More

    ಮಲ್ಲಯ್ಯನ ದೇವಸ್ಥಾನಕ್ಕೆ ವಿದ್ಯುತ್ ಕಂಬಗಳ ವ್ಯವಸ್ಥೆ

    ಮಸ್ಕಿ: ಪಟ್ಟಣದ ಐತಿಹಾಸಿಕವಾಗಿ ಪ್ರಸಿದ್ದಿಯಾದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಹೊಸದಾಗಿ ವಿದ್ಯುತ್ ಕಂಬ, ತಂತಿಗಳನ್ನು ಅಳವಡಿಸುವ ಮೂಲಕ ಜೆಸ್ಕಾಂ ಇಲಾಖೆ ಭಕ್ತರಿಗೆ ಅನುಕೂಲ ಕಲ್ಪಿಸಿದೆ.

    ಇದನ್ನೂ ಓದಿ: ವಿದ್ಯುತ್ ಕಂಬಗಳ ಮೇಲಿನ ಅನಧಿಕೃತ ಕೇಬಲ್‌ಗಳ ತೆರವಿಗೆ ಗಡುವು

    ಬೆಟ್ಟದ ಮೇಲಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಶ್ರಾವಣ ಮಾಸದಲ್ಲಿ ಲಕ್ಷಾಂತರ ಭಕ್ತರು ದೇವರ ದರ್ಶನಕ್ಕೆ ತೆರಳುತ್ತಾರೆ. ಬೆಟ್ಟದ ಕೆಳಗೆ ಇರುವ ಶ್ರೀಭ್ರಮರಾಂಬ ದೇವಿ ದೇವಸ್ಥಾನದಿಂದ ಮಲ್ಲಯ್ಯನ ದೇವಸ್ಥಾನಕ್ಕೆ ಹೋಗುವ ಮಾರ್ಗ ಮದ್ಯದಲ್ಲಿ ಹಳೆಯದಾದ ಕಟ್ಟಿಗೆ ಕಂಬಗಳನ್ನು ಹಾಕಿ ವಿದ್ಯುತ್ ವ್ಯವಸ್ಥೆ ಮಾಡಲಾಗಿತ್ತು.

    ಕಟ್ಟಿಗೆ ಕಂಬಗಳು ಶಿಥಿಲವಾಗಿದು,್ದ ಕರೆಂಟ್ ತಂತಿ ಕೆಳಗಡೆ ಬೀಳುವ ಸ್ಥಿತಿಯಲ್ಲಿವೆ. ಇದನ್ನ ಮನಗಂಡ ಜೆಸ್ಕಾಂ ಅಧಿಕಾರಿ ಎಇಇ ವೆಂಕಟೇಶ, ಜೆಇ ಮುರುಳಿಕೃಷ್ಣ ನೇತೃತ್ವದಲ್ಲಿ ಹೊಸದಾಗಿ ವಿದ್ಯುತ್ ಕಂಬ ಹಾಗೂ ತಂತಿಗಳನ್ನು ಅಳವಡಿಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts