ಒಡಿಶಾ ವಿದ್ಯಾರ್ಥಿನಿ ಸಜೀವ ದಹನ ಪ್ರಕರಣ: ಕಾಲೇಜು ಆಡಳಿತ ಮಂಡಳಿಗೆ ಛೀಮಾರಿ ಹಾಕಿದ ಸುಪ್ರೀಂಕೋರ್ಟ್​ Odisha student Death

new-project-6877447f40fab-6879ec28e072e
Published on

Odisha student Death: ಒಡಿಶಾದ ವಿದ್ಯಾರ್ಥಿನಿ ಸಜೀವ ದಹನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲೈಂಗಿಕ ಕಿರುಕುಳದ ಬಗ್ಗೆ ಕಾಲೇಜು ಆಡಳಿತ ಮಂಡಳಿಗೆ ವಿದ್ಯಾರ್ಥಿನಿ ಹಲವು ಬಾರಿ ದೂರು ನೀಡಿದ್ದರೂ, ಅಲ್ಲಿನ ಅಧಿಕಾರಿಗಳು ಕ್ರಮಕೈಗೊಳ್ಳದಿರುವುದು ನಾಚಿಕೆಗೇಡು ಎಂದು ಸುಪ್ರೀಂಕೋರ್ಟ್​ ಛೀಮಾರಿ ಹಾಕಿದೆ.

''ಇಂತಹ ಘಟನೆಗಳು ಇನ್ನೂ ನಡೆಯುತ್ತಿರುವುದು ದುರದೃಷ್ಟಕರ ಸಂಗತಿಯಾಗಿದ್ದು, ನಮಗೆ ನಾಚಿಕೆಯಾಗುತ್ತಿದೆ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್​ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ದ್ವಿಸದಸ್ಯ ಪೀಠ ಹೇಳಿದೆ'' .

''ಶಾಲಾ ಹುಡುಗಿಯರು, ಗೃಹಿಣಿಯರು ಮತ್ತು ಗ್ರಾಮೀಣ ಪ್ರದೇಶಗಳ ಮಕ್ಕಳ ಸಬಲೀಕರಣಕ್ಕೆ ಯಾವ ರೀತಿಯ ಕ್ರಮಗಳನ್ನು ತಗೆದುಕೊಳ್ಳುವುದ ಬಗ್ಗೆ ಸಲಹೆಗಳನ್ನು ಸುಪ್ರೀಂಕೋರ್ಟ್​ ಕೇಳಿದೆ. ಈ ವಿಷಯವಾಗಿ ಕೇಂದ್ರ ಸರ್ಕಾರ ಸೇರಿದಂತೆ ಎಲ್ಲ ಪಕ್ಷಗಳಿಂದಲೂ ಸಲಹೆಗಳು ಬೇಕಾಗುತ್ತವೆ'' ಎಂದು ಪೀಠ ಹೇಳಿದೆ.

ಸಂತ್ರಸ್ತೆ ಪರ ವಕೀಲೆ ಹೇಳಿದ್ದೇನು?

ಮಹಿಳೆಯರು, ಮಕ್ಕಳು ಮತ್ತು ತೃತೀಯಲಿಂಗಿ ಸುರಕ್ಷಿತ ವಾತಾವರಣಕ್ಕಾಗಿ ಪ್ಯಾನ್-ಇಂಡಿಯಾ ಮಾರ್ಗಸೂಚಿಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸುವ ಸಮಯದಲ್ಲಿ, ಹಿರಿಯ ವಕೀಲೆ ಮಹಾಲಕ್ಷ್ಮಿ ಪಾವನಿ, ''ಒಡಿಶಾ ಆತ್ಮಹತ್ಯಾ ಪ್ರಕರಣದ ಕುರಿತು ಸಂತ್ರಸ್ತೆ ಸಹಾಯವಾಣಿಗೆ ಕರೆ ಮಾಡಿದ್ದರೂ ಯಾವುದೇ ರೀತಿಯ ನೆರವು ನೀಡಿಲ್ಲ. ಈ ವಿಷಯವಾಗಿ ಸರ್ಕಾರಕ್ಕೆ ಪತ್ರಗಳನ್ನು ಕಳುಹಿಸಲಾಗಿದೆ. ಇಂತಹ ಸಂದರ್ಭದಲ್ಲಿ ತುರ್ತು ಸೇವೆ ಅಗತ್ಯ'' ಎಂದು ವಾದಿಸಿದರು.

ವ್ಯವಸ್ಥೆಯು ಕ್ರಮ ಕೈಗೊಳ್ಳದ ಕಾರಣ ಈ ಪ್ರಕರಣವನ್ನು ''ಸಾಂಸ್ಥಿಕ ಕೊಲೆ'' ಎಂದು ಕರೆದರು. ಆನ್‌ಲೈನ್ ದೂರು ಕಾರ್ಯವಿಧಾನಗಳ ಬಗ್ಗೆ ಜನರಿಗೆ ಮಾಹಿತಿ ಇಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದರು.

ಸಹಾಯಕ ಪ್ರಾಧ್ಯಾಪಕರೊಬ್ಬರು ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿನಿ ಆಡಳಿತ ಮಂಡಳಿಗೆ ಹಲವು ಬಾರಿ ದೂರು ನೀಡಿದ್ದರು. ಕ್ರಮಕೈಗೊಳ್ಳದ ಹಿನ್ನೆಲೆ, ಜುಲೈ 12 ರಂದು ಬಾಲಸೋರ್‌ನ ಫಕೀರ್ ಮೋಹನ್ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲರ ಕಚೇರಿಯ ಹೊರಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಳು. ವಿದ್ಯಾರ್ಥಿನಿ ಭುವನೇಶ್ವರದ ಏಮ್ಸ್‌ನಲ್ಲಿ ಶೇ. 95 ರಷ್ಟು ಸುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಜು.15ರಂದು ಮೃತಪಟ್ಟಿದ್ದಳು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net