More

  ತಾಪ್ಸಿ ಪ್ರೀತಿಯಲ್ಲಿ ಬಿದ್ದ ಶಾರುಖ್; ‘ಡಂಕಿ’ಗೆ ಸಾಥ್​ ಕೊಟ್ಟ ‘ಲುಟ್​ ಪುಟ್ ಗಯಾ’!

  ಮುಂಬೈ: ಬಾಲಿವುಡ್​ ಕಿಂಗ್​ ಖಾನ್​ ಅಭಿನಯದ ‘ಡಂಕಿ’ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದು, ಚಿತ್ರವು ರಾಜ್​ಕುಮಾರ್ ಹಿರಾನಿ ನಿರ್ದೇಶನದಲ್ಲಿ ಮೂಡಿಬಂದಿದೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಕೂಡ ಬಿಡುಗಡೆಗೊಂಡಿದ್ದು, ಸಿನಿಪ್ರೇಕ್ಷಕರಿಂದ ವ್ಯಾಪಕ ಪ್ರತಿಕ್ರಿಯೆ ಪಡೆದುಕೊಂಡಿತು.

  ಇದನ್ನೂ ಓದಿ: ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಹೊರ ಗುತ್ತಿಗೆ ನೌಕರರಿಂದ ಪ್ರತಿಭಟನೆ; 26 ಸಿಬ್ಬಂದಿಯನ್ನು ಕೆಲಸದಿಂದ ಕೈ ಬಿಟ್ಟ ಹಿನ್ನೆಲೆಯಲ್ಲಿ ಆಕ್ರೋಶ; ಹಾಲಿ ನೌಕರರು ಪ್ರತಿಭಟನೆಗೆ ಸಾಥ್

  ಸಿನಿಮಾ ಜಾಗತಿಕವಾಗಿ ಡಿ. 22 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಲು ಸಜ್ಜಾಗಿದ್ದು, ಚಿತ್ರದ ಪ್ರಚಾರ ಕಾರ್ಯಗಳು ಭರ್ಜರಿಯಾಗಿ ಸಾಗುತ್ತಿದೆ. ಇಂದು ‘ಡಂಕಿ’ ಸಿನಿಮಾದ ಮೊದಲ ಹಾಡು ಟೀ ಸೀರಿಸ್ ಯೂಟ್ಯೂಬ್​ ಚಾನೆಲ್​​ನಲ್ಲಿ ಬಿಡುಗಡೆಯಾಗಿದ್ದು, ಹಾರ್ಡಿ ಹಾಗೂ ಮನುವಿನ ಪ್ರೇಮಗೀತೆ ಅನಾವರಣಗೊಂಡಿದೆ.

  ‘ಲುಪ್ ಪುಟ್ ಗಯಾ’ ಎಂಬ ಸಾಹಿತ್ಯದ ಹಾಡಿಗೆ ಶಾರುಖ್ ಖಾನ್ ತಾಪ್ಸಿಯೊಂದಿಗೆ ಹೆಜ್ಜೆ ಹಾಕಿದ್ದಾರೆ. ಮೆಲೋಡಿ ಮ್ಯೂಸಿಕ್ ಮಾಂತ್ರಿಕ ಪ್ರೀತಮ್ ಸಂಗೀತ ಸಂಯೋಜನೆ ಮಾಡಿದ್ದು, ಸ್ವಾನಂದ್ ಕಿರ್ಕಿರೆ ಮತ್ತು ಐಪಿ ಸಿಂಗ್ ಸಾಹಿತ್ಯ ಬರೆದಿದ್ದಾರೆ. ಈ ಸಾಂಗ್​ಗೆ ಅರಿಜಿತ್ ಸಿಂಗ್ ಅವರ ಧ್ವನಿಯಿದ್ದು, ಇದು ಕೇಳುಗರನ್ನು ಮತ್ತಷ್ಟು ಸೆಳೆದಿದೆ.

  ಇದನ್ನೂ ಓದಿ: ಬಿಜೆಪಿ ಸಿಬಿಐಗೆ ನೀಡಿದ್ದು ಕಾನೂನು ಬಾಹಿರ: ಡಿಕೆಶಿ ಪರ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್

  ರಾಜ್ ಕುಮಾರ್ ಹಿರಾನಿ ನಿರ್ದೇಶನದ ಈ ಚಿತ್ರಕ್ಕೆ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಕಥೆ ಬರೆದಿದ್ದಾರೆ. ಹಾರ್ಡಿ ಪಾತ್ರದಲ್ಲಿ ಶಾರುಖ್, ಮನು ಪಾತ್ರದಲ್ಲಿ ತಾಪ್ಸಿ ಮುಖ್ಯಭೂಮಿಕೆಯಲ್ಲಿದ್ದರೆ ಬಾಲಿವುಡ್​ನ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

  ‘ಡಂಕಿ’ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ಚಿತ್ರವು ಕ್ರಿಸ್‌ಮಸ್‌ ಹಬ್ಬದ ಸಮಯಕ್ಕೆ ತೆರೆಗೆ ಬರಲಿದ್ದು, ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

  ‘ಫೀನಿಕ್ಸ್’ ಆಗಿ ಚಿತ್ರರಂಗಕ್ಕೆ ಸೂರ್ಯ ಸೇತುಪತಿ ಎಂಟ್ರಿ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts