

ಆಂಧ್ರಪ್ರದೇಶ: ಮಾಸ್ ಪಾತ್ರಗಳಿಗೆ ಹೆಚ್ಚು ಹೆಸರುವಾಸಿಯಾಗಿರುವ ನಟ ವಿಶ್ವಕ್ಸೇನ್ ಅಭಿನಯದ 'ಗ್ಯಾಂಗ್ಸ್ ಆಫ್ ಗೋದಾವರಿ' ಚಿತ್ರದ ಬಗ್ಗೆ ಟಾಲಿವುಡ್ ಅಂಗಳದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು, ಸಿನಿಮಾ ಹೇಗಿರಲಿದೆ, ಬಿಡುಗಡೆ ಯಾವಾಗ? ಎಂಬ ಹಲವು ಪ್ರಶ್ನೆಗಳು ಇದೀಗ ಸಿನಿಪ್ರೇಕ್ಷಕರನ್ನು ಕಾಡತೊಡಗಿದೆ.
ಇದನ್ನೂ ಓದಿ: ಬರಪೀಡಿತ ಪಟ್ಟಿಗೆ ಸೇರಿಸಲು ವರದಿ ಸಿದ್ಧಪಡಿಸಿ
ಕೃಷ್ಣ ಚೈತನ್ಯ ನಿರ್ದೇಶನದ ಈ ಚಿತ್ರವು ಆಕ್ಷನ್, ಡ್ರಾಮಾ ಜಾನರ್ನಲ್ಲಿ ಮೂಡಿಬರಲಿದೆ. ಸಿನಿಮಾದಲ್ಲಿ ವಿಶ್ವಕ್ಸೇನ್ ಮತ್ತು ನಟಿ ನೇಹಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ತಿಂಗಳು ಚಿತ್ರ ತಯಾರಕರು ಚಿತ್ರದ ಮೊದಲ ಗ್ಲಿಂಪ್ಸ್ ವಿಡಿಯೋವೊಂದನ್ನು ರಿಲೀಸ್ ಮಾಡುವ ಮುಖೇನ ಸಿನಿಪ್ರಿಯರಲ್ಲಿ ಚಿತ್ರದ ಬಗ್ಗೆ ಮತ್ತಷ್ಟು ಕೌತುಕವನ್ನು ಹೆಚ್ಚಿಸಿದ್ದಾರೆ.
ಸದ್ಯ ಸಿನಿ ವರದಿಯ ಪ್ರಕಾರ 'ಗ್ಯಾಂಗ್ಸ್ ಆಫ್ ಗೋದಾವರಿ' ಇದೇ ಡಿಸೆಂಬರ್ನಲ್ಲಿ ತೆರೆ ಮೇಲೆ ಬರಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಆದ್ರೆ, ಇತ್ತೀಚಿನ ವರದಿ ಅನುಸಾರ, ಸಿನಿಮಾ ಡಿಸೆಂಬರ್ 8, 2023 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗಯಾಗಲಿದೆ ಎಂದು ಹೇಳಲಾಗಿದೆ. ಈ ಕುರಿತು ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲಿಯವರೆಗೂ ಘೋಷಣೆಯಾಗಿಲ್ಲ.
ಇದನ್ನೂ ಓದಿ: ಮಲ್ಲಯ್ಯನ ದೇವಸ್ಥಾನಕ್ಕೆ ವಿದ್ಯುತ್ ಕಂಬಗಳ ವ್ಯವಸ್ಥೆ
ಸಿತಾರಾ ಎಂಟರ್ಟೈನ್ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಬ್ಯಾನರ್ನಡಿ ತಯರಾಗಿರುವ ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾಗೆ ಶಂಕರ್ ರಾಜಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದಲ್ಲಿ ವಿಶ್ವಕ್ಸೇನ್, ಅಂಜಲಿ, ನೇಹಾ ಶೆಟ್ಟಿ, ಗೋಪರಾಜು ರಾಮನ, ನಾಸರ್, ಸಾಯಿ ಕುಮಾರ್ ಸೇರಿದಂತೆ ಹಲವರ ತಾರಗಣವಿದೆ,(ಏಜೆನ್ಸೀಸ್).