

ಉತ್ತರಪ್ರದೇಶ: ಪೋಷಕರಿಗಿಂತ ಮುಂಚೆಯೇ ಎಚ್ಚರಗೊಂಡ 5 ವರ್ಷದ ಮಗು 8ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದೆ. ಈ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ಗ್ರೂಪ್ ಹೌಸಿಂಗ್ ಸೊಸೈಟಿಯ ಎಂಟನೇ ಮಹಡಿಯ ಅಪಾರ್ಟ್‌ಮೆಂಟ್‌ನಲ್ಲಿ ದಂಪತಿ ತಮ್ಮ 5 ವರ್ಷದ ಮಗನ ಜತೆಗೆ ವಾಸವಾಗಿದ್ದರು. ಮಗುವಿನ ಪೋಷಕರು ಮಲಗಿದ್ದರು. ಬೆಳಿಗ್ಗೆ 5.45ರ ಸುಮಾರಿಗೆ ಎಚ್ಚರಗೊಂಡ ಮಗು ಎದ್ದು ಬಾಲ್ಕನಿ ಬಳಿ ಹೋಗಿದೆ. ಆದೆರೆ ದಂಪತಿ ಮಾತ್ರ ನಿದ್ರೆಯಲ್ಲಿದ್ದರು. ಬಾಲ್ಕನಿಯಲ್ಲಿ ಆಟವಾಡುತ್ತಿದ್ದ ಮಗು 8ನೇ ಮಹಡಿಯಿಂದ ಬಿದ್ದಿದೆ.
ಮಗುವನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಮಗು ಬದುಕುಳಿಯಲಿಲ್ಲ. ನಂತರ ಸೆಕ್ಟರ್ 113 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
'ಕೆಲವೊಮ್ಮೆ ಮಗು ಇತರರಿಗಿಂತ ಮುಂಚೆಯೇ ಎದ್ದು ಮನೆಯಲ್ಲಿ ಆಟವಾಡುತ್ತಾನೆ. ಆದರೆ ಇಂದು ಹೀಗಾಗಿದೆ' ಎಂದು ಕುಟುಂಬ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ.