ಭಾರತೀಯ ಬೀದಿ ಆಹಾರದ ಬಗ್ಗೆ ವಿದೇಶಿ ಪ್ರಯಾಣಿಕ ಮಾಡಿರುವ ವಿಡಿಯೋ ಇದೀಗ ವೈರಲ್​ ! Street Food

untitled-design-2025-10-06t115131563-68e35ff3deca0
Published on

Street Food : ಕೊಲ್ಕತ್ತಾದಲ್ಲಿರುವ ಪ್ರಸಿದ್ಧ 'ಚಾಂಗಾನಿ ಕ್ಲಬ್ ಕಚೋರಿ' ಸ್ಟಾಲ್‌ನ ಬಗ್ಗೆ ಭಾರತದ ಅತ್ಯಂತ ದುರಾದೃಷ್ಟಕರ ಬೀದಿ ಆಹಾರವನ್ನು ಪ್ರಯತ್ನಿಸಿದೆ ಎಂದು ಅಮೆರಿಕದ ವಿದೇಶಿ ಪ್ರಯಾಣಿಕನೊಬ್ಬ ಹಂಚಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇದು ಹುಚ್ಚುತನ ಎಂದು ಉದ್ಘರಿಸಿದ ನೇವಿಟಿ, ಈ ಅಂಗಡಿಯ ಮುಂದೆ ಸುಮಾರು 30-40 ಜನ ನಿಂತಿದ್ದಾರೆ ಎಂದು ತೋರಿಸುವ ವಿಡಿಯೋವನ್ನು ಮಾಡಿದ್ದು, ಅಲ್ಲಿನ ಸ್ಥಳೀಯ ವ್ಯಕ್ತಿಯೊಂದಿಗೆ ಪ್ರದೇಶದ ಜನಪ್ರಿಯತೆಯ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ.

ವಿದೇಶಿ ಪ್ರಯಾಣಿಕ "ಭಾರತದಲ್ಲಿ ಪ್ರಸಿದ್ಧ ಡರ್ಟಿ ಸ್ಟ್ರೀಟ್ ಫುಡ್" ಎಂಬ ಶೀರ್ಷಿಕೆಯ ಮುಂದಿನ ವಿಡಿಯೋದಲ್ಲಿ ಆಹಾರದ ಸ್ವಾದವನ್ನು ಅಂತಿಮವಾಗಿ ಬಹಿರಂಗ ಪಡಿಸಿದರು. ಗೂಪ್ ಸ್ಕೂಪ್ ಮತ್ತು ಕ್ಲಬ್ ಕಚೋರಿ. ಕಚ್ಚುವ ಮೊದಲು ಇದು ಅತ್ಯಂತ ನೈರ್ಮಲ್ಯವಾದ ಆಹಾರವೇ ಆದರೆ, ಇದು ತುಂಬಾ ರುಚಿಕರವಾಗಿದೆ ಎಂದು ಅಭಿಪ್ರಾಯ ಪಟ್ಟನು. ಇದಾದ ಕೆಲವು ನಿಮಿಷಗಳಲ್ಲಿ ನೇವಿಟಿ ಆಹಾರವನ್ನು ಉತ್ಸಾಹದಾಯಕವಾಗಿ ಸವಿಯಲು ಆರಂಭಿಸಿ, ವಾವ್​ ಇದು ತುಂಬಾ ಅದ್ಭುತವಾಗಿದೆ, ನಿಜವಾಗಿಯೂ ರುಚಿಯಾಗಿದೆ, ಬಿಸಿಯಾಗಿದೆ ಎಂದು ಆನಂದದಿಂದ ಸವಿಯುತ್ತಿದ್ದಾನೆ.

ನೆಟ್ಟಿಗರ ಪ್ರತಿಕ್ರಿಯೆ

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಆದ ಕೆಲವೇ ಸಮಯದಲ್ಲಿ ಅನೇಕ ಪ್ರತಿಕ್ರಿಯೆಯನ್ನು ಪಡೆಯಲಾರಂಭಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮದ ಬಳಕೆದಾರನೊಬ್ಬ “ನೀವು ಪಡೆಯಬಹುದಾದ ಅತ್ಯಂತ ಪ್ರಸಿದ್ಧವಾದ ಗೂಪ್ ಸ್ಕೂಪ್ ಖಾದ್ಯ ಅದು!” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ನಾನು ಭಾರತದಿಂದ ಬಂದವನು ಮತ್ತು ಈ ರೀತಿಯ ಆಹಾರ ತಿಂದ ನಂತರ ಆಹಾರ ವಿಷವಾಯಿತು ಎಂದು ಒಬ್ಬರು ಬರೆದುಕೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net