More

    ಶಾಲೆಯ ಆವರಣದೊಳಗೆ ಬಿಜೆಪಿ ಕಾರ್ಯಕರ್ತೆಯ ಶವ ಪತ್ತೆ! 4 ದಿನ ಮುಚ್ಚಿದ್ದ ಸ್ಟೇಷನರಿ ಶಾಪ್ ರಹಸ್ಯ ಬಯಲು ​

    ನವದೆಹಲಿ: ಕೆಲವು ದಿನಗಳಿಂದ ನಾಪತ್ತೆಯಾಗಿದ್ದ 28 ವರ್ಷದ ಬಿಜೆಪಿ ಕಾರ್ಯಕರ್ತೆ ವರ್ಷಾ ಪವಾರ್​, ಉತ್ತರ ದೆಹಲಿಯ ನರೇಲಾ ಏರಿಯಾದಲ್ಲಿರುವ ಶಾಲೆಯ ಆವರಣದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

    ವರ್ಷಾ ಶವ ಇರುವ ಬಗ್ಗೆ ಮಾಹಿತಿ ಪಡೆದ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಪೊಲೀಸ್​ ತಂಡ ಪರಿಶೀಲನೆ ನಡೆಸಿ, ಸ್ಥಳದಲ್ಲಿ ನೆರೆದಿದ್ದ ಸ್ಥಳೀಯರ ಹೇಳಿಕೆಗಳನ್ನು ಪಡೆದ ತನಿಖೆಯನ್ನು ಆರಂಭಿಸಿದೆ.

    ಮೂಲಗಳ ಪ್ರಕಾರ ಮೃತ ವರ್ಷಾ, ನರೇಲಾದ ಸ್ವತಂತ್ರ ನಗರದಲ್ಲಿರುವ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಅಲ್ಲದೆ, ಆ ಶಾಲೆಗೆ ಆಕೆಯು ಸಹ ಓನರ್​ ಆಗಿದ್ದಳು. ಆಕೆಯ ಬಿಸಿನೆಸ್​ ಪಾಲುದಾರ ಸೋಹನ್​ಲಾಲ್​, ವರ್ಷಾಳ ಸಾವಿಗೆ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ. ಆದರೆ, ಸೋಹನ್​ಲಾಲ್​ ಕೂಡ ಸೋನಿಪತ್​ನಲ್ಲಿ ರೈಲಿನ ಮುಂದೆ ಜಿಗಿದು ಸಾವಿಗೆ ಶರಣಾಗಿದ್ದಾನೆ.

    ಫೆಬ್ರವರಿ 24ರಿಂದ ವರ್ಷಾ ಕಾಣೆಯಾಗಿದ್ದಳು. ಆಕೆಯನ್ನು ಸಂಪರ್ಕಿಸಲು ಕುಟುಂಬ ವಿಫಲವಾದಾಗ ಕೊನೆಯ ಆಯ್ಕೆ ಎಂಬಂತೆ ತಮ್ಮ ವ್ಯಾಪ್ತಿಯ ಪೊಲೀಸ್​ ಠಾಣೆಯಲ್ಲಿ ವರ್ಷಾ ಪಾಲಕರು ನಾಪತ್ತೆ ದೂರು ದಾಖಲಿಸಿದ್ದರು. ದೂರು ನೀಡಿದ ಕೆಲವು ದಿನಗಳ ಬಳಿಕ ವರ್ಷಾ ಮೃತದೇಹ ಶಾಲೆಯ ಆವರಣದಲ್ಲಿರುವ ಸ್ಟೇಷನರಿ ಶಾಪ್​ ಒಳಗಡೆ ಪತ್ತೆಯಾಗಿದೆ.

    ವರ್ಷಾ ಕೆಲಸ ಮಾಡುತ್ತಿದ್ದ ಶಾಲೆಯ ಆವರಣದಲ್ಲಿರುವ ಸ್ಟೇಷನರಿ ಶಾಪ್ ಕಳೆದ ನಾಲ್ಕು ದಿನಗಳಿಂದ ಮುಚ್ಚಿತ್ತು. ಅನುಮಾನಗೊಂಡ ವರ್ಷಾಳ ತಂದೆ ಬುಧವಾರ ಮಧ್ಯಾಹ್ನ ಬಲವಂತವಾಗಿ ಓಪನ್​ ಮಾಡಿಸಿದಾಗ ಆಕೆಯ ಮೃತದೇಹ ಒಳಗಡೆ ಪತ್ತೆಯಾಗಿದೆ. ಆಕೆಯ ಕುತ್ತಿಗೆಯಲ್ಲಿ ಗಾಯದ ಕಲೆ ಇದ್ದು, ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸೋಹನ್​ಲಾಲ್ ಮತ್ತು ವರ್ಷಾ ನಡುವಿನ ಸಂಬಂಧದಲ್ಲಿದ್ದ ಕಲಹವೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

    ದೆಹಲಿ ಪೊಲೀಸರ ಪ್ರಕಾರ ವರ್ಷಾ ಬಿಜೆಪಿ ಕಾರ್ಯಕರ್ತೆಯಾಗಿದ್ದಳು. ತಮ್ಮ ಮಗಳು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದರೂ ಪೊಲೀಸರು ಆಕೆಯ ಪತ್ತೆಗೆ ಕ್ರಮ ಕೈಗೊಳ್ಳಲಿಲ್ಲ ಎಂದು ಸಂತ್ರಸ್ತೆಯ ಕುಟುಂಬದವರು ದೂರಿದ್ದಾರೆ. (ಏಜೆನ್ಸೀಸ್​)

    ಅದನ್ನು ದಪ್ಪ ಮಾಡಿಕೊಳ್ಳಲು ಹೇಳುತ್ತಿದ್ದರು! ಸಿನಿ ಇಂಡಸ್ಟ್ರಿಯ ಕರಾಳತೆ ಬಿಚ್ಚಿಟ್ಟ ನಟಿ ಸಮೀರಾ ರೆಡ್ಡಿ

    ಈ ಒಂದು ಗಿಫ್ಟ್​ ಕೊಟ್ಟರೆ ನಾನು ನಿಮ್ಮವಳು! ಅಭಿಮಾನಿಗಳಿಗೆ ಬಂಪರ್​ ಆಫರ್​ ಕೊಟ್ಟ ಅನುಪಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts