ಒತ್ತುವರಿ ಮಾಡಿದ್ದಾರೆಂದು ರೈತನ ನಾಲ್ಕು ಎಕರೆ ತೋಟದಲ್ಲಿ ಹೂವು ಬಿಟ್ಟ ಕಾಫಿ ಗಿಡಗಳನ್ನು ಕತ್ತರಿಸಿದ ಅಧಿಕಾರಿಗಳು..

Coffee Plant 12 march 20
Published on

ಚಿಕ್ಕಮಗಳೂರು: ಇತ್ತೀಚೆಗೆ ತುಮಕೂರಿನ ತಿಪ್ಪೂರಿನಲ್ಲಿ ರಾತ್ರೋರಾತ್ರಿ ನೂರಾರು ತೆಂಗು ಮತ್ತು ಅಡಕೆ ಮರಗಳನ್ನು ಕಡಿದ್ದಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಆ ಪ್ರಕರಣದಲ್ಲಿ ಗುಬ್ಬಿ ತಹಸೀಲ್ದಾರ್​ರನ್ನು ಕಂದಾಯ ಸಚಿವ ಆರ್.ಅಶೋಕ್​ ಅಮಾನತು ಮಾಡಿದ್ದಾರೆ ಕೂಡ.

ಈಗ ಇಂಥದ್ದೇ ಒಂದು ಪ್ರಕರಣ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ದೇವಗೋಡು ಗ್ರಾಮದಲ್ಲಿ ನಡೆದಿದೆ. ರೈತ ದಿನೇಶ್​ ಹೆಬ್ಬಾರ್​ ಎಂಬುವರ ನಾಲ್ಕು ಎಕರೆ ತೋಟದಲ್ಲಿ ಹೂವು ಬಿಟ್ಟು ನಿಂತಿದ್ದ ಕಾಫಿ ಗಿಡಗಳನ್ನು ಅಧಿಕಾರಿಗಳು ಕಡಿದುರುಳಿಸಿದ ಆರೋಪ ಕೇಳಿಬಂದಿದೆ.

ಈ ತೋಟ ದೇವಗೋಡು ಗ್ರಾಮದ ಸರ್ವೇ ನಂಬರ್​ 78ರಲ್ಲಿ ಇದೆ. ಅರಣ್ಯ ಒತ್ತುವರಿ ಮಾಡಿಕೊಂಡು ತೋಟ ನಿರ್ಮಿಸಿದ್ದಾರೆ ಎಂಬ ಕಾರಣಕ್ಕೆ ನಾಲ್ಕು ಎಕರೆಯಲ್ಲಿದ್ದ ಕಾಫಿ ಗಿಡಗಳನ್ನು ಅಧಿಕಾರಿಗಳು ಕತ್ತರಿಸಿದ್ದಾರೆ ಎನ್ನಲಾಗಿದೆ. ಇದರಿಂದ ರೈತ ದಿನೇಶ್​ ಹೆಬ್ಬಾರ್​ ಕಂಗಾಲಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net