ಕೋರ್ಟ್​ ಹಾಲ್​ಗೆ ಪ್ರವೇಶಿಸುತ್ತಿದ್ದಂತೆ ಕುಸಿದು ಬಿದ್ದ ಅಜ್ಜಿ, ಜಿಲ್ಲಾಧಿಕಾರಿಯಿಂದ ಪ್ರಥಮ ಚಿಕಿತ್ಸೆ..

Old woman F
ಅಜ್ಜಿ ಕುಸಿದು ಬಿದ್ದ ಸ್ಥಳದಲ್ಲಿ ಜಿಲ್ಲಾಧಿಕಾರಿ ಮತ್ತಿತರರು.
Published on

ದಾವಣಗೆರೆ: ವೃದ್ಧೆಯೊಬ್ಬರು ಕೋರ್ಟ್​ ಹಾಲ್​ಗೆ ಪ್ರವೇಶ ಮಾಡುತ್ತಿದ್ದಂತೆ ಕುಸಿದು ಬಿದ್ದ ಪ್ರಕರಣ ನಡೆದಿದೆ. ಅವರಿಗೆ ಜಿಲ್ಲಾಧಿಕಾರಿಯೇ ಸ್ವತಃ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

ಹಾವೇರಿ‌ ಮೂಲದ ಮುರಿಗೆಮ್ಮ ಧರ್ಮಪ್ಪ (73) ಕುಸಿದು ಬಿದ್ದ ಅಜ್ಜಿ. ಇವರು ಪ್ರಕರಣವೊಂದರ ವಿಚಾರಣೆ ಹಿನ್ನಲೆಯಲ್ಲಿ ದಾವಣಗೆರೆ ಜಿಲ್ಲಾಧಿಕಾರಿಗಳ‌ ಕೋರ್ಟ್​ಗೆ ಹಾಜರಾಗಿದ್ದರು. ಆದರೆ ಕೋರ್ಟ್​ ಹಾಲ್​ಗೆ ಪ್ರವೇಶ ಮಾಡುತ್ತಿದ್ದಂತೆ ಕುಸಿದು ಬಿದ್ದರು.

ವೈದ್ಯರೂ ಆಗಿರುವ ಜಿಲ್ಲಾಧಿಕಾರಿ ಡಾ.ಎಂ.ವಿ.‌ವೆಂಕಟೇಶ್ ಕೂಡಲೇ ವಿಚಾರಣೆ ನಿಲ್ಲಿಸಿ ಈ ಅಜ್ಜಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಕುಸಿದು ಬಿದ್ದು ಎಚ್ಚರ ತಪ್ಪಿದ ಅಜ್ಜಿ ಪ್ರಥಮ ಚಿಕಿತ್ಸೆಯಿಂದಾಗಿ ಕೆಲವೇ ನಿಮಿಷಗಳಲ್ಲಿ ಚೇತರಿಸಿಕೊಂಡಿದ್ದಾರೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net