ರಾಷ್ಟ್ರೀಯ ಕ್ಲಾಸಿಕ್ ಪವರ್ ಲಿಫ್ಟಿಂಗ್​ನಲ್ಲಿ ಹೊಸ ದಾಖಲೆ ಬರೆದು ಚಿನ್ನದ ಪದಕಕ್ಕೆ ಮುತ್ತಿಟ್ಟ ಕನ್ನಡಿಗ

Weightlifting
Published on

ಅಮೃತಸರ: ಪಂಜಾಬ್​ನ ಫಾಗ್ವಾರನಲ್ಲಿ ನಡೆದ ರಾಷ್ಟ್ರೀಯ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್​ಶಿಪ್​ನಲ್ಲಿ ಕನ್ನಡಿಗ ವಿಶ್ವನಾಥ್ ಭಾಸ್ಕರ್ ಗಾಣಿಗ ನೂತನ ರಾಷ್ಟ್ರೀಯ ದಾಖಲೆ ಮಾಡುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪಂಜಾಬ್​ನ ಫಾಗ್ವಾರನಲ್ಲಿ ನಡೆದ ರಾಷ್ಟ್ರೀಯ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್​ಶಿಪ್ 2025ರಲ್ಲಿ ಕುಂದಾಪುರದ ವಿಶ್ವನಾಥ ಭಾಸ್ಕರ್ ಗಾಣಿಗ ಇವರು ಡೆಡ್ ಲಿಫ್ಟ್​ನಲ್ಲಿ 318 ಕೆಜಿ ಭಾರಎತ್ತಿ ನೂತನ ರಾಷ್ಟ್ರೀಯ ದಾಖಲೆ ಮಾಡಿ ಡೆಡ್ ಲಿಫ್ಟ್ ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

105kg ದೇಹತೂಕ ಸೀನಿಯರ್ ವಿಭಾಗದಲ್ಲಿ ಕರ್ನಾಟಕ ತಂಡ ವನ್ನು ಪ್ರತಿನಿಧಿಸಿ ಇವರು 730.5 kg ಭಾರ ಎತ್ತಿ ಕಂಚಿನ ಪದಕ ಪಡೆದಿರುತ್ತಾರೆ. ಕುಂದಾಪುರದ ಬಾಳಿಕೆರೆ ಗ್ರಾಮದ ಇವರು ಬೆಂಗಳೂರಿನ ಬಾಲಾರ್ಕ ಫಿಟ್ನೆಸ್ ಸೆಂಟರ್​​ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net