More

    ಪಾಕ್ ಪರ ಘೊಷಣೆ ಕೂಗಿದ ಆರೋಪ; ಮಹ್ಮದ್​ಶಫಿ ನಾಶೀಪುಡಿ ಬಂಧನಕ್ಕೆ ಆಗ್ರಹ

    ಬ್ಯಾಡಗಿ: ವಿಧಾನಸೌಧದಲ್ಲಿ ಪಾಕ್ ಪರ ಘೊಷಣೆ ಕೂಗಿದ ಆರೋಪದಡಿ ಬ್ಯಾಡಗಿ ಮೆಣಸಿನಕಾಯಿ ವರ್ತಕ ಮಹ್ಮದ್​ಶಫಿ ನಾಶೀಪುಡಿ ವಿರುದ್ಧ ಬಿಜೆಪಿ ತಾಲೂಕು ಘಟಕ ಕಾರ್ಯಕರ್ತರು ಬುಧವಾರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ.

    ಆರೋಪಿ ಬಂಧನಕ್ಕೆ ಆಗ್ರಹಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ. ಗೋಪಾಲ ಅವರಿಗೆ ಮನವಿ ಸಲ್ಲಿಸಲಾಯಿತು. ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಕಾಂಗ್ರೆಸ್​ನಿಂದ ರಾಜ್ಯಸಭೆಗೆ ಸದಸ್ಯರಾಗಿ ಆಯ್ಕೆಯಾದ ನಾಸೀರ್ ಹುಸೇನ್ ವಿಜಯೋತ್ಸವದ ವೇಳೆ ಮಹ್ಮದ್​ಶಫಿ ನಾಶೀಪುಡಿ ಪಾಕ್ ಪರ ಘೊಷಣೆ ಕೂಗಿದ್ದು ಮಾಧ್ಯಮಗಳಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ದೇಶದ್ರೋಹದ ಹೇಳಿಕೆ ನೀಡಿದ ಮಹ್ಮದ್​ಶಫಿಯನ್ನು ಪೊಲೀಸರು ಸ್ಥಳದಲ್ಲೇ ಬಂಧಿಸಬೇಕಿತ್ತು. ಘಟನೆ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

    ತನಿಖೆಗೆ ಒತ್ತಾಯ:

    ಆರೋಪಿ ಮಹ್ಮದ್​ಶಫಿ ನಾಶೀಪುಡಿ ವಿರುದ್ಧ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಆದರೆ, ರಾಜ್ಯ ಸರ್ಕಾರದಿಂದ ಪಾದರ್ಶಕ ತನಿಖೆ ಅಸಾಧ್ಯ. ತನಿಖೆಯ ದಿಕ್ಕು ತಪ್ಪಿಸುವ ಸಾಧ್ಯತೆಯಿದೆ. ಹೀಗಾಗಿ, ಕೂಡಲೇ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್​ಐಎ) ವಹಿಸಿಕೊಡುವಂತೆ ಒತ್ತಾಯಿಸಿದರು.

    ಮಾರುಕಟ್ಟೆಗೆ ಕಳಂಕ:

    ಜಿಲ್ಲಾ ಘಟಕದ ಬಿಜೆಪಿ ಉಪಾಧ್ಯಕ್ಷ ಬಸವರಾಜ ಛತ್ರದ ಮಾತನಾಡಿ, ವಿಶ್ವಪ್ರಸಿದ್ಧ ಮಾರುಕಟ್ಟೆಯ ವರ್ತಕರಾಗಿರುವ ಇವರ ಕಾರ್ಯಚಟುವಟಿಕೆ ಕುರಿತು ಸಮಗ್ರ ತನಿಖೆ ನಡೆಸಬೇಕು. ಘಟನೆಯಿಂದ ಬ್ಯಾಡಗಿ ಮಾರುಕಟ್ಟೆಗೆ ಕಳಂಕ ಬರಲಿದ್ದು, ದೇಶದ್ರೋಹದ ಕೆಲಸ ಯಾರೇ ಮಾಡಿದ್ದರೂ ಜನ ಸಹಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ವಕೀಲ ಎನ್.ಎಸ್. ಬಟ್ಟಲಕಟ್ಟಿ, ಹಾಲೇಶ ಜಾಧವ, ಶಿವರಾಜ ಅಂಗಡಿ, ಶಿವಯೋಗಿ ಶಿರೂರ, ಈರಣ್ಣ ಬಣಕಾರ, ವಿನಯ ಹಿರೇಮಠ, ಗಣೇಶ ಅಚಲಕರ, ಪ್ರಕಾಶ ಅಂಕಲಕೋಟಿ, ನಂದೀಶ ವೀರನಗೌಡ್ರ, ಸುಭಾಸ ಮಾಳಗಿ, ಪ್ರಶಾಂತ ಯಾದವಾಡ, ಪ್ರದೀಪ ಜಾಧವ, ಮಂಜುನಾಥ ಜಾಧವ, ಸಂಗಮೇಶ ಬೇವಿನಮಟ್ಟಿ ಇತರರು ಇದ್ದರು.

    ವಿಧಾನಸೌಧದಲ್ಲಿ ಪಾಕ್ ಪರ ಘೊಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕೂಡಲೇ ಬಂಧಿಸುವ ಮೂಲಕ ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಪೋಲಿಸರಿಗೆ ಸಲ್ಲಿಸಿದ ದೂರನ್ನು ಗಂಭೀರವಾಗಿ ಪರಿಗಣಿಸಬೇಕು.

    | ಸುರೇಶ ಉದ್ಯೋಗಣ್ಣನವರ, ಹಿರಿಯ ಬಿಜೆಪಿ ಮುಖಂಡ

    ಅಂಜುಮನ್-ಎ-ಇಸ್ಲಾಂ ಯಾವುದೇ ಕಾರಣಕ್ಕೂ ದೇಶದ್ರೋಹ, ರಾಷ್ಟ್ರೀಯತೆಗೆ ಧಕ್ಕೆ ಉಂಟು ಮಾಡುವ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುವುದಿಲ್ಲ, ಘಟನೆ ತನಿಖೆ ಹಂತದಲ್ಲಿದ್ದು ಸತ್ಯ ಹೊರಬರಲಿ.

    | ಡಾ. ಎ.ಎಂ. ಸೌದಾಗರ

    ಅಂಜುಮನ್-ಏ-ಇಸ್ಲಾಂ ಸಮಿತಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts