ಹೈದರಾಬಾದ್: ಟಾಲಿವುಡ್ ಮಾತ್ರವಲ್ಲ, ಇಡೀ ವಿಶ್ವವೇ ತಮ್ಮತ್ತ ತಿರುಗಿ ನೋಡುವಂತೆ ಚಿತ್ರರಂಗದಲ್ಲಿ ಮಿಂಚುತ್ತಿರುವ ಸ್ಟಾರ್ ಹೀರೋಗಳು ಪ್ರಭಾಸ್ ಮತ್ತು ಎನ್ ಟಿಆರ್. ಸತತ ಪ್ಯಾನ್-ಇಂಡಿಯನ್ ಪ್ರಾಜೆಕ್ಟ್‌ಗಳೊಂದಿಗೆ ಸದ್ದು ಮಾಡುತ್ತಿರುವ ಈ ನಟರ ನಡುವೆ ಈಗ ಬಾಕ್ಸ್ ಆಫೀಸ್ ವಾರ್ ಶುರುವಾಗಿದೆ. ಒಂದೇ ವಾರದಲ್ಲಿ ಇಬ್ಬರೂ ತಮ್ಮ ತಮ್ಮ ಸಿನಿಮಾವನ್ನು ತೆರೆಗೆ ತರಲು ಸಜ್ಜಾಗಿರುವುದು ಇಂತಹದ್ದೊಂದು ಅನುಮಾನ ಹಿಟ್ಟುಹಾಕಿದೆ.
ಇದನ್ನೂ ಓದಿ: ‘ಬರ್ತ್ ಡೇ ಪಾರ್ಟಿಗೆ ಹೋದರೆ, ರೇವ್ ಪಾರ್ಟಿ ಅಂತ’..ಮೀಡಿಯಾ ಮೇಲೆ ಗೂಬೆ ಕೂರಿಸಿದ ಹೇಮಾ!
ಮಾರುತಿ ನಿರ್ದೇಶನದಲ್ಲಿ ಪ್ರಭಾಸ್ ಅವರ ರಾಜಸಾಬ್ ಚಿತ್ರ ಮುಂದಿನ ಬೇಸಿಗೆಯಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಪ್ರಭಾಸ್ ಮೊದಲ ಬಾರಿಗೆ ಹಾರರ್ ಕಾಮಿಡಿ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ನಂತರ ಹನು ರಾಘವಪುಡಿ ನಿರ್ದೇಶನದಲ್ಲಿ ಮತ್ತೊಂದು ಅದ್ಧೂರಿ ಪ್ರಾಜೆಕ್ಟ್ ನಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಫೌಜಿ ಸಿನಿಮಾ ಕೂಡ ಸದ್ಯದಲ್ಲೇ ಸೆಟ್ಟೇರಲಿದೆ. ಎರಡನೇ ಮಹಾಯುದ್ಧದ ಹಿನ್ನೆಲೆಯಲ್ಲಿ ನಡೆಯುವ ಪ್ರೇಮಕಥೆಯೊಂದಿಗೆ ಈ ಸಿನಿಮಾ ಮೂಡಿಬರಲಿದೆ. ಈ ಸಿನಿಮಾದ ಜೊತೆಗೆ ಅನಿಮಲ್ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ನಿರ್ದೇಶನದಲ್ಲಿ ಪ್ರಭಾಸ್ ಅಭಿನಯದ ಸ್ಪಿರಿಟ್ ಸಿನಿಮಾ ಇದೇ ವರ್ಷವೇ ಶುರುವಾಗುವ ಸಾಧ್ಯತೆ ಇದೆ.
ಇನ್ನೊಂದೆಡೆ ಪ್ರಶಾಂತ್ ನೀಲ್, ಜೂನಿಯರ್ ಎನ್ ಟಿಆರ್ ಜೊತೆ ಪವರ್ ಫುಲ್ ಸಿನಿಮಾ ಮಾಡಲಿದ್ದಾರೆ. ಮಾಫಿಯಾ ಹಿನ್ನೆಲೆಯ ಡ್ರ್ಯಾಗನ್ ಚಿತ್ರ ಕಥೆಗಾಗಿ ನೀಲ್ ತುಂಬಾ ಸ್ಟ್ರಾಂಗ್ ಸ್ಕ್ರಿಪ್ಟ್ ಸಿದ್ಧಪಡಿಸುತ್ತಿದ್ದಾರೆ ಎನ್ನಲಾಗಿದೆ. ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಈ ಸಿನಿಮಾದಲ್ಲಿ ಎನ್ ಟಿಆರ್ ಪಾತ್ರ ತುಂಬಾ ವಿಭಿನ್ನವಾಗಿರಲಿದೆಯಂತೆ. ಈ ಸಿನಿಮಾ 2026 ರ ಜ.9ಕ್ಕೆ ಮೈತ್ರಿ ಮೂವಿ ಮೇಕರ್ಸ್ ಅದ್ಧೂರಿಯಾಗಿ ಬಿಡುಗಡೆ ಮಾಡಲಿದೆ. ಸಂಕ್ರಾಂತಿಗೆ ಈ ಚಿತ್ರ ಉಡುಗೊರೆಯಾಗಿ ಬರಲಿದೆ. ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.
ಇನ್ನು 2026ರ ಸಂಕ್ರಾಂತಿಯಂದು ಪ್ರಭಾಸ್ ಅಭಿನಯದ ಸ್ಪಿರಿಟ್ ಹಾಗೂ ಡ್ರ್ಯಾಗನ್ ನಡುವೆ ಬಾಕ್ಸ್ ಆಫೀಸ್ನಲ್ಲಿ ಟಫ್ ಫೈಟ್ ನಡೆಯಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹಾಗಾಗಿ ಯಾರಾದರೂ ಹಿಂದೆ ಸರಿಯಬೇಕಾಗುತ್ತದೆ. ಇಲ್ಲವಾದರೆ ಎರಡೂ ಚಿತ್ರಗಳ ಮೇಲೆ ಕಲೆಕ್ಷನ್ ನಲ್ಲಿ ದುಷ್ಪರಿಣಾಮ ಬೀರುವುದು ಖಚಿತ ಎನ್ನುತ್ತಿವೆ ಇಂಡಸ್ಟ್ರಿ ಮೂಲಗಳು.