ಸೌರವ್​ ಗಂಗೂಲಿ ಕೂಡ ಮಾತನಾಡಿದ್ದಾರೆ, ಈಗಲಾದರೂ ಕಣ್ಣು ತೆರೆಯಿರಿ; ಮಾಜಿ ಆಟಗಾರನ ಹೇಳಿಕೆ ವೈರಲ್​

Sourav Ganguly
Published on

ನವದೆಹಲಿ: ಕೆಲ ದಿನಗಳ ಹಿಂದಷ್ಟೇ ಬಾಂಗ್ಲಾದೇಶ ವಿರುದ್ಧ ನಡೆದ ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಪಾಕಿಸ್ತಾನ ತಂಡವು ಹೀನಾಯವಾಗಿ ಸೋತಿದ್ದು, ಭಾರೀ ಟೀಕೆಗೆ ಗುರಿಯಾಗಿದೆ. ತಂಡದ ಹೀನಾಯ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಮಾಜಿ ಆಟಗಾರರು ಪಿಸಿಬಿಯನ್ನು ಪ್ರಶ್ನಿಸುತ್ತಿದ್ದು, ತಂಡದ ವಿಚಾರವಾಗಿ ಮಂಡಳಿ ನಡೆದುಕೊಳ್ಳುತ್ತಿರುವ ರೀತಿ ಬಗ್ಗೆ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಬಸಿತ್​ ಅಲಿ, ಪಿಸಿಬಿ ಅಧ್ಯಕ್ಷರಾದ ಮೊಹ್ಸಿನ್​ ನಖ್ವಿ ಅವರೇ ಈಗಲಾದರೂ ನಿಮ್ಮ ಕಣ್ಣುಗಳನ್ನು ತೆರೆಯಿರಿ. ಪಾಕಿಸ್ತಾನ ಕ್ರಿಕೆಟ್​ಅನ್ನು ಸರಿಪಡಿಸುತ್ತೇವೆಂದು ನೀವು ಹೇಳುತ್ತೀರಾ. ಆದರೆ, ಈ ರೀತಿಯಾದರೆ ಅದು ಎಂದಿಗೂ ಸಾಧ್ಯವಿಲ್ಲ. ಇದು ಕಹಿ ಸತ್ಯವಾಗಿದ್ದು, ದಯವಿಟ್ಟು ಅರ್ಥ ಮಾಡಿಕೊಳ್ಳಿ.

ನಾನು ಯಾಸಿರ್ ಶಾ ಬಗ್ಗೆ ಮಾತನಾಡಿದರೆ ಜನರು ನನ್ನನ್ನು ಟೀಕಿಸುತ್ತಾರೆ. ಆಧರೆ, ರವಿಚಂದ್ರನ್​ ಅಶ್ವಿನ್​ ಕೂಡ ಈ ಬಗ್ಗೆ ಮಾತನಾಡಿದರೆ. ನನ್ನ ಹಾಗೂ ಅವರ ಮಾತಿನಲ್ಲಿ ಏನು ವ್ಯತ್ಯಾಸವಿದೆ. ಪಾಕಿಸ್ತಾನ ಕ್ರಿಕೆಟ್​ ತಂಡದಲ್ಲಿ ಸ್ಪಿನ್ನರ್​ಗಳ ಕೊರತೆ ಇದೇ ಎಂದು ನಾನು ಹೇಳಿದರೆ ತಪ್ಪು. ಆದರೆ, ಅಶ್ವಿನ್​ ಹೇಳಿದರೂ ತಪ್ಪಾಗುತ್ತದ. ಸೌರವ್​ ಗಂಗೂಲಿ ಕೂಡ ಪಾಕಿಸ್ತಾನ ಕ್ರಿಕೆಟ್​ ಹೇಗೆ ಹದಗೆಟ್ಟಿದೆ ಎಂಬುದರ ಕುರಿತು ಮಾತನಾಡಿದ್ದಾರೆ. ಮೊಹ್ಸಿನ್​ ನಖ್ವಿ ನೀಡಿರುವ ಹೇಳಿಕೆ ಬರೀ ಗಿಮಿಕ್​ ಅಷ್ಟೇ ಎಂದು ಬಸಿತ್​ ಅಲಿ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಹೇಳಿದ್ದಾರೆ.

Basit Ali
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net