

ಆಂಧ್ರಪ್ರದೇಶ: ಟಾಲಿವುಡ್ನ ಸ್ಟಾರ್ ನಟ ವಿಜಯ್ ದೇವರಕೊಂಡ ಮತ್ತು ನಟಿ ಸಮಂತಾ ರುತ್ ಪ್ರಭು ನಟನೆಯ ಬಹುನಿರೀಕ್ಷಿತ 'ಖುಷಿ' ಚಿತ್ರ ಸೆಪ್ಟಂಬರ್ 01 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಅದ್ದೂರಿ ಬಿಡುಗಡೆಗೆ ಸಜ್ಜಾಗಿದೆ. ಈ ಮಧ್ಯೆ ಚಿತ್ರದ ನಿರ್ದೇಶಕ ಶಿವ ನಿರ್ವಾಣ ಇತ್ತೀಚಿನ ಸಂದರ್ಶನದಲ್ಲಿ ಭಾಗಿಯಾಗಿದ್ದು, ಅಧಿಕ ರನ್ ಟೈಮ್ಗೆ ಕಾರಣವೇನು ಎಂಬುದರ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ಜಿಲ್ಲೆಯ, ರಾಜ್ಯದ ರೈತರಿಗೆ ದ್ರೋಹ ಮಾಡಿದ ಸರ್ಕಾರ:ಆರೋಪ
'ಖುಷಿ' ಚಿತ್ರವು ಬರೋಬ್ಬರಿ 2 ಗಂಟೆ 45 ನಿಮಿಷಗಳ ರನ್ ಟೈಮ್ ಹೊಂದಿದೆ, ಅಂದರೆ ಬರೋಬ್ಬರಿ 163 ನಿಮಿಷಗಳ ಅವಧಿಯಿರುವ ರೋಮ್ಯಾಂಟಿಕ್-ಕಾಮಿಡಿ ಜಾನರ್ನ ಈ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸಿದ್ದಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ, ಚಿತ್ರಕ್ಕೆ ಇಷ್ಟು ದೀರ್ಘಾವಧಿಯ ರನ್ ಟೈಮ್ ಸಮಸ್ಯೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗಿದು ಸಮಸ್ಯೆ ಎಂದು ಅನಿಸಿಲ್ಲ ಎಂದು ಹೇಳಿದ್ದಾರೆ.
"ಸಂಪೂರ್ಣ ಚಿತ್ರವನ್ನು ತಮ್ಮ ತಂಡಕ್ಕೆ ತೋರಿಸಿದ್ದೇನೆ. ಇದನ್ನು ನೋಡಿದವರ ಪ್ರತಿಕ್ರಿಯೆ ಸಾಕಷ್ಟು ಅನುಕೂಲಕರವಾಗಿದೆ. ತಂಡದಿಂದ ಯಾರೂ ಕೂಡ ರನ್ ಟೈಮ್ ಬಗ್ಗೆ ದೂರು ನೀಡಿಲ್ಲ. ನನ್ನ ಟೀಮ್ನವರು ಹೇಳಿದ್ದಿದ್ದರೆ ಚಿಂತಿಸುತ್ತಿದ್ದೆ. ಚಿತ್ರದ ಅಧಿಕ ರನ್ ಟೈಮ್ ಬಗ್ಗೆ ನಮ್ಮಲ್ಲಿ ಯಾವತ್ತೂ ಚರ್ಚೆ ನಡೆದಿಲ್ಲ" ಎಂದು ಶಿವ ನಿರ್ವಾಣ ಹೇಳಿದ್ದಾರೆ,(ಏಜೆನ್ಸೀಸ್).