

Old pressure cooker: ಇಂದಿನ ದಿನಗಳಲ್ಲಿ ಹೆಚ್ಚಿನ ಜನರ ಮನೆಯಲ್ಲಿ ಹಳೆಯ ಪ್ರೆಶರ್ ಕುಕ್ಕರ್ಗಳನ್ನು ಬಳಸಲಾಗುತ್ತದೆ. ಗಮನಾರ್ಹವಾಗಿ ಹೇಳುವುದಾದರೆ ಯಾರೂ ಈ ವಿಚಾರದ ಬಗ್ಗೆ ಮಾತನಾಡುವುದಿಲ್ಲ. ಆದರೆ ಸಂಶೋಧನೆಯ ಪ್ರಕಾರ, ಹಳೆಯ ಪ್ರೆಶರ್ ಕುಕ್ಕರ್ಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದುಬಂದಿದೆ.
ನಿಮ್ಮ ಮನೆಯಲ್ಲಿರುವ ಹಳೆಯ ಪ್ರೆಶರ್ ಕುಕ್ಕರ್ ಅತ್ಯಂತ ವಿಷಕಾರಿ ವಸ್ತುವಾಗಿದೆ. ಇದನ್ನು ಬಳಸುವುದರಿಂದ ನೇರವಾಗಿ ಆಹಾರಕ್ಕೆ ಸೀಸವನ್ನು ಸೋರಿಕೆ ಮಾಡುತ್ತದೆ. ಇದನ್ನು ದೇಹದಿಂದ ಸುಲಭವಾಗಿ ಹೊರಹಾಕಲು ಸಾಧ್ಯವಿಲ್ಲ. ಹಾಗಾಗಿ ಈ ಸೀಸವು ರಕ್ತ, ಮೆದುಳು ಮತ್ತು ಮೂಳೆಗಳಲ್ಲಿ ಸಂಗ್ರಹವಾಗುತ್ತದೆ. ಇದರಿಂದ ನೀವು ದೀರ್ಘವಾಗಿ ಆರೋಗ್ಯ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ.
ಅಂದಹಾಗೇ, ಹಳೆಯ ಅಲ್ಯೂಮಿನಿಯಂ ಪ್ರೆಶರ್ ಕುಕ್ಕರ್ಗಳು, ಸವೆದು ಹೋದ ಸುರಕ್ಷತಾ ಕವಾಟಗಳು ಅಥವಾ ರಬ್ಬರ್ ಗ್ಯಾಸ್ಕೆಟ್ಗಳನ್ನು ಹೊಂದಿರುವ ಪ್ರೆಶರ್ ಕುಕ್ಕರ್ಗಳನ್ನು ಬಳಸುವುದರಿಂದ ಇದು ಆಹಾರದಲ್ಲಿ ಗಮನಾರ್ಹ ಪ್ರಮಾಣದ ಸೀಸವನ್ನು ಸೋರಿಕೆ ಮಾಡಿ, ಆಹಾರವನ್ನು ಬೇಯಿಸುವಾಗ ಅಪಾಯ ಹೆಚ್ಚು ಮಾಡುತ್ತವೆ.
ಸಂಶೋಧನೆಯ ಪ್ರಕಾರ, ಭಾರತೀಯರು ಬಳಸುವ ಅಲ್ಯೂಮಿನಿಯಂ ಪ್ರೆಶರ್ ಕುಕ್ಕರ್ಗಳು ಸಾಮಾನ್ಯ ಅಡುಗೆ ಪಾತ್ರೆಗಳಿಗಿಂತ ಹೆಚ್ಚು ಸೀಸವನ್ನು ಆಹಾರದಲ್ಲಿ ಸೋರಿಕೆ ಮಾಡುತ್ತವೆ. ಹಾಗೆಯೇ ಕೆಲವು ಪಾತ್ರೆಗಳು ಸುರಕ್ಷಿತ ಮಿತಿಗಿಂತ ನೂರಾರು ಪಟ್ಟು ಹೆಚ್ಚಿನ ಸೀಸವನ್ನು ಸೋರಿಕೆ ಮಾಡುತ್ತವೆ ಎಂದು ತಿಳಿಸಿದೆ.
ಅಲ್ಯೂಮಿನಿಯಂ ಮತ್ತು ಹಿತ್ತಾಳೆ ಪಾತ್ರೆಯಲ್ಲಿ ಸೀಸದ ಮೂಲಗಳು ಅಡಗಿರುತ್ತವೆ. ಇವು ಆಹಾರದಲ್ಲಿ ಸೇರಿಕೊಂಡು ಆಹಾರವನ್ನು ವಿಷಪೂರಿತಗೊಳಿಸುತ್ತವೆ. ಇದರಿಂದ ವಯಸ್ಕರು ಆಯಾಸ, ಸ್ಮರಣಶಕ್ತಿ ನಷ್ಟ, ಮನಸ್ಥಿತಿ ಬದಲಾವಣೆಗಳು ಮತ್ತು ನರಗಳ ಸಮಸ್ಯೆಗಳನ್ನು ಉಂಟುಮಡುತ್ತವೆ. ಹಾಗೆಯೇ ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಯನ್ನು ನಿಧಾನಗೊಳಿಸಿ, ಐಕ್ಯೂ ಕಡಿಮೆ ಮಾಡುತ್ತದೆ. ಹಾಗೆಯೇ ಮೂತ್ರಪಿಂಡಗಳು, ಹೃದಯ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ.
ಹಳೆಯ ಪ್ರೆಶರ್ ಕುಕ್ಕರ್ಗಳಲ್ಲಿ ಆಹಾರ ಬೇಯಿಸಿ ಸೇವಿಸುವುದರಿಂದ ಇವು ಆಹಾರದಲ್ಲಿ ಲೆಡ್ ಲೋಹವನ್ನು ಚಿಮ್ಮುತ್ತವೆ. ಇದು ರಕ್ತ, ಮೂಳೆಗಳಲ್ಲಿ ಸೇರಿಕೊಂಡು ನರವ್ಯೂಹದ ಧಡಕ, ಕಲಿಕೆ ಸಮಸ್ಯೆಗಳು, ಮತ್ತು ಮಕ್ಕಳ ಬೆಳವಣಿಗೆಯಲ್ಲಿ ತೊಂದರೆಯನ್ನು ಉಂಟುಮಾಡುತ್ತದೆ.
ಹೆಚ್ಚಿನ ಒತ್ತಡ ಮತ್ತು ಉಷ್ಣತೆಯಿಂದ ವಿಟಮಿನ್ C, ಫೋಲೇಟ್ಗಳು ಮತ್ತು ಕ್ಯಾರೊಟಿನಾಯ್ಡ್ಗಳಂತಹ ಪೋಷಕಾಂಶಗಳು ಶೇ. 50 ಕ್ಕೂ ಹೆಚ್ಚು ಕಡಿಮೆಯಾಗಿ ಇದು ರೋಗ ನಿರೋಧಕ ಶಕ್ತಿ ಮತ್ತು ದೃಷ್ಟಿಶಕ್ತಿಗೆ ಹಾನಿ ಉಂಟುಮಾಡುತ್ತದೆ.
ಹಳೆಯ ಗ್ಯಾಸ್ಕೆಟ್ ಅಥವಾ ಸೀಲ್ಗಳು ಹಾನಿಗೊಳಗಾಗಿದ್ದರೆ, ಆಹಾರದಲ್ಲಿ ಬ್ಯಾಕ್ಟೀರಿಯಾವನ್ನು ಉತ್ಪತ್ತಿ ಮಾಡುತ್ತವೆ. ಇದು ಆಹಾರವನ್ನು ವಿಷಕಾರಿಯಾಗಿ ಮಾಡುವುದಲ್ಲದೇ, ಪೋಷಣ ಸಮಸ್ಯೆಯನ್ನುಂಟು ಮಾಡುತ್ತವೆ.
ಕ್ಯಾಡ್ಮಿಯಂ ಅಥವಾ ಇತರ ಟಾಕ್ಸಿಕ್ ಮೆಟಲ್ಗಳು ಆಹಾರಕ್ಕೆ ಮಿಶ್ರವಾಗಿ ಕ್ಯಾನ್ಸರ್, ಕಿಡ್ನಿ ಸಮಸ್ಯೆಗಳು ಮತ್ತು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ.
(ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ