್ಷ ಬಿ.ಎಸ್.ಜಯರಾಮ್, ಕೋಶಾಧ್ಯಕ್ಷ ಜೆ.ಎಸ್.ರಘು, ಕಸಾಪ ತಾಲೂಕು ಅಧ್ಯಕ್ಷ ಶಾಂತಕುಮಾರ್, ಪಪಂ ಸದಸ್ಯ ಹೊಸಕೆರೆ ರಮೇಶ್, ಮಗ್ಗಲಮಕ್ಕಿ ಗಣೇಶ್, ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಭಾಲಕೃಷ್ಣ, ಮಂಚೇಗೌಡ, ಅನಿತಾ ಜಗದೀಪ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts