ಬ್ಯಾಂಡೇಜ್​ ಹಾಕಿಕೊಂಡೇ ಚಿತ್ರೀಕರಣಕ್ಕೆ ವಾಪಸ್ಸಾದ ರೋಹಿತ್​ ಶೆಟ್ಟಿ …

Rohit Shetty
Published on

ಹೈದರಾಬಾದ್​: ಸಾಮಾನ್ಯವಾಗಿ ಆಕ್ಷನ್​ ದೃಶ್ಯಗಳ ಚಿತ್ರೀಕರಣದಲ್ಲಿ ನಟ-ನಟಿಯರಿಗೆ, ಸ್ಟಂಟ್​ಮ್ಯಾನ್​ಗಳಿಗೆ ಗಾಯಗಳಾಗೋದು ಸಹಜ. ಚಿತ್ರದ ನಿರ್ದೇಶಕರಿಗೆ ಗಾಯಗಳಾಗಿದ್ದು ಬಹಳ ಕಡಿಮೆಯೇ. ಅಂಥದ್ದೊಂದು ಹೆಗ್ಗಳಿಗಕೆಗೆ ರೋಹಿತ್​ ಶೆಟ್ಟಿ ಪಾತ್ರರಾಗಿದ್ದು, ಶೂಟಿಂಗ್​ ವೇಳೆ ಅವರ ಕೈಗೆ ಏಟು ಬಿದ್ದಿದೆ. ಅಷ್ಟೇ ಅಲ್ಲ, ಕೈಗೆ ಹೊಲಿಗೆ ಹಾಕಿಸಿಕೊಂಡು, ಬ್ಯಾಂಡೇಜ್​ ಸುತ್ತಿಕೊಂಡೇ ಅವರು ಚಿತ್ರೀಕರಣಕ್ಕೆ ವಾಪಸ್ಸಾಗಿರುವುದು ವಿಶೇಷ.

'ಸಿಂಗಂ', 'ಸಿಂಬಾ', "ಸೂರ್ಯವಂಶಿ' ಮುಂತಾದ ಹೈವೋಲ್ಟೇಜ್​ ಆಕ್ಷನ್​ ಚಿತ್ರಗಳಿಗೆ ಹೆಸರುವಾಸಿಯಾಗಿರುವ ರೋಹಿತ್​, ಶನಿವಾರ ಮಧ್ಯಾಹ್ನ ಹೈದರಾಬಾದ್​ನ ರಾಮೋಜಿ ಫಿಲಂಸಿಟಿಯಲ್ಲಿ ರೋಹಿತ್​ ಶೆಟ್ಟಿ 'ಇಂಡಿಯನ್​ ಪೊಲೀಸ್​ ಫೋರ್ಸ್​' ವೆಬ್​ಸೀರೀಸ್​ಗೆ ಚಿತ್ರೀಕರಣ ಮಾಡುತ್ತಿದ್ದರು. ಹೆಸರೇ ಹೇಳುವಂತೆ ಪೊಲೀಸರ ಸಾಹಸಗಳನ್ನು ದಾಖಲಿಸುವ ಈ ವೆಬ್​ಸರಣಿಯಲ್ಲಿ ಸಾಕಷ್ಟು ಸಾಹಸಮಯ ದೃಶ್ಯಗಳಿವೆತಂತೆ. ಈ ಸಂದರ್ಭದಲ್ಲಿ ಕಾರ್​ ಚೇಸ್​ ಚಿತ್ರೀಕರಣ ಮಾಡುವಾಗ, ರೋಹಿತ್​ ಕೈಗೆ ಪೆಟ್ಟುಬಿದ್ದಿದೆ.

ತಕ್ಷಣ ಚಿತ್ರೀಕರಣ ಸ್ಥಗಿತಗೊಳಿಸಿ, ಚಿತ್ರತಂಡದವರು ಅವರನ್ನು ಕಾಮಿನೇನಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ವೈದ್ಯರು ರೋಹಿತ್​ ಕೈಗೆ ಹೊಲಿಗೆ ಹಾಕಿದ್ದು, ಕೆಲ ಹೊತ್ತು ವೀಕ್ಷಣೆಯಲ್ಲಿಟ್ಟು ನಂತರ ಡಿಸ್ಚಾರ್ಜ್​ ಮಾಡಿದ್ದಾರೆ. ರೋಹಿತ್​ ಶೆಟ್ಟಿ ಕೈಗೆ ಬ್ಯಾಂಡೇಜ್​ ಹಾಕಿಕೊಂಡು ಮತ್ತೆ ಚಿತ್ರೀಕರಣಕ್ಕೆ ಮರಳಿದ್ದು, ಸದ್ಯ ಫೋಟೋ ವೈರಲ್​ ಆಗಿದೆ.

ಅಮೇಜಾನ್​ಗಾಗಿ ತಯಾರಾಗುತ್ತಿರುವ ಈ ವೆಬ್​ ಸರಣಿಯ ಚಿತ್ರೀಕರಣ ಕಳೆದ ವರ್ಷವೇ ಪ್ರಾರಂಭವಾಗಿತ್ತು. ಸಿದ್ಧಾರ್ಥ್​ ಮಲ್ಹೋತ್ರಾ, ವಿವೇಕ್​ ಓಬೆರಾಯ್​, ರಿತೇಶ್​ ದೇಶ್​ಮುಖ್​, ಶಿಲ್ಪಾ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ 'ಇಂಡಿಯನ್​ ಪೊಲೀಸ್​ ಫೋರ್ಸ್​' ಈ ವರ್ಷದಿಂದ ಸ್ಟ್ರೀಮ್​ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net