ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು ಅವನ ಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿಸುತ್ತದೆ. ಅಲ್ಲದೆ, ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಪ್ರಮುಖ ಅಂಶಗಳ ಬಗ್ಗೆ ಮುನ್ಸೂಚನೆ ಸಹ ನೀಡುತ್ತದೆ. ಸಂಖ್ಯಾಶಾಸ್ತ್ರವನ್ನು ರಾಡಿಕ್ಸ್ ಸಂಖ್ಯೆಗಳ ಆಧಾರದ ಮೇಲೆ ಹೇಳಲಾಗುತ್ತದೆ.
ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಮೊತ್ತವನ್ನು ರಾಡಿಕ್ಸ್ ಸಂಖ್ಯೆ ಅಥವಾ ಮೂಲಾಂಕ ಎಂದು ಕರೆಯಲಾಗುತ್ತದೆ. ರಾಶಿಗಳಂತೆ ರಾಡಿಕ್ಸ್ ಸಂಖ್ಯೆಗಳು ಕೂಡ ಗ್ರಹಗಳೊಂದಿಗೆ ಸಂಬಂಧ ಹೊಂದಿವೆ. ಸಂಖ್ಯಾಶಾಸ್ತ್ರದಲ್ಲಿ 01 ರಿಂದ 09ರವರೆಗಿನ ಸಂಖ್ಯೆಗಳನ್ನು ರಾಡಿಕ್ಸ್ ಸಂಖ್ಯೆಗಳು ಎಂದು ಹೇಳಲಾಗುತ್ತದೆ. ಈ ಒಂಬತ್ತು ರಾಡಿಕ್ಸ್ ಸಂಖ್ಯೆಗಳು ಕೂಡ ನವಗ್ರಹಗಳಲ್ಲಿ ಒಂದೊಂದು ಗ್ರಹಗಳಿಗೆ ಸೀಮಿತವಾಗಿವೆ.
ಸಂಖ್ಯಾಶಾಸ್ತ್ರದ ಪ್ರಕಾರ, ಈ ನಿರ್ದಿಷ್ಟ ದಿನಾಂಕದಂದು ಜನಿಸಿದ ಜನರು ನಿಜ ಜೀವನದಲ್ಲಿಯೂ ರಾಜರಾಗಿರುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾದ್ರೆ ಆ ದಿನಾಂಕ ಯಾವುದು? ಅವರ ಗುಣಗಳೇನು? ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಸಂಖ್ಯೆ 1
* 12 ತಿಂಗಳುಗಳಲ್ಲಿ ದಿನಾಂಕ 1, 10, 19, 28 ರಂದು ಜನಿಸಿದವರ ರಾಡಿಕ್ಸ್ ಸಂಖ್ಯೆ 1 ಆಗಿರುತ್ತದೆ. ಈ ದಿನಾಂಕದಂದು ಜನಿಸಿದವರು ಬಲವಾದ ಪ್ರಜ್ಞೆ, ನಾಯಕತ್ವ ಕೌಶಲ್ಯ ಮತ್ತು ಸಾಧಿಸುವ ಬಯಕೆಯಂತಹ ಗುಣಲಕ್ಷಣಗಳನ್ನು ಹೊಂದಿರುತ್ತಾರೆ.
* ಯಾವಾಗಲೂ ವ್ಯಾಪಾರ ಉದ್ಯಮಗಳಲ್ಲಿ ಯಶಸ್ಸನ್ನು ಹೊಂದಿರುತ್ತಾರೆ. ಸಂಖ್ಯೆ 1ರ ಅಡಿಯಲ್ಲಿ ಜನಿಸಿದ ಜನರು ಯಾವುದೇ ವಿಷಯವನ್ನು ಪ್ರಾರಂಭಿಸಲು ಮತ್ತು ಮುಗಿಸಲು ಬಲವಾದ ಇಚ್ಛೆಯನ್ನು ಹೊಂದಿರುತ್ತಾರೆ ಮತ್ತು ಅಂದುಕೊಂಡಿದ್ದನ್ನು ಸಾಧಿಸುವ ಸಾಮರ್ಥ್ಯ ಹೊಂದಿರುತ್ತಾರೆ.
* ಯಾವುದೇ ಸಮಸ್ಯೆಗಳು ಎದುರಾದರೆ ಯಾರಿಗೂ ಹಾನಿಯಾಗದಂತೆ ಪರಿಹರಿಸುತ್ತಾರೆ. ಅಲ್ಲದೆ ವ್ಯಾಪಾರ, ನಿರ್ವಹಣೆ, ರಾಜಕೀಯ, ಸ್ವಯಂ ಉದ್ಯೋಗ ಸೇರಿದಂತೆ ಎಲ್ಲದರಲ್ಲೂ ಯಶಸ್ವಿಯಾಗಲು ಪ್ರಯತ್ನಿಸುತ್ತಾರೆ. ತಮ್ಮ ಸ್ವಾತಂತ್ರ್ಯಕ್ಕಾಗಿ ಸದಾ ಹೋರಾಡುತ್ತಾರೆ. ಅಲ್ಲದೆ, ತಮ್ಮ ಗುರಿಗಳನ್ನು ಅನುಸರಿಸಲು ಪ್ರೋತ್ಸಾಹಿಸುವ ಸರಿಯಾದ ಪಾಲುದಾರನನ್ನು ಜೀವನದಲ್ಲಿ ಆಯ್ಕೆ ಮಾಡಿಕೊಳ್ಳುತ್ತಾರೆ.
* ಈ ದಿನಾಂಕದಂದು ಜನಿಸಿದ ಜನರು ಶಕ್ತಿಯುತ ಮತ್ತು ಬಲಶಾಲಿಯಾಗಿರುತ್ತಾರೆ ಆದರೆ, ಕೆಲವೊಮ್ಮೆ ಸ್ವಾರ್ಥಿಗಳಾಗಿರಬಹುದು. ಇದರಿಂದಾಗಿ ಸಂಬಂಧಗಳಲ್ಲಿ ಬಿರುಕು ಮೂಡುತ್ತದೆ.
* ಈ ದಿನಾಂಕದಂದು ಜನಿಸಿದ ಜನರು ಸಾಧನೆಯ ಹೆಚ್ಚಿನ ಅವಕಾಶಗಳನ್ನು ಹೊಂದಿರುತ್ತಾರೆ. ಆದರೂ, ಕೆಲವೊಮ್ಮೆ ತುಂಬಾ ಕಷ್ಟಕರವಾದ ಜೀವನವನ್ನು ನಡೆಸುತ್ತಾರೆ.
* ತಮ್ಮ ಶ್ರಮ ಮತ್ತು ಬುದ್ಧಿವಂತಿಕೆಯ ಆಧಾರದ ಮೇಲೆ ಅವರು ಅಪಾರ ಸಂಪತ್ತು ಮತ್ತು ಖ್ಯಾತಿಯನ್ನು ಗಳಿಸುತ್ತಾರೆ.
* ರಾಡಿಕ್ಸ್ 1 ರ ಆಡಳಿತ ಗ್ರಹ ಸೂರ್ಯ. ಈ ಗ್ರಹ ಜ್ಞಾನ, ಬುದ್ಧಿವಂತಿಕೆ ಮತ್ತು ದೂರದೃಷ್ಟಿಯನ್ನು ನಿಯಂತ್ರಿಸುತ್ತದೆ. ಇದಕ್ಕಾಗಿಯೇ ಸಂಖ್ಯೆ 1 ಹೊಂದಿರುವ ಜನರು ಬುದ್ಧಿವಂತರಾಗಿರುತ್ತಾರೆ. ಸದಾ ಆತ್ಮವಿಶ್ವಾಸದಿಂದ ಕೂಡಿರುತ್ತಾರೆ ಮತ್ತು ಹೊಸ ಆಲೋಚನೆಗಳನ್ನು ರಚಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಹೀಗಾಗಿ ಇವರ ಭವಿಷ್ಯ ಉಜ್ವಲವಾಗಿರುತ್ತದೆ.
ವಿಶೇಷ ಸೂಚನೆ: ಮೇಲೆ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ ಹೊರತು ಇದನ್ನು ವಿಜಯವಾಣಿ ಖಚಿತಪಡಿಸುವುದಿಲ್ಲ.
ಮಗಳ ತಲೆಯ ಮೇಲೆ ಸಿಸಿಟಿವಿ ಕ್ಯಾಮೆರಾ ಇಟ್ಟ ತಂದೆ! ಕಾರಣ ಕೇಳಿದರೆ ನೀವು ಬೆರಗಾಗೋದು ಖಚಿತ
ಬುಕ್ಕಿಂಗ್ ರದ್ದು ಮಾಡಿದ್ದಕ್ಕೆ ಯುವತಿ ಮೇಲೆ ಹಲ್ಲೆ: ಜಾಮೀನಿಗಾಗಿ ಹಣ ಹೊಂದಿಸಲು ಆಟೋ ಚಾಲಕನ ಪರದಾಟ