ನವದೆಹಲಿ: ಜೂನ್ 1ರಿಂದ ಆರಂಭವಾಗುವ ಟಿ20 ವಿಶ್ವಕಪ್ ಟೂರ್ನಿಗೆ ಈಗಾಗಲೇ ಟೀಮ್ ಇಂಡಿಯಾ ಪ್ರಕಟವಾಗಿದೆ. ಆದರೆ ಈ ಬಾರಿಯ ಐಪಿಎಲ್ ಸೀಸನ್ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಕೆಲ ಆಟಗಾರರು ಇದರಲ್ಲಿ ಸ್ಥಾನ ಪಡೆದಿಲ್ಲ. ಇದರಿಂದಾಗಿ ತಂಡದ ಆಯ್ಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಶುಭಮನ್ ಗಿಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್ ಹಾಗೂ ಅಭಿಷೇಕ್ ಶರ್ಮರಂತಹ ಉತ್ತಮ ಆಟಗಾರರಿಗೆ ಸ್ಥಾನ ಸಿಕ್ಕಿಲ್ಲ.
ಇದೀಗ ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಯುವ ಆಟಗಾರನೊಬ್ಬನ ಬಗ್ಗೆ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ. ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದ ನಂತರ ಆಟಗಾರನೊಬ್ಬ ಅದ್ಭುತ ಪ್ರದರ್ಶನ ನೀಡುತ್ತಿದ್ದಾನೆ ಎಂದು ನಗೆ ಚಟಾಕಿ ಹಾರಿಸಿದ್ದಾರೆ.
ಅಂದಹಾಗೆ ವೀರೇಂದ್ರ ಸೆಹ್ವಾಗ್ ಅವರು ತಮ್ಮದೇ ಶೈಲಿಯಲ್ಲಿ ಕ್ರಿಕೆಟ್ ಮತ್ತು ಆಟಗಾರರ ಬಗ್ಗೆ ವಿಡಂಬನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದೇ ಇದೆ. ಅವರ ಹೊಗಳಿಕೆ ಕೂಡ ಕೆಲವೊಮ್ಮೆ ವ್ಯಂಗ್ಯ ಎಂದು ವಿಶೇಷ ಹೇಳಬೇಕಾಗಿಲ್ಲ. ಇತ್ತೀಚೆಗಷ್ಟೇ ವೀರೂ ಟೀಮ್ ಇಂಡಿಯಾದ ಯುವ ಆಟಗಾರನನ್ನು ತಮ್ಮ ಮಾತಿನ ಮೂಲಕ ಕಿಚಾಯಿಸಿದ್ದಾರೆ.
ಇತ್ತೀಚೆಗಷ್ಟೇ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತ ನಡುವೆ ಐಪಿಎಲ್ ಪಂದ್ಯ ನಡೆಯಿತು. ಈ ಪಂದ್ಯವನ್ನು ಕೆಕೆಆರ್ 18 ರನ್‌ಗಳಿಂದ ಗೆದ್ದುಕೊಂಡಿತು. ಈ ಗೆಲುವಿನಲ್ಲಿ ಕೆಕೆಆರ್ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ಪ್ರಮುಖ ಪಾತ್ರ ವಹಿಸಿದರು. ಅವರು 4 ಓವರ್‌ಗಳಲ್ಲಿ ಕೇವಲ 17 ರನ್ ನೀಡಿ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು.
ಇದೀಗ ವೀರೇಂದ್ರ ಸೆಹ್ವಾಗ್, ವರುಣ್ ಚಕ್ರವರ್ತಿ ಅವರ ಬೌಲಿಂಗ್ ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ವರುಣ್ ಚಕ್ರವರ್ತಿ ಅವರಿಂದ 4 ಓವರ್ ಮಾಡಿಸುವ ಮೂಲಕ ಕೆಕೆಆರ್ ಉತ್ತಮ ನಿರ್ಧಾರ ತೆಗೆದುಕೊಂಡಿತು. ಸುನಿಲ್ ನಾರಯಣ್ ಮತ್ತು ಮಿಚೆಲ್ ಸ್ಟಾರ್ಕ್ ಅವರಂತಹ ವಿಶ್ವದರ್ಜೆಯ ಬೌಲರ್‌ಗಳಿದ್ದರೂ ವರುಣ್ ಆಯ್ಕೆ ದಿಟ್ಟ ನಿರ್ಧಾರ. ವರುಣ್ ಈ ಪಂದ್ಯದಲ್ಲಿ ಮಾತ್ರವಲ್ಲದೆ, ಈ ಹಿಂದೆಯೇ ಈ ರೀತಿ ಉತ್ತಮ ಪ್ರದರ್ಶನ ನೀಡಿದ್ದರೆ ವಿಶ್ವಕಪ್‌ಗೆ ಆಯ್ಕೆಯಾಗುವುದು ಖಚಿತವಾಗುತ್ತಿತ್ತು ಎಂದಿದ್ದಾರೆ.
ಅಂದಹಾಗೆ ವರುಣ್ ಚಕ್ರವರ್ತಿ ಅವರು ಪ್ರಸಕ್ತ ಐಪಿಎಲ್ ಸೀಸನ್ನಲ್ಲಿ 18 ವಿಕೆಟ್ ಪಡೆದು ಮಿಂಚಿದ್ದಾರೆ. (ಏಜೆನ್ಸೀಸ್)
ಇಲಿ ಪಾಷಾಣ, 136 ನಿದ್ರೆ ಮಾತ್ರೆ ಸೇವಿಸಿ ಕೈ ಕುಯ್ದುಕೊಂಡ್ರೂ ಸಾಯಲಿಲ್ಲ! ಮೋಹಿನಿ ಬಾಳಲ್ಲಿ ನಡೆದಿತ್ತಂತೆ ಪವಾಡ
ಪೆಟ್ರೋಲ್ ಬಂಕ್ಗೆ ಹೋಗುವ ಮುನ್ನ ಎಚ್ಚರ! ಈ ಒಂದು ಮಿಸ್ಟೇಕ್ನಿಂದ 10 ಸಾವಿರ ರೂ. ದಂಡ ಬೀಳಬಹುದು