ಸ್ವರಾಜ್ಯದಲ್ಲಿ ಡಿಎಸ್ಪಿ ಆಗಲಿದ್ದಾರೆ ಬಾಕ್ಸಿಂಗ್​ ರಾಣಿ ಲವ್ಲೀನಾ!

lovlina
Published on

ಗೌಹಾಟಿ : ಟೋಕಿಯೋ ಒಲಿಂಪಿಕ್ಸ್​ನಲ್ಲಿ ಬಾಕ್ಸಿಂಗ್​ನಲ್ಲಿ ಕಂಚಿನ ಪದಕ ಗಳಿಸಿ ಭಾರತಕ್ಕೆ ಕೀರ್ತಿ ತಂದ ಲವ್ಲೀನಾ ಬೊರ್ಗೊಹೈನ್​​​ರನ್ನು ಪೊಲೀಸ್​​ ಡೆಪ್ಯುಟಿ ಸೂಪರಿಂಟೆಂಡೆಂಟ್​ ಹುದ್ದೆಯನ್ನು ನೀಡುವುದಾಗಿ ಅಸ್ಸಾಂ ಸಿಎಂ ಬಿಸ್ವಂತ ಸರ್ಮ ಘೋಷಿಸಿದ್ದಾರೆ.

ಜೊತೆಗೆ, ರಾಜ್ಯದ ಗೌಹಾಟಿಯಲ್ಲಿ ಒಂದು ರಸ್ತೆಗೆ ಲವ್ಲೀನಾ ಹೆಸರನ್ನು ಇಡಲಾಗುವುದು. ಲವ್ಲೀನಾ ಹುಟ್ಟೂರಾದ ಗೋಲಾಘತ್​ ಪಟ್ಟಣದಲ್ಲಿ ಆಕೆಯ ಹೆಸರಲ್ಲಿ ಒಂದು ದೊಡ್ಡ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು. ಇಲ್ಲಿ ವಿವಿಧ ಕ್ರೀಡೆಗಳಿಗೆ ಭರಪೂರ ಪ್ರೋತ್ಸಾಹ ನೀಡಲಾಗುವುದು. ಲವ್ಲೀನಾಗೆ ತರಬೇತಿ ನೀಡಿದ ತರಬೇತಿದಾರರಿಗೆ 10 ಲಕ್ಷ ರೂ.ಗಳ ನಗದು ಪುರಸ್ಕಾರ ನೀಡಲಾಗುವುದು ಎಂದು ಸಿಎಂ ಸರ್ಮ ಹೇಳಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net