More

    ದೇವಸ್ಥಾನಕ್ಕೆ ಹೋಗಿ ಸಖತ್​ ಟ್ರೋಲ್​ಗೊಳಗಾದ ಅಜಯ್​ ದೇವಗನ್​ ಮಗಳು

    ಮುಂಬೈ: ಅಜಯ್​ ದೇವಗನ್​ ಮತ್ತು ಕಾಜೋಲ್​ ಮಗಳು ನ್ಯಾಸಾ ಚಿತ್ರರಂಗಕ್ಕೆ ಇನ್ನೂ ಎಂಟ್ರಿ ಕೊಟ್ಟಿಲ್ಲ. ಆಗಲೇ ದೊಡ್ಡ ಸೆಲೆಬ್ರಿಟಿಯಾಗಿದ್ದಾರೆ. ಅದಕ್ಕೆ ಕಾರಣ, ಈ ಸ್ಟಾರ್​ ಪುತ್ರಿ ಯಾವಾಗಲೂ ಸ್ನೇಹಿತರ ಜತೆಗೆ ಪಾರ್ಟಿಗಳಲ್ಲಿ ತುಂಡುಡುಗೆಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೇ ವಿಷಯವಾಗಿ ಆಗಾಗ ಟ್ರೋಲ್​ ಆಗುತ್ತಿರುತ್ತಾರೆ. ಈಗ ಆಕೆ ಇನ್ನೊಮ್ಮೆ ಸಖತ್​ ಟ್ರೋಲ್​ ಆಗಿದ್ದಾರೆ. ಆದರೆ, ಈ ಬಾರಿ ಆಗಿದ್ದು ಪಾರ್ಟಿ ಮಾಡಿದ್ದಕ್ಕಲ್ಲ, ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಕ್ಕೆ. ತುಂಡುಡುಗೆ ತೊಟ್ಟಿದ್ದಕ್ಕಲ್ಲ, ಮೈ ತುಂಬಾ ಬಟ್ಟೆ ಹಾಕಿಕೊಂಡಿದ್ದಿಕ್ಕೆ.

    ಇದನ್ನೂ ಓದಿ: ಬ್ಯಾಂಡೇಜ್​ ಹಾಕಿಕೊಂಡೇ ಚಿತ್ರೀಕರಣಕ್ಕೆ ವಾಪಸ್ಸಾದ ರೋಹಿತ್​ ಶೆಟ್ಟಿ …

    ಆಶ್ಚರ್ಯವಾಗಬಹುದು. ಆದರೂ ಇದು ನಿಜ, ಇತ್ತೀಚೆಗೆ ನ್ಯಾಸಾ ತನ್ನಮ್ಮ ಕಾಜೋಲ್​ ಜತೆಗೆ ಮುಂಬೈನ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಹೋಗಿದ್ದಾರೆ. ಬಿಳಿ ಚೂಡಿಧಾರ್ ತೊಟ್ಟಿದ್ದ ನ್ಯಾಸಾ, ಕೈಯಲ್ಲಿ ತಟ್ಟೆ ಹಿಡಿದುಕೊಂಡಿದ್ದಾರೆ. ಯಾವಾಗ ಈ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಕಾಣಿಸಿಕೊಂಡವೋ, ಅಲ್ಲಿಂದ ಟ್ರೋಲಿಂಗ್​ ಶುರುವಾಗಿದೆ.

    ‘ಈ ದೊಡ್ಡ ಜನ ಬರೀ ಪಬ್​ಗೆ ಹೋಗುತ್ತಾರೆ ಅಂತಂದುಕೊಂಡಿದ್ದೆ, ಆದರೆ ಇವರು ದೇವಸ್ಥಾನಕ್ಕೂ ಹೋಗುತ್ತಾರೆ’ ಎಂದು ಒಬ್ಬರು ಬರೆದರೆ, ಇನ್ನೂ ಕೆಲವರು ಇದೊಂದು ಪಬ್ಲಿಸಿಟಿ ಸ್ಟಂಟ್​ ಎಂದು ಕರೆದಿದ್ದಾರೆ. ಇನ್ನೊಂದಿಷ್ಟು ಜನ್, ನ್ಯಾಸಾ ಮೈ ತುಂಬಾ ಬಟ್ಟೆ ಹಾಕಿರುವುದರಿಂದ ಗುರುತೇ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ಹೀಗೆ ಒಬ್ಬೊಬ್ಬರು ತಮ್ಮ ಮನ ಬಂದಂತೆ ಫೋಟೋಗಳಿಗೆ ಕಾಮೆಂಟ್​ ಹಾಕಿದ್ದಾರೆ.

    ಇದನ್ನೂ ಓದಿ: ‘ಪಠಾಣ್​’ ಚಿತ್ರಕ್ಕೆ ಎರಡು ಟ್ರೈಲರ್​? ಒಂದರಲ್ಲಿ ಸಲ್ಮಾನ್​, ಇನ್ನೊಂದರಲ್ಲಿ ಇಲ್ಲ …

    20 ವಯಸ್ಸಿನ ನ್ಯಾಸಾ, ಸಿಂಗಾಪೂರ್​ನಲ್ಲಿ ಒದುತ್ತಿದ್ದು, ಓದು ಮುಗಿದ ನಂತರ ಬಾಲಿವುಡ್​ಗೆ ಎಂಟ್ರಿ ಕೊಡಬಹುದು ಎಂಬ ಸುದ್ದಿ ಇದೆ. ಈ ಕುರಿತು ಮಾಧ್ಯಮದವರು ಅಜಯ್​ ದೇವಗನ್​ಗೆ ಕೇಳಿದಾಗ, ‘ಅವಳಿಗೆ ಈ ಲೈನ್​ನಲ್ಲಿ ಆಸಕ್ತಿ ಇಲ್ಲ. ಚಿತ್ರರಂಗಕ್ಕೆ ಬರುವ ಆಸೆಯನ್ನು ಯಾವತ್ತೂ ವ್ಯಕ್ತಪಡಿಸಿಲ್ಲ. ಓದು ಮುಗಿದ ಮೇಲೆ ಮುಂದಿನ ಮಾತು’ ಎಂದು ಹೇಳಿದ್ದರು.

    ತನ್ನನ್ನು ದ್ವೇಷಿಸುವವರಿಗೆ ರಶ್ಮಿಕಾ ಹೇಳೋದೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts