More

    ತನ್ನನ್ನೇ ಹೋಲುವ ಯುವತಿಯ ಅಶ್ಲೀಲ ವಿಡಿಯೋ ವೈರಲ್​: ದೂರು ದಾಖಲಿಸಿದ ಯುವ ಕಾಂಗ್ರೆಸ್​ ನಾಯಕಿ

    ಆಲಪ್ಪುಳ: ತನ್ನನ್ನೇ ಹೋಲುವ ಯುವತಿಯೊಬ್ಬಳ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ಕೇರಳದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೀನು ಸಜೀವ್ ದೂರು ನೀಡಿದ್ದಾರೆ.

    ವಲ್ಲಿಕ್ಕುನ್ನು ಮೂಲದ ವಲಸಿಗರೊಬ್ಬರು ಅಶ್ಲೀಲ ವಿಡಿಯೋವನ್ನು ವಾಟ್ಸ್​ಆ್ಯಪ್​ನಲ್ಲಿ ಕಳುಹಿಸಿದ್ದಾರೆ ಎಂದು ಅಲಪ್ಪುಳ ಎಸ್‌ಪಿಗೆ ನೀಡಿದ ದೂರಿನಲ್ಲಿ ಮೀನು ಸಜೀವ್​ ಉಲ್ಲೇಖಿಸಿದ್ದಾರೆ. ವಲಸಿಗನ ಪತ್ನಿಯೂ ಸಹ ತನ್ನ ಫ್ರೆಂಡ್ಸ್​ಗೆ ಅಶ್ಲೀಲ ವಿಡಿಯೋವನ್ನು ಶೇರ್​ ಮಾಡಿದ್ದಾಳೆ ಎಂದು ಮೀನು ಆರೋಪಿಸಿದ್ದಾರೆ.

    ಮೊದಲು ವಲ್ಲಿಕ್ಕುನ್ನಂ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಎಸ್‌ಪಿಗೆ ದೂರು ನೀಡಿದ್ದೇನೆ ಎಂದು ಮೀನು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ಸೈಬರ್‌ಸ್ಪೇಸ್‌ನಲ್ಲಿ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಎಡಿಟ್​ ಮಾಡಲಾದ ವಿಡಿಯೋಗಳನ್ನು ಹರಿಬಿಟ್ಟು ಮಾನಹಾನಿ ಮಾಡುವ ಪ್ರಯತ್ನಗಳು ನಡೆಯುತ್ತಿದೆ. ಈ ಕಾರಣದಿಂದಲೇ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿರುವುದಾಗಿ ಮೀನು ಸ್ಪಷ್ಟಪಡಿಸಿದ್ದಾರೆ.

    ಈ ಘಟನೆಯ ಹಿಂದೆ ಏನಾದರೂ ರಾಜಕೀಯ ಉದ್ದೇಶವಿದೆಯೇ ಎಂದು ಪೊಲೀಸರು ತನಿಖೆ ನಡೆಸಿ ಪತ್ತೆ ಮಾಡಬೇಕು ಎಂದು ಮೀನು ಹೇಳಿದರು. (ಏಜೆನ್ಸೀಸ್​)

    ಅದನ್ನು ದಪ್ಪ ಮಾಡಿಕೊಳ್ಳಲು ಹೇಳುತ್ತಿದ್ದರು! ಸಿನಿ ಇಂಡಸ್ಟ್ರಿಯ ಕರಾಳತೆ ಬಿಚ್ಚಿಟ್ಟ ನಟಿ ಸಮೀರಾ ರೆಡ್ಡಿ

    ಶಾಲೆಯ ಆವರಣದೊಳಗೆ ಬಿಜೆಪಿ ಕಾರ್ಯಕರ್ತೆಯ ಶವ ಪತ್ತೆ! 4 ದಿನ ಮುಚ್ಚಿದ್ದ ಸ್ಟೇಷನರಿ ಶಾಪ್ ರಹಸ್ಯ ಬಯಲು ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts