ಆತನನ್ನು ನೋಡಿದ್ರೆ... ವಿರಾಟ್ ಕೊಹ್ಲಿ ಹೀರೋಯಿಕ್ಸ್ಅನ್ನು ಪಾಕ್​​ ಪ್ಲೇಯರ್​ಗೆ ಹೋಲಿಸಿದ ಭಾರತದ ಮಾಜಿ ಕೋಚ್​

Virat Kohli
Published on

ನವದೆಹಲಿ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ (84 ರನ್, 98 ಎಸೆತ, 5 ಬೌಂಡರಿ) ಉಪಯುಕ್ತ ಆಟದ ಫಲವಾಗಿ ಭಾರತ ತಂಡ ಅಜೇಯವಾಗಿ ಫೈನಲ್ ಪ್ರವೇಶಿಸಿದ್ದು, ಈ ಮೂಲಕ 2023ರ ಏಕದಿನ ವಿಶ್ವಕಪ್​ ಫೈನಲ್​ ಸೋಲಿನ ಸೇಡನ್ನು ತೀರಿಸಿಕೊಂಡಿದೆ.

ಆಸ್ಟ್ರೇಲಿಯಾ ನೀಡಿದ 265 ರನ್​ ಗುರಿ ಬೆನ್ನತ್ತಿದ್ದ ಭಾರತ ತಂಡವು ವಿರಾಟ್ ಕೊಹ್ಲಿ (84 ರನ್, 98 ಎಸೆತ, 5 ಬೌಂಡರಿ), ಶ್ರೇಯಸ್ ಅಯ್ಯರ್ (42 ರನ್, 62 ಎಸೆತ, 3 ಬೌಂಡರಿ), ಕೆ.ಎಲ್. ರಾಹುಲ್ (42 ರನ್*, 34 ಎಸೆತ, 2 ಬೌಂಡರಿ, 2 ಸಿಕ್ಸರ್​) ಉಪಯುಕ್ತ ಆಟದ ಫಲವಾಗಿ 48.1 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 267 ರನ್​ಗಳಿಸಿ ಗೆಲುವಿನ ನಗೆ ಬೀರಿತು. ಪ್ರಮುಖವಾಗಿ ವಿರಾಟ್ ಕೊಹ್ಲಿ ಆಟಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ವಿರಾಟ್​ರನ್ನು ಪಾಕಿಸ್ತಾನದ ಆಟಗಾರನಿಗೆ ಹೋಲಿಕೆ ಮಾಡಿ ಮಾತನಾಡಿದ್ದಾರೆ.

ಸ್ಟಾರ್​ ಸ್ಪೋರ್ಟ್ಸ್​​ನ ಡ್ರೆಸ್ಸಿಂಗ್ ರೂಮ್ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿರುವ ರವಿಶಾಸ್ತ್ರಿ, ವಿರಾಟ್ ವಿಕೆಟ್​ಗಳ ನಡುವೆ ಓಡುತ್ತಾ ಆಟದ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸುವುದನ್ನು ನೋಡಿದಾಗ ನನಗೆ ಕೆಲವು ಶ್ರೇಷ್ಠ ಆಟಗಾರರು ನೆನಪಾಗುತ್ತಾರೆ. ಆಟದ ವಿಚಾರದಲ್ಲಿ ಆತ ಅತ್ಯುತ್ತಮ ಸಾಮರ್ಥ್ಯವನ್ನು ಹೊಂದಿದ್ದು, ಆತನ ಆಟ ನೋಡಿದಾಗಗ ನನಗೆ ಜಾವೇದ್​ ಮಿಯಾಂದಾದ್​ಅವರ ಮ್ಯಾಚ್​ ವಿನ್ನಿಂಗ್ ಇನ್ನಿಂಗ್ಸ್ ನೋಡಿದಂತಾಯಿತು.

ಕೆಲವೇ ಕೆಲವು ಬೌಂಡರಿಗಳು, ವಿಕೆಟ್​ಗಳ ನಡುವಿನ ಓಟ, ನಾನ್-ಸ್ಟ್ರೈಕರ್‌ನ ಒತ್ತಡವನ್ನು ಕಡಿಮೆ ಮಾಡುತ್ತದೆ. ಆತ ಸ್ಕೋರ್‌ಬೋರ್ಡ್ ನಿಶ್ಚಲವಾಗಿರಲು ಬಿಡುವುದಿಲ್ಲ ಮತ್ತು ಅತ್ಯುತ್ತಮವಾಗಿದ್ದಾಗ, ಕೆಲವೇ ಬೌಂಡರಿಗಳು ಮತ್ತು ಸಿಕ್ಸರ್‌ಗಳು, ವಿಕೆಟ್‌ಗಳ ನಡುವೆ ಅದ್ಭುತ ಓಟವನ್ನು ನೋಡಬಹುದಾಗಿದೆ. ಆತ ಆಟದ ಯೋಜನೆಯನ್ನು ಹೊಂದಿದ್ದಾರೆಂದು ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net