

Operation Sindhura: ಪಹಲ್ಗಾಮ್ ಭಯೋತ್ಪಾದಕ ದಾಳಿಯ ವಿರುದ್ಧ ಭಾರತ ಸೇಡು ತೀರಿಸಿಕೊಳ್ಳಲು ನಡೆಸಿದ ಮಿಲಿಟರಿ ಕಾರ್ಯಚರಣೆ 'ಆಪರೇಷನ್ ಸಿಂಧೂರ' ಪ್ರೇರಣೆಯಾಗಿ ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ 17 ನವಜಾತು ಶಿಶುಗಳಿಗೆ ಸಿಂಧೂರ ಎಂದು ನಾಮಕರಣ ಮಾಡಿವೆ.
ಮೇ.10, 11 ರಂದು ಕುಶಿನಗರದ ವೈದ್ಯಕೀಯ ಕಾಲೇಜುನಲ್ಲಿ ಜನಿಸಿದ 17 ನವಜಾತು ಶಿಶುಗಳಿಗೆ ಸಿಂಧೂರ ಎಂದು ಹೆಸಡಿಲಾಗಿದೆ ಎಂದು ಅಲ್ಲಿನ ಪ್ರಾಂಶುಪಾಲ ಡಾ.ಆರ್.ಕೆ.ಶಾಹಿ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಕುಶಿನಗರ ನಿವಾಸಿ ಅರ್ಚನಾ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಮೊದಲು ಬೇರೆ ಹೆಸರನ್ನು ಇಡಲು ಸಿದ್ಧರಿದ್ದೇವೆ. ಆದರೆ, ಆಪರೇಷನ್ ಸಿಂಧೂರ ಬಳಿಕ ನಮ್ಮ ಮಗುವಿಗೆ ಸಿಂಧೂರ ಎಂದು ನಾಮಕರಣ ಮಾಡಿದ್ದೇವೆ. ಸಿಂಧೂರು ಎಂಬುದು ಪದ ಅಲ್ಲ, ಅಂದೊಂದು ಭಾವನೆ ಎಂದರು.
ಮತ್ತೊಬ್ಬರಾದ ಕಾಜಲ್ ಗುಪ್ತಾ, ತನ್ನ ಮಗುವಿಗೆ ಸಿಂಧೂರ ಎಂದು ಹೆಸರಿಟ್ಟಿದ್ದೇವೆ ಎಂದು ಮೊದಲು ಬೇರೆ ಹೆಸರಿಡಲು ಬಯಸಿದ್ದರು ಎಂದು ಬಹಿರಂಗಪಡಿಸಿದರು.
ಇದನ್ನೂ ಓದಿ:ಮಾನಸ ಗಂಗೋತ್ರಿ ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ
"ನಾವು ಈ ಕಾರ್ಯಾಚರಣೆಯನ್ನು ನೆನಪಿಸಿಕೊಳ್ಳುವುದಲ್ಲದೆ ಈ ದಿನವನ್ನು ಆಚರಿಸುತ್ತೇವೆ" ಎಂದು ಗುಪ್ತಾ ಹೇಳಿದರು. ಆದರೆ, ಭಾತಿ ಬಾಬು ಗ್ರಾಮದ ವ್ಯಾಸಮುನಿ ಕೂಡ ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇದು ತನ್ನ ಮಗಳಿಗೆ ಧೈರ್ಯ ತುಂಬುತ್ತದೆ. "ನನ್ನ ಮಗಳು ದೊಡ್ಡವಳಾದಾಗ, ಈ ಪದದ ನಿಜವಾದ ಅರ್ಥವನ್ನು ಅರ್ಥಮಾಡಿಕೊಳ್ಳುತ್ತಾಳೆ ಎಂದು ಹೇಳುತ್ತಾರೆ.
ಪ್ರಿಯಾಂಕಾ ದೇವಿ ಮತ್ತು ಇತರರು ತಮ್ಮ ಮಗಳಿಗೆ ಭಾರತದ ಮಿಲಿಟರಿ ಕಾರ್ಯಾಚರಣೆಯ ಹೆಸರನ್ನೇ ಇಡಲು ನಿರ್ಧರಿಸಿದ್ದಾರೆ ಎಂದು ಕುಶಿನಗರ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ಏಪ್ರಿಲ್ 22 ರಂದು ದಕ್ಷಿಣ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಜನಪ್ರಿಯ ಪ್ರವಾಸಿ ಪಟ್ಟಣವಾದ ಪಹಲ್ಗಾಮ್ ಬಳಿಯ ಬೈಸರನ್ ಮೈದಾನದಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ 26 ಭಾರತೀಯ ನಾಗರಿರಕರನ್ನು ಅಮಾನುಷವಾಗಿ ಕೊಂದಿದ್ದರು.(ಏಜೆನ್ಸೀಸ್)