ಬುದ್ಧಿವಂತರಿಗೆ ಮಾತ್ರ; ಈ ಚಿತ್ರದಲ್ಲಿರುವ 13 ಪ್ರಾಣಿಗಳನ್ನು 10 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ…

optical
Published on

ಬೆಂಗಳೂರು: ಬುದ್ಧಿಮತ್ತೆಯ ಮಟ್ಟವನ್ನು ಪರೀಕ್ಷಿಸಲು ಹಲವರು ದೃಶ್ಯ ಭ್ರಮೆಯ ಸವಾಲುಗಳನ್ನು ಎದುರಿಸುತ್ತಾರೆ. ನಾವು ನಿಮಗೆ ಹೀಗೆ ಒಂದು ಸವಾಲನ್ನು ನೀಡುತ್ತಿದ್ದೇವೆ. ಈ ಸವಾಲು ಖಂಡಿತವಾಗಿಯೂ ನಿಮ್ಮ ತಲೆಯನ್ನು ಕೆರೆದುಕೊಳ್ಳುವಂತೆ ಮಾಡುತ್ತದೆ.

ದೃಷ್ಟಿ ಭ್ರಮೆ ಎಂದರೇನು?: ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

ಈ ಚಿತ್ರದಲ್ಲಿ ಒಂದು ದೊಡ್ಡ ಆನೆ ಇದೆ. ಈ ಆನೆಯೊಳಗೆ ಅಡಗಿರುವ 13 ಪ್ರಾಣಿಗಳನ್ನು ಗುರುತಿಸುವುದು ನಿಮ್ಮ ಮುಂದೆ ಇರುವ ಸವಾಲಾಗಿದೆ. ಮೊದಲ ನೋಟದಲ್ಲಿ, ಕೇವಲ 3 ರಿಂದ 4 ಪ್ರಾಣಿಗಳು ಇವೆ ಎಂದು ತೋರುತ್ತದೆ. ನೀವು ಸೂಕ್ಷ್ಮವಾಗಿ ನೋಡಿದಾಗ ಮಾತ್ರ ಹೆಚ್ಚಿನ ಪ್ರಾಣಿಗಳು ಪತ್ತೆಯಾಗುತ್ತವೆ.

10 ಸೆಕೆಂಡುಗಳಲ್ಲಿ ನೀವು ಈ ಸವಾಲನ್ನು ಪೂರ್ಣಮಾಡಲು ಸಾಧ್ಯವಾಗಿಲ್ವಾ? ಇನ್ನೂ ನೀವು ಈ ಆಪ್ಟಿಕಲ್ ಭ್ರಮೆಯಲ್ಲಿ ಅಡಗಿರುವ ಎಲ್ಲಾ ಪ್ರಾಣಿಗಳನ್ನು ಹುಡುಕುತ್ತಿದ್ದರೆ. ಚಿಂತಿಸಬೇಡಿ, ನಾವು ಉತ್ತರವನ್ನು ಕೆಳಗೆ ಹಂಚಿಕೊಂಡಿದ್ದೇವೆ.

optical

ಚಿತ್ರವನ್ನು ಮತ್ತೊಮ್ಮೆ ಎಚ್ಚರಿಕೆಯಿಂದ ನೋಡಿ, ಆನೆ, ಆಮೆ, ಸೊಳ್ಳೆ, ಮೀನು, ಕತ್ತೆ, ಹಕ್ಕಿಯ ತಲೆ, ನಾಯಿ, ಡಾಲ್ಫಿನ್, ಹಾವು, ಮೊಸಳೆ, ಬೆಕ್ಕು, ಸೀಗಡಿ ಮತ್ತು ಇಲಿ ಇರುವುದನ್ನು ನೀವು ಗಮನಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net