ಹೈದರಾಬಾದ್: ನಾಗ ಚೈತನ್ಯ ಮತ್ತು ಸೋಭಿತಾ ಧೂಳಿಪಾಲ ಜಾತಕ ಹೊಂದಾಣಿಕೆಯಾಗಿಲ್ಲ. 2027ರ ನಂತರ ಈ ದಂಪತಿ ಬೇರ್ಪಡಲೇಬೇಕು ಎಂದು ಇವರಿಬ್ಬರ ನಿಶ್ಚಿತಾರ್ಥದ ಮರುದಿನವೇ ವಿವಾದಿತ ಜ್ಯೋತಿಷಿ ವೇಣುಸ್ವಾಮಿ ಹೇಳಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ನಾಗಚೈತನ್ಯ ಅಭಿಮಾನಿಗಳು ವೇಣುಸ್ವಾಮಿಗೆ ಕೌಂಟರ್ ಕೊಡುತ್ತಿದ್ದಾರೆ. ಸದ್ಯ ಅಕ್ಕಿನೇನಿ ಅಭಿಮಾನಿಗಳು ನಾಗ ಚೈತನ್ಯ ಅವರ ಹಳೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದಾರೆ. ಇದರಲ್ಲಿ ನಿಮಗೆ ಜಾತಕದಲ್ಲಿ ನಂಬಿಕೆ ಇದೆಯಾ ಎಂಬ ರಾಣಾ ಅವರ ಪ್ರಶ್ನೆಗೆ ಚೈತನ್ಯ ಶಾಕಿಂಗ್ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿ ಜೊತೆ ಶಿಕ್ಷಕಿ ರೊಮ್ಯಾನ್ಸ್..ಕೊನೆಗೆ ಅತ್ಯಾಚಾರ ಪ್ರಕರಣ! ಯುವಕ ಏನಾದ ಗೊತ್ತಾ?
ಜಾತಕವನ್ನು ನಂಬುವುದು ಅಥವಾ ನಂಬದಿರುವುದು ನನ್ನ ಅನುಕೂಲದ ಮೇಲೆ ಅವಲಂಬಿತವಾಗಿದೆ. ಜಾತಕವು ಉತ್ತಮವಾಗಿದ್ದರೆ, ನಾನು ಅದನ್ನು ನಂಬುತ್ತೇನೆ, ಇಲ್ಲದಿದ್ದರೆ ನಾನು ನಿಜವಾಗಿಯೂ ಹೆದರುವುದಿಲ್ಲ ಎಂದು ನಾಗಚೈತನ್ಯ ಉತ್ತರಿಸಿದ್ದಾರೆ.
ನಾಗಚೈತನ್ಯ-ಶೋಭಿತಾ ದಾಂಪತ್ಯ ಜೀವನದ ಬಗ್ಗೆ ವೇಣುಸ್ವಾಮಿ ಹೇಳಿದ್ದಕ್ಕೆ ಕೌಂಟರ್ ಎಂಬಂತೆ ಅಕ್ಕಿನೇನಿ ಅಭಿಮಾನಿಗಳು ಈ ವಿಡಿಯೋವನ್ನು ಪೋಸ್ಟ್ ಮಾಡುತ್ತಿದ್ದಾರೆ. ಯಾರು ಏನೇ ಹೇಳಿದರೂ ನಾಗಚೈತನ್ಯ-ಶೋಭಿತಾ ತುಂಬಾ ಖುಷಿಯಾಗಿದ್ದಾರೆ ಎಂಬ ಕಮೆಂಟ್ ಗಳು ಬರುತ್ತಿವೆ. ಮದುವೆ ಶುಭವಾಗಬೇಕಾದರೆ ಇಂತಹ ಶಕುನಗಳು ಬೇಕು ಎಂದು ವೇಣುಸ್ವಾಮಿಯನ್ನು ಟೀಕಿಸುತ್ತಿದ್ದಾರೆ.
‘ಆ ಸ್ಟಾರ್ ಫುಟ್ಬಾಲ್ ಆಟಗಾರನಿಂದ ಖಾಸಗಿ ಸಂದೇಶ’: ರಹಸ್ಯ ಬಿಚ್ಚಿಟ್ಟ ಒಲಂಪಿಕ್ಸ್ ಬ್ಯೂಟಿ ಲುವಾನಾ!