ಅಮರಾವತಿ: ತಿರುಮಲ ದೇವಸ್ಥಾನದಲ್ಲಿ ಹಿಂದೂಗಳು ಮಾತ್ರ ಉದ್ಯೋಗದಲ್ಲಿರಬೇಕು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು(CM Chandrababu Naidu) ಶುಕ್ರವಾರ(ಮಾರ್ಚ್ 21) ಹೇಳಿದ್ದಾರೆ. ಇತರ ಸಮುದಾಯಗಳ ವ್ಯಕ್ತಿಗಳು ದೇವಾಲಯದಲ್ಲಿ ಕೆಲಸ ಮಾಡುತ್ತಿದ್ದರೆ, ಅವರ ಭಾವನೆಗಳಿಗೆ ನೋವುಂಟು ಮಾಡದೆ ಅವರನ್ನು ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಪಕ್ಷದ ವಂಶಾವಳಿಯ ಮನಸ್ಥಿತಿ ಪ್ರತಿಬಿಂಬಿಸುವಂತಿದೆ; ರಾಹುಲ್ಗಾಂಧಿ ಜಾತಿ ಜನಗಣತಿ ಹೇಳಿಕೆಗೆ ಬಿಜೆಪಿ ತಿರುಗೇಟು | Caste Census
ಭಾರತದಾದ್ಯಂತ ಎಲ್ಲಾ ರಾಜ್ಯ ರಾಜಧಾನಿಗಳಲ್ಲಿ ವೆಂಕಟೇಶ್ವರ ಸ್ವಾಮಿ ದೇವಾಲಯಗಳನ್ನು ನಿರ್ಮಿಸುವ ಯೋಜನೆಯನ್ನು ಚಂದ್ರಬಾಬು ನಾಯ್ಡು ಘೋಷಿಸಿದರು. ಕಳೆದ ತಿಂಗಳು ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು ನೋಡಿಕೊಳ್ಳುವ ಟಿಟಿಡಿ, ಹಿಂದೂ ಧರ್ಮ ಮತ್ತು ಸಂಪ್ರದಾಯಗಳನ್ನು ಅನುಸರಿಸುವುದಾಗಿ ಪ್ರಮಾಣವಚನ ಸ್ವೀಕರಿಸಿದ್ದರೂ ಕ್ರಿಶ್ಚಿಯನ್ ಧರ್ಮವನ್ನು ಪಾಲಿಸುತ್ತಿದ್ದ ಆರೋಪದ ಮೇಲೆ ಮಂಡಳಿಯಿಂದ ನಡೆಸಲ್ಪಡುವ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ 18 ಉದ್ಯೋಗಿಗಳ ವಿರುದ್ಧ ಕ್ರಮಕೈಗೊಂಡಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಟಿಟಿಡಿ ನಡೆಸುವ ವಿವಿಧ ಸಂಸ್ಥೆಗಳಲ್ಲಿ ಉಪನ್ಯಾಸಕರು, ಹಾಸ್ಟೆಲ್ ಕೆಲಸಗಾರರು, ಕಚೇರಿ ಅಧೀನ ಅಧಿಕಾರಿಗಳು, ಎಂಜಿನಿಯರ್‌ಗಳು, ಸಹಾಯಕರು, ದಾದಿಯರು ಮತ್ತು ಇತರ ಅರೆವೈದ್ಯಕೀಯ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ 18 ಅನ್ಯ ಧರ್ಮೀಯರು ಮಂಡಳಿಯು ಆಯೋಜಿಸುವ ಎಲ್ಲಾ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಹಾಜರಾಗುವುದನ್ನು ಈ ಆದೇಶವು ನಿಷೇಧಿಸಿದೆ.
“Only Hindus should be employed at the Tirumala Temple. If individuals from other religions are currently working there, they will be relocated to other places without hurting their sentiments,” says Andhra Pradesh CM N Chandrababu Naidu” pic.twitter.com/GUAFPtbviK
— ANI (@ANI) March 21, 2025
ಅಲ್ಲದೆ ತಿರುಮಲದಲ್ಲಿ ನಡೆಯುತ್ತಿರುವ ಯಾವುದೇ ಅಶುದ್ಧ ಚಟುವಟಿಕೆಗಳನ್ನು ಸಹಿಸುವುದಿಲ್ಲ ಎಂದು ಸಿಎಂ ಚಂದ್ರಬಾಬು ನಾಯ್ಡು ತಿಳಿಸಿದ್ದರೆ. ಇಲ್ಲಿ ಯಾವುದೇ ವಾಣಿಜ್ಯ ಕಾಮಗಾರಿಗಳಿಗೆ ಅಥವಾ ವಾಣಿಜ್ಯ ಕಟ್ಟಡಗಳಿಗೆ ಪರವಾನಗಿ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮುಮ್ತಾಜ್ ಹೋಟೆಲ್‌ಗೆ ನೀಡಲಾದ ಅನುಮತಿಗಳನ್ನು ರದ್ದುಗೊಳಿಸಲಾಗಿದೆ ಮತ್ತು ಅಂತಹ ವಿಷಯಗಳಿಗೆ ಬೇರೆಡೆ ಜಾಗ ಮಂಜೂರು ಮಾಡಲಾಗುವುದು ಎಂದು ಅವರು ಹೇಳಿದರು.(ಏಜೆನ್ಸೀಸ್)
Reshuffle in AAP | ರಾಜ್ಯ ಘಟಕಗಳಿಗೆ ಹೊಸ ಮುಖ್ಯಸ್ಥರ ನೇಮಕ; ಸೌರಭ್ ಭಾರದ್ವಾಜ್ಗೆ ದೆಹಲಿ ಉಸ್ತುವಾರಿ