

ಕೋಲಾರ: ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಗೆ ಸರಬರಾಜು ಮಾಡಿದ್ದ ಲೋಟ-ತಟ್ಟೆಗೆ ಸಂಬಂಧಿಸಿದ ಬಿಲ್ ಪಾಸ್ ಮಾಡಲಿಕ್ಕೂ ಲಂಚ ಕೇಳಿದ ಜಿಲ್ಲಾ ಶಸ್ತ್ರಚಿಕಿತ್ಸಕ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಕೋಲಾರದ ಎಸ್ಎನ್ಆರ್ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಿ.ಎಸ್. ರವಿಕುಮಾರ್ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಚೇರಿಯಲ್ಲೇ 25 ಸಾವಿರ ರೂಪಾಯಿ ಪಡೆಯುವಾಗ ಸಿಕ್ಕಿಹಾಕಿಕೊಂಡಿದ್ದಾನೆ.
ಕೋವಿಡ್ ಸಂದರ್ಭದಲ್ಲಿ ಕಿರಣ್ಕುಮಾರ್ ಎಂಬವರು ಆಸ್ಪತ್ರೆಗೆ ಲೋಟ-ತಟ್ಟೆ ಸರಬರಾಜು ಮಾಡಿದ್ದರು. ಆದರೆ ಬಿಲ್ ಪಾಸ್ ಮಾಡಲು 25 ಸಾವಿರ ರೂಪಾಯಿ ಲಂಚ ಕೇಳಿದ್ದ. ಈ ಬಗ್ಗೆ ಕಿರಣ್ಕುಮಾರ್ ಎಸಿಬಿಗೆ ತಿಳಿಸಿದ್ದರು. ಎಸಿಬಿ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.