ಇಸ್ಲಮಾಬಾದ್: ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ವಿಡಿಯೋಗಳು ಪೋಸ್ಟ್ ಆಗುತ್ತಲೇ ಇರುತ್ತವೆ. ಆದರೆ, ಕೆಲವೇ ಕೆಲವು ವಿಡಿಯೋಗಳು ವಿಶೇಷ ಕಾರಣಕ್ಕೆ ಕ್ಷಣಾರ್ಧದಲ್ಲಿ ವೈರಲ್ ಆಗಿಬಿಡುತ್ತವೆ. ಅಂಥದ್ದೇ ವಿಡಿಯೋವೊಂದು ಇದೀಗ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಸದ್ಯ ವೈರಲ್ ಆಗಿರುವ ವಿಡಿಯೋ ಪಾಕಿಸ್ತಾನಕ್ಕೆ ಸಂಬಂಧಿಸಿದೆ. ವಿಡಿಯೋದಲ್ಲಿ ಯುವತಿಯೊಬ್ಬಳು ತನ್ನ ತಲೆಯ ಮೇಲೆ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿಕೊಂಡಿದ್ದಾಳೆ. ಈ ಸಿಸಿಟಿವಿ ಕ್ಯಾಮೆರಾ ಮೂಲಕ ತನ್ನ ತಂದೆ ದಿನದ 24 ಗಂಟೆಯೂ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ವಿಡಿಯೋದಲ್ಲಿ ಯುವತಿ ಹೇಳಿದ್ದಾಳೆ.
ತಂದೆಯ ಈ ನಿರ್ಧಾರಕ್ಕೆ ಏನಾದರೂ ಆಕ್ಷೇಪವಿದೆಯೇ ಎಂದು ಪ್ರಶ್ನಿಸಿದಾಗ, ತನ್ನ ತಂದೆ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವನ್ನು ಸಂಪೂರ್ಣವಾಗಿ ಒಪ್ಪುತ್ತೇನೆ ಎಂದು ಉತ್ತರಿಸಿದ್ದಾಳೆ. ಇತ್ತೀಚೆಗೆ ಕರಾಚಿಯಲ್ಲಿ ಪ್ರಭಾವಿ ಮಹಿಳೆಯೊಬ್ಬಳ ಹಿಟ್ ಅಂಡ್ ರನ್ ಪ್ರಕರಣದಿಂದಾಗಿ ತನ್ನ ತಂದೆ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಯುವತಿ ಹೇಳಿದ್ದಾಳೆ. ಯಾರಾದರೂ ಅಪಘಾತದಲ್ಲಿ ನನ್ನನ್ನು ಕೊಂದರೆ, ಕನಿಷ್ಠ ಸಾಕ್ಷಿ ಇರುತ್ತದೆ ಎಂದು ಆಕೆ ತಿಳಿಸಿದ್ದಾಳೆ.
ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನದ ಜನರು, ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ಯುವತಿ ಈ ರೀತಿಯಾಗಿ ಪ್ರತಿಭಟನೆ ಮಾಡುತ್ತಿದ್ದಾಳೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದೊಂದು ತಮಾಷೆಯ ವಿಡಿಯೋ ಎಂದು ಹೇಳುತ್ತಿದ್ದಾರೆ.
next level security pic.twitter.com/PpkJK4cglh
— Dr Gill (@ikpsgill1) September 6, 2024
ಇತ್ತೀಚೆಗೆ ಕರಾಚಿಯಲ್ಲಿ ನಡೆದ ಹಿಟ್ ಅಂಡ್ ರನ್ ಪ್ರಕರಣ ಪಾಕಿಸ್ತಾನದಲ್ಲಿ ಭಾರಿ ಸುದ್ದಿಯಾಗಿತ್ತು. ಇದರಲ್ಲಿ ಪ್ರಭಾವಿ ಮಹಿಳೆಯೊಬ್ಬಳು ಅತಿವೇಗದಲ್ಲಿ ಎಸ್ಯುವಿ ಕಾರು ಚಲಾಯಿಸಿ ಇಬ್ಬರನ್ನು ಕೊಂದಿದ್ದಳು. ಅಲ್ಲದೆ, ಇತರ ಮೂವರು ಗಾಯಗೊಂಡಿದ್ದರು. ಈ ಘಟನೆಯ ಬೆನ್ನಲ್ಲೇ ಆರೋಪಿ ಮಹಿಳೆಗೆ ನ್ಯಾಯಾಲಯ ಜಾಮೀನು ಸಹ ನೀಡಿತು. ಹೀಗಾಗಿ ಇದನ್ನು ಖಂಡಿಸಿ ಪಾಕಿಸ್ತಾನದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆಯುತ್ತಿವೆ. ನ್ಯಾಯಾಲಯದ ನಿರ್ಧಾರವನ್ನು ವಿಡಿಯೋ ಮೂಲಕ ಅಪಹಾಸ್ಯ ಮಾಡಲಾಗಿದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)
ಹುಟ್ಟುಹಬ್ಬದಂದು ಹಸೆಮಣೆ ಏರಲು ಸಜ್ಜಾದ ಸ್ಯಾಂಡಲ್ವುಡ್ ಕ್ವೀನ್!? ರಮ್ಯಾ ಕೈಹಿಡಿಯುವ ವರನ್ಯಾರು ಗೊತ್ತೇ?
ಲೈಂಗಿಕ ಬಯಕೆ ಈಡೇರಿಸಲು ಕರೆದವರಿಗೆ… ಸರ್ಕಾರದ ಮುಂದೆ ವಿಶೇಷ ಬೇಡಿಕೆ ಇಟ್ಟ ನಟಿ ಹನಿ ರೋಸ್
ದಿನಕ್ಕೆ 8 ಗಂಟೆ ನಿದ್ರಿಸಿ 10 ಲಕ್ಷ ರೂ. ಸಂಪಾದಿಸಿ! ಇಲ್ಲಿದೆ ಭರ್ಜರಿ ಆಫರ್, ಅರ್ಜಿ ಸಲ್ಲಿಸುವುದು ಹೇಗೆ?