

ಆಂಧ್ರಪ್ರದೇಶ: ಟಾಲಿವುಡ್ನ ಪವರ್ ಸ್ಟಾರ್ ಪವನ್ ಕಲ್ಯಾಣ್ 'ಬ್ರೋ' ಸಿನಿಮಾದ ನಂತರ ಇದೀಗ 'ಓಜಿ' ಚಿತ್ರದಲ್ಲಿ ನಟಿಸುವ ಮುಖೇನ ಮತ್ತೊಮ್ಮೆ ಅಭಿಮಾನಿಗಳ ಮುಂದೆ ಭರ್ಜರಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಸದ್ಯ ಚಿತ್ರದ ಬಗ್ಗೆ ಈ ಹಿಂದಿನಿಂದಲೂ ಭಾರೀ ನಿರೀಕ್ಷೆ ವ್ಯಕ್ತಪಡಿಸಿರುವ ಅಭಿಮಾನಿಗಳಿಗೆ ಈಗ ಚಿತ್ರತಂಡದಿಂದ ಹೊಸ ಮಾಹಿತಿಯೊಂದು ಲಭಿಸಿದೆ.
ಇದನ್ನೂ ಓದಿ: ಗಾಯಾಳು ಆರೋಗ್ಯ ವಿಚಾರಿಸಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ
ಯುವ ನಿರ್ದೇಶಕ ಸುಜೀತ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಓಜಿ' ಚಿತ್ರದಲ್ಲಿ ಪವನ್ ಕಲ್ಯಾಣ್ಗೆ ನಾಯಕಿಯಾಗಿ ಪ್ರಿಯಾಂಕಾ ಮೋಹನ್ ಕಾಣಿಸಿಕೊಂಡಿದ್ದಾರೆ. ಇಂದು ಚಿತ್ರದ ಟೀಸರ್ ಅಥವಾ ಫಸ್ಟ್ ಲುಕ್ ಯಾವಾಗ ರಿಲೀಸ್ ಮಾಡಲಿದ್ದೀರಿ ಎಂದು ಪ್ರಶ್ನಿಸಿದ್ದ ಅಭಿಮಾನಿಗಳಿಗೆ ಉತ್ತರಿಸಿದ ಚಿತ್ರತಂಡ, ರಿಲೀಸ್ ಸಮಯ ಯಾವಾಗ ಎಂಬುದನ್ನು ನೀವೇ ಹೇಳಿ ಎಂದು ತಿಳಿಸಿತ್ತು.
ಇದೀಗ ಚಿತ್ರತಂಡ ತನ್ನ ಅಧಿಕೃತ ಖಾತೆಯಲ್ಲಿ 'ಓಜಿ' ಗ್ಲಿಂಪ್ಸ್ ವಿಡಿಯೋವನ್ನು ಸೆಪ್ಟೆಂಬರ್ 2, 2023ರ ಬೆಳಗ್ಗೆ 10:35ಕ್ಕೆ ರಿಲೀಸ್ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದೆ. ಸದ್ಯ ಈ ಸಂಗತಿ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಭಾರೀ ಸಂತಸ ತಂದಿದೆ ಎಂದೇ ಹೇಳಬಹುದು. ಚಿತ್ರದಲ್ಲಿ ಇಮ್ರಾನ್ ಹಶ್ಮಿ, ಪ್ರಕಾಶ್ ರಾಜ್, ಶ್ರೀಯಾ ರೆಡ್ಡಿ, ಅರ್ಜುನ್ ದಾಸ್ ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ,(ಏಜೆನ್ಸೀಸ್).