ಮೂರು ವರ್ಷದ ಅವಳಿ ಮಕ್ಕಳ ಸಾವಿನ ಬೆನ್ನಿಗೆ ತಾಯಿಯೂ ನಿಧನ; ತಂದೆ ಇನ್ನೂ ಆಸ್ಪತ್ರೆಯಲ್ಲಿ...

Twins F
Published on

ಹಾಸನ: ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ನಡೆದ ಭೀಕರ ಅಪಘಾತದಲ್ಲಿ ಮೂರು ವರ್ಷದ ಅವಳಿ ಮಕ್ಕಳ ಸ್ಥಳದಲ್ಲೇ ಸಾವಿಗೀಡಾದ ಬೆನ್ನಿಗೆ ಇಂದು ತಾಯಿ ಕೂಡ ಮೃತಪಟ್ಟಿದ್ದು, ತಂದೆ ಆಸ್ಪತ್ರೆಯಲ್ಲಿನ್ನೂ ಜೀವನ್ಮರಣ ಹೋರಾಟದಲ್ಲಿದ್ದಾರೆ.

ಹಾಸನದ ಗವೇನಹಳ್ಳಿಯ ಶಿವಾನಂದ್-ಜ್ಯೋತಿ ದಂಪತಿ ಅವಳಿ ಮಕ್ಕಳಾದ ಮೂರು ವರ್ಷದ ಪ್ರಣತಿ, ಪ್ರಣವ್​ ಜೊತೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಲಾರಿಯೊಂದು ಡಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ಮಕ್ಕಳಿಬ್ಬರೂ ಸಾವಿಗೀಡಾಗಿದ್ದು, ಅವರ ದೇಹ ಲಾರಿಯ ಚಕ್ರಕ್ಕೆ ಸಿಲುಕಿ ಸುಮಾರು ದೂರ ಎಳೆದೊಯ್ಯಲ್ಪಟ್ಟಿದ್ದು, ಅಪ್ಪ-ಅಮ್ಮ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು.

ಘಟನೆ ಬಳಿಕ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು ತಾಯಿ ಜ್ಯೋತಿ ಸಾವಿಗೀಡಾಗಿದ್ದಾರೆ. ಹಾಸನದ ಭೂವನಹಳ್ಳಿ ಸಮೀಪ ಈ ಅಪಘಾತ ಸಂಭವಿಸಿದ್ದು, ಚಾಲಕ ಪಾನಮತ್ತನಾಗಿ ವಾಹನ ಚಲಾಯಿಸಿ ಒಟ್ಟು ನಾಲ್ಕು ಬೈಕ್​ಗಳಿಗೆ ಡಿಕ್ಕಿ ಹೊಡೆದಿದ್ದ. ನಂತರ ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net