Champions Trophy| ಹರಿಣಗಳ ವಿರುದ್ಧ ಕಿವೀಸ್​​ಗೆ ಭರ್ಜರಿ ಜಯ; ಭಾರತದ ವಿರುದ್ಧ ಫೈನಲ್​ನಲ್ಲಿ ಸೆಣಸಲಿದೆ ನ್ಯೂಜಿಲೆಂಡ್​

Ind Vs Nz
Published on

ಲಾಹೋರ್​: ಇಲ್ಲಿನ ಗಡಾಫಿ ಕ್ರೀಡಾಂಗಣದಲ್ಲಿ ಚಾಂಪಿಯನ್ಸ್ ಟ್ರೋಫಿಯ (Champions Trophy) ಎರಡನೇ ಸೆಮಿಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ದಕ್ಷಿಣ ಆಫ್ರಿಕಾವನ್ನು ಮಣಿಸಿ ಫೈನಲ್​ ಪ್ರವೇಶಿಸಿದ್ದು, ಭಾನುವಾರ ದುಬೈನಲ್ಲಿ ಭಾರತದ ವಿರುದ್ಧ ಪ್ರಶಸ್ತಿಗಾಗಿ ಕಾದಾಡಲಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವು ಯುವ ಆರಂಭಿಕ ರಚಿನ್ ರವೀಂದ್ರ (108 ರನ್, 101 ಎಸೆತ, 13 ಬೌಂಡರಿ, 1 ಸಿಕ್ಸರ್​), ಮಾಜಿ ನಾಯಕ ಕೇನ್ ವಿಲಿಯಮ್ಸನ್​ (102 ರನ್, 94 ಎಸೆತ, 10 ಬೌಂಡರಿ, 2 ಸಿಕ್ಸರ್​) ಶತಕಗಳ ಫಲವಾಗಿ 6 ವಿಕೆಟ್ ನಷ್ಟಕ್ಕೆ 362 ರನ್ ಗಳಿಸಿತು.

ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್​ಗಿಡಿ (10-0-72-3), ಕಗಿಸೋ ರಬಾಡಾ (10-1-70-2), ವಿಯಾನ್ ಮುಲ್ಡರ್ (6-0-48-1), ಕೇಶವ್ ಮಹಾರಾಜ್​ (10-0-65-0), ಮಾರ್ಕೋ ಜೇನ್ಸನ್​ (10-0-79-0), ಏಡೆನ್ ಮಾರ್ಕ್ರಮ್​ (4-0-23-0) ರನ್​ ನೀಡಿ ವಿಕೆಟ್ ಪಡೆದಿದ್ದಾರೆ.

363 ರನ್​ಗಳ ಕಠಿಣ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡದ ಪರ ಡೇವಿಡ್ ಮಿಲ್ಲರ್ (100 ರನ್, 67 ಎಸೆತ, 10 ಬೌಂಡರಿ, 4 ಸಿಕ್ಸರ್​), ವಾನ್​ ಡರ್​ ಡುಸೆನ್ (69 ರನ್, 66 ಎಸೆತ, 4 ಬೌಂಡರಿ, 2 ಸಿಕ್ಸರ್​), ಟೆಂಬಾ ಬವುಮಾ (56 ರನ್, 71 ಎಸೆತ, 4 ಬೌಂಡರಿ, 1 ಸಿಕ್ಸರ್), ದಿಟ್ಟ ಪ್ರತಿರೋಧದ ಹೊರತಾಗಿಯೂ ಕಿವೀಸ್​ ದಾಳಿಗೆ ನಲುಗಿ 50 ರನ್​ಗಳ ಸೋಲೊಪ್ಪಿಕೊಂಡಿತು.

ನ್ಯೂಜಿಲೆಂಡ್ ಪರ ಮಿಚೆಲ್ ಬ್ರೇಸ್​ವೆಲ್​ (10-0-53-1), ಮೈಕೆಲ್ ಬ್ರೇಸ್​ವೆಲ್ (10-0-43-3), ವಿಲಿಯಮ್ ಓರೌರರ್ಕ್ (8-0-69-0), ಮ್ಯಾಟ್ ಹೆನ್ರಿ (7-0-43-2), ರಚಿನ್ ರವೀಂದ್ರ (5-0-20-1), ಗ್ಲೆನ್ ಫಿಲಿಪ್ಸ್ (3-0-27-2), ಕೈಲ್ ಜೇಮಿಸನ್ (7-1-57-0) ರನ್ ನೀಡಿ ವಿಕೆಟ್ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net